ಬಾತ್ ರೂಂ ಗೋಡೆಯಲ್ಲಿ ಸಿಕ್ತು 60 ವರ್ಷಗಳ ಹಿಂದಿನ ಮೆಕ್‌ಡೊನಾಲ್ಡ್‌ನ ಊಟದ ಪೊಟ್ಟಣ , ಫ್ರೆಂಚ್ ಫ್ರೈಸ್ ಇನ್ನೂ ಗರಿಗರಿಯಾಗಿಯೇ ಇತ್ತಂತೆ | A man in Illinois found a 60 year old McDonald’s meal in his bathroom wall during a renovation


ಬಾತ್ ರೂಂ ಗೋಡೆಯಲ್ಲಿ ಸಿಕ್ತು 60 ವರ್ಷಗಳ ಹಿಂದಿನ ಮೆಕ್‌ಡೊನಾಲ್ಡ್‌ನ ಊಟದ ಪೊಟ್ಟಣ , ಫ್ರೆಂಚ್ ಫ್ರೈಸ್ ಇನ್ನೂ ಗರಿಗರಿಯಾಗಿಯೇ ಇತ್ತಂತೆ

ಮೆಕ್‌ಡೊನಾಲ್ಡ್‌ನ ಊಟದ ಪೊಟ್ಟಣ

ಯುನೈಟೆಡ್ ಸ್ಟೇಟ್ಸ್‌ನ ಇಲಿನಾಯ್ಸ್‌ನಲ್ಲಿರುವ (Illinois) ವ್ಯಕ್ತಿಯೊಬ್ಬರ ಮನೆ ನವೀಕರಣದ ಸಮಯದಲ್ಲಿ ಅವರ ಸ್ನಾನಗೃಹದ ಗೋಡೆಯಲ್ಲಿ 60 ವರ್ಷ ಹಿಂದಿನ ಮೆಕ್‌ಡೊನಾಲ್ಡ್‌ನ ಮೀಲ್  (McDonald’s meal) ಬಾಕ್ಸ್ ಪತ್ತೆಯಾಗಿದೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ (Reddit) ಪೋಸ್ಟ್ ಮಾಡಿದ ವ್ಯಕ್ತಿ ಫಾಸ್ಟ್ ಫುಡ್‌ನ ಘಮ ತನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ಹೇಳಿದರು. ನ್ಯೂಯಾರ್ಕ್ ಪೋಸ್ಟ್‌ ವರದಿ ಪ್ರಕಾರ ರಾಬ್ ಎಂದು ಗುರುತಿಸಲಾದ ವ್ಯಕ್ತಿ, ಊಟವು “ಹಳೆಯ ಕಾಗದದಲ್ಲಿ ಸುತ್ತಿಕೊಂಡಿತ್ತು”, ಅರ್ಧ ಮುಗಿದ ಫ್ರೆಂಚ್ ಫ್ರೈಗಳ ಪ್ಯಾಕೆಟ್‌ ಕೂಡಾ ಇತ್ತು. ಐದು ದಿನಗಳ ಹಿಂದೆ ಪೋಸ್ಟ್ ಮಾಡಿದ ನಂತರ, ಈ ಪೋಸ್ಟ್ ಗೆ ರೆಡ್ಡಿಟ್‌ನಲ್ಲಿ 216 ಕಾಮೆಂಟ್‌ಗಳು ಬಂದಿದೆ. 1959 ರಿಂದ ತನ್ನ ಮನೆಯನ್ನು ನಿರ್ಮಿಸಿದಾಗಿನಿಂದ ಈ ಊಟ ಇಲ್ಲಿದೆ ಎಂಬುದು “ಬಹಳ ಖಚಿತ” ಎಂದು ರಾಬ್ ಹೇಳಿದರು. ಫ್ರೈಗಳು ಇನ್ನೂ ಗರಿಗರಿಯಾಗಿವೆ ಎಂದು ಅವರು ಹೇಳಿದರು. ಸುತ್ತಿದ ಪೇಪರ್‌ನಲ್ಲಿ ಫ್ರೈಸ್ ಮಾತ್ರ ಇದೆಯೇ ಹೊರತು ಹಾಳಾಗುವಂತದ್ದೇನಿರಲಿಲ್ಲ ಎಂದು ಕಂಡು ಸಮಾಧಾನವಾಯಿತು ಎಂದು ಆ ವ್ಯಕ್ತಿ ಹೇಳಿದರು. ” ನೀವು ಇದುವರೆಗೆ ಕಂಡುಹಿಡಿದ ಅತ್ಯಂತ ಹಳೆಯ ಮ್ಯಕ್ ಡಿ. 2001 ರಿಂದ ನಾನು ಇಂಥದನ್ನೇ ಪಡೆದಿದ್ದೆ. ಆ ದಾಖಲೆ ನೀವು ಅಳಿಸಿ ಹಾಕಿದ್ದೀರಿ” ಎಂದು ರೆಡ್ಡಿಟ್ ಬಳಕೆದಾರರು ತಮ್ಮ ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ. “ನಾನು ಈಗ ನನ್ನ ಗೋಡೆಗಳ ಒಳಗೆ ಹುಡುಕಬೇಕಿದೆ ” ಎಂದು ಮತ್ತೊಬ್ಬರು ಹೇಳಿದ್ದಾರೆ . ” ಮೆಕ್‌ಡೊನಾಲ್ಡ್‌ನ ಫ್ರೈಸ್ ಎಂದಿಗೂ ಕೆಟ್ಟದಾಗಿರುವುದಿಲ್ಲ. ಇದು ಕೇವಲ ಅರ್ಬನ್ ಲೆಜೆಂಡ್ ಎಂದು ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಒಬ್ಬ ಬಳಕೆದಾರರು “5 ಸೆಕೆಂಡ್ ನಿಯಮ” ವನ್ನು ಸೂಚಿಸಿದರು. ಈ ಸಂದರ್ಭದಲ್ಲಿ ಬಳಕೆದಾರರು ಇದಕ್ಕೆ  “70 ವರ್ಷಗಳ ನಿಯಮ ಅನ್ವಯಿಸುತ್ತದೆ” ಎಂದು ಹೇಳಿದರು.

ಇದಕ್ಕಿಂತ ಮೊದಲು ಯಾವುದೇ ನವೀಕರಣವನ್ನು ಮಾಡಲಾಗಿದೆಯೇ ಎಂದು ಒಬ್ಬ ಬಳಕೆದಾರರು ರಾಬ್‌ಗೆ ಕೇಳಿದರು, ಅದಕ್ಕೆ ಅವರು  “ಖಂಡಿತವಾಗಿಯೂ ಸ್ನಾನಗೃಹದಲ್ಲಿ ಯಾವುದೇ ಇತ್ತೀಚಿನ ನವೀಕರಣಗಳನ್ನು ಮಾಡಲಾಗಿಲ್ಲ. ನಾನು ಅದನ್ನು ಕಂಡುಕೊಂಡಿದ್ದೇನೆ. ಅದು ಹಿಂದಿನ ಮೂಲ ಪ್ಲಾಸ್ಟರ್‌ನಲ್ಲಿ ಮತ್ತು ಹಳೆಯ ಟಾಯ್ಲೆಟ್ ಪೇಪರ್ ಹೋಲ್ಡರ್‌ನಲ್ಲಿ ಸಿಲುಕಿಕೊಂಡಿದೆ.”

ಕ್ರಿಸ್ಟಲ್ ಲೇಕ್‌ನಲ್ಲಿರುವ ಮೂಲ ಮೆಕ್‌ಡೊನಾಲ್ಡ್‌ನ ಸ್ಥಳವೊಂದರಲ್ಲಿ ಕುಟುಂಬವು ವಾಸಿಸುತ್ತಿದೆ ಎಂದು ರಾಬ್ ಹೇಳಿದ್ದಾರೆ. ಕುತೂಹಲಕಾರಿಯಾಗಿ, ಔಟ್ಲೆಟ್ ಮೊದಲ ಬಾರಿಗೆ 1959 ರಲ್ಲಿ ಬಾಗಿಲು ತೆರೆಯಿತು – ಅದೇ ವರ್ಷ ರಾಬ್ ಮನೆ ನಿರ್ಮಿಸಿದ್ದರು.

TV9 Kannada


Leave a Reply

Your email address will not be published. Required fields are marked *