ಬೇಕಾಗುವ ಪದಾರ್ಥಗಳು…

  • ಬಾದಾಮಿ-  25 (ನೆನೆಸಿ ಸಿಪ್ಪೆ ತೆಗೆದದ್ದು)
  • ಹಾಲು – 1 ಲೀಟರ್
  • ಕಂಡೆನ್ಸ್ಡ್ ಮಿಲ್ಕ್ – ಅರ್ಧ ಬಟ್ಟಲು
  • ಸಕ್ಕರೆ- ಸ್ವಲ್ಪ
  • ಕೇಸರಿ- ಸ್ವಲ್ಪ
  • ವೆನಿಲಾ ಐಸ್ ಕ್ರೀಮ್ – ಸ್ವಲ್ಪ

ಮಾಡುವ ವಿಧಾನ…

  • ಮೊದಲಿಗೆ ಬಾದಾಮಿ ಹಾಗೂ ಸ್ವಲ್ಪ ಹಾಲನ್ನು ಮಿಕ್ಸಿ ಜಾರ್'ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು.
  • ಒಲೆಯ ಮೇಲೆ ಪಾತ್ರೆ ಇಟ್ಟು ಹಾಲನ್ನು ಹಾಕಿ 5-10 ನಿಮಿಷ ಕಾಯಿಸಬೇಕು. (ಆಗಾಗ ಸ್ಪೂನ್ ನಲ್ಲಿ ಕೈಯಾಡಿಸುತ್ತಿರಬೇಕು.
  • ನಂತರ ಕಂಡೆನ್ಸ್ಡ್ ಮಿಲ್ಕ್, ರುಬ್ಬಿಕೊಂಡ ಬಾದಾಮಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷ ಕುದಿಯಲು ಬಿಡಬೇಕು. ನಂತರ ಕೇಸರಿ ದಳವನ್ನು ಹಾಕಿ 3 ನಿಮಿಷ ಕಾಯಲು ಬಿಡಿ.
  • ನಂತರ ಹಾಲು ಸಂಪೂರ್ಣವಾಗಿ ತಣ್ಣಗಾದ ಬಳಿಕ ಫ್ರಿಡ್ಜ್ ನಲ್ಲಿ 30 ನಿಮಿಷ ಇಡಿ. ನಂತರ ಮಿಕ್ಸಿ ಜಾರ್'ಗೆ ಸಣ್ಣಗಾದ ಹಾಲು ಸ್ವಲ್ಪ ಸಕ್ಕರೆ ಹಾಗೂ ಐಸ್'ಕ್ರೀಮ್ ಹಾಕಿ ರುಬ್ಬಿಕೊಂಡರೆ ರುಚಿಕರವಾದ ಬಾದಾಮಿ ಮಿಲ್ಕ್ ಶೇಕ್ ಕುಡಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More

Leave a comment