ದಾವಣಗೆರೆ: ಕೋವಿಡ್​ ಬಿಕ್ಕಟ್ಟಿನ ಕಾಲದಲ್ಲಿ ಸದಾ ಕ್ಷೇತ್ರದ ಜನರ ಜೊತೆ ನಿಂತು ಧೈರ್ಯ ತುಂಬುತ್ತ ಕೊರೊನಾ ವಿರುದ್ಧದ ಹೋರಾಟದಲ್ಲಿ ತಮ್ಮ ಕ್ಷೇತ್ರದ ಜನತೆಗೆ ರಿಯಲ್​ ಹೀರೋ ಎನಿಸಿಕೊಂಡಿದ್ದಾರೆ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ ರೇಣುಕಾಚಾರ್ಯ.

ಕೊರೊನಾ ಕಾಲದಿಂದಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿರೋ ಶಾಸಕ ರೇಣುಕಾಚಾರ್ಯ ಅವರು, ಸ್ವತಃ ಆ್ಯಂಬುಲೆನ್ಸ್​ ಚಲಾಯಿಸಿದ್ದರು. ರಾಜಕೀಯ ಬೆಳವಣಿಗೆಗಳ ನಡುವೆಯೇ ಕೋವಿಡ್​ ಸೋಂಕಿತರ ಬೆನ್ನಗಿನಿಂತ ಶಾಸಕರು ಇಂದು ಸಹ ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ ಹೋಳಿಗೆ ತಯಾರಿ ಮಾಡಿದ್ದಾರೆ.

ಶಾಸಕ ರೇಣುಕಾಚಾರ್ಯ ಅವರಿಗೆ ಪತ್ನಿ ಸುಮಾ ಅವರು ಸಾಥ್ ನೀಡಿದ್ದು, ಸೋಂಕಿತರು ಹಾಗೂ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕು ಆಸ್ಪತ್ರೆ, ಲಸಿಕಾ ಕೇಂದ್ರ ಹಾಗೂ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಇಂದು ಹೊಳಿಗೆ ಊಟ ವ್ಯವಸ್ಥೆ ಮಾಡಿದ್ದಾರೆ. ಸುಮಾರು 5,000 ಸಾವಿರ ಜನರಿಗೆ ಹೋಳಿಗೆ ಊಟ ಏರ್ಪಡಿಸಲಾಗಿದ್ದು, ಸ್ವತಃ ಬಣಸಿಗಾಗಿ ದಂಪತಿ ಕ್ಷೇತ್ರದ ಗಮನ ಸೆಳೆದಿದ್ದಾರೆ.

ಕೋವಿಡ್​ ಸೆಂಟರ್​ಗಳಲ್ಲಿ ಕ್ಷೇತ್ರದ ಜನರ ಆರೋಗ್ಯ ವೃದ್ಧಿಯಾಗಲೆಂದು ಈ ಮಹಾಮಾರಿಂದ ಯಾವುದೇ ಅನಾಹುತವಾಗದಿರಲೆಂದು ಇತ್ತೀಚೆಗೆ ರೇಣುಕಾಚಾರ್ಯ ಹೋಮ ಹವನ ಕೂಡ ಮಾಡಿದ್ದರು. ಕಳೆದ ಎರಡು, ಮೂರು ತಿಂಗಳಿನಿಂದ ಕೊರೊನಾ ಸೋಂಕಿತರಿಗೆ ಇಡ್ಲಿ, ದೋಸೆ, ಮತ್ತು ಹೋಳಿಗೆಯಂತ ವಿಶೇಷ ಖಾದ್ಯಗಳನ್ನು ತಯಾರಿಸಿ ಎಷ್ಟೋ ಜನರಿಗೆ ತಲುಪಿಸಿದ್ದಾರೆ. ಈ ಮೂಲಕ ಆಡಳಿತಕ್ಕೂ ಸೈ, ಆರೈಕೆಗೂ ಸೈ ಎನಿಸಿಕೊಂಡಿದ್ದಾರೆ.

 

The post ಬಾಣಸಿಗರಾದ ಶಾಸಕ ರೇಣುಕಾಚಾರ್ಯ ದಂಪತಿ- 5 ಸಾವಿರ ಮಂದಿಗೆ ಹೊಳಿಗೆ ಊಟದ ವ್ಯವಸ್ಥೆ appeared first on News First Kannada.

Source: newsfirstlive.com

Source link