ಇಂದು ಅಪ್ಪಂದಿರ ದಿನದ ಹಿನ್ನೆಲೆ ನಟ ಪುನೀತ್ ರಾಜ್​ಕುಮಾರ್​ ತಮ್ಮ ತಂದೆ ವರನಟ ಡಾ. ರಾಜ್​ಕುಮಾರ್​​ಗೆ ಗಾನ ನಮನ ಸಲ್ಲಿಸಿದ್ದಾರೆ. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ.. ಚಂದ್ರ ಮೇಲೆ ಬಂದ.. ಮಿನುಗು ತಾರೆ ಅಂದ, ನೋಡು ಎಂಥ ಚೆಂದ.. ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ಅಂತ ಸುಶ್ರಾವ್ಯವಾಗಿ ಹಾಡಿರೋ  ಅಪ್ಪು, ಅದರ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಪ್ಪಂದಿರ ದಿನಕ್ಕೆ ಶುಭಾಶಯ ಕೋರಿದ್ದಾರೆ.

ಅಂದ್ಹಾಗೆ ಬಾನದಾರಿಯಲ್ಲಿ ಸೂರ್ಯ ಜಾರಿಹೋದ ಹಾಡು ಭಾಗ್ಯವಂತ ಸಿನಿಮಾದ್ದು. ಚಿತ್ರದಲ್ಲಿ ಅಣ್ಣಾವ್ರು  ಹಾಗೂ ಪುನೀತ್ ಒಟ್ಟಿಗೆ ನಟಿಸಿದ್ದರು. ಪುನೀತ್ ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಈ ಹಾಡನ್ನ ಆಗ ಅಪ್ಪು  ಮುದ್ದುಮುದ್ದಾಗಿ ಹಾಡಿರೋದು ಈಗಲೂ ಅನೇಕರ ಫೇವರೆಟ್. ಅದೇ ಹಾಡನ್ನ ಈಗ ಪುನೀತ್ ನೆನಪಿಸಿಕೊಂಡು ತಮ್ಮ ತಂದೆಗೆ ಅರ್ಪಿಸಿದ್ದಾರೆ.

The post ‘ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ..’ ಅಪ್ಪಂದಿರ ದಿನಕ್ಕೆ ಅಪ್ಪು ಗಾನ ನಮನ appeared first on News First Kannada.

Source: newsfirstlive.com

Source link