ಬಾಬರ್​​​ ಅಜಂ ಕ್ಯಾಪ್ಟನ್​​, ಟೀಂ ಇಂಡಿಯಾದ ಯಾರಿಗೂ ಇಲ್ಲ ಅವಕಾಶ


ಟಿ20 ವಿಶ್ವಕಪ್ ಟೂರ್ನಿಗೆ ಅದ್ಧೂರಿ ತೆರೆ ಬಿದ್ದಿದೆ. ಹಲವು ರೋಚಕ ತಿರುವುಗಳು, ಆರ್ಭಟಗಳ ಮಧ್ಯೆ ಅಂತ್ಯಗೊಂಡಿದೆ. ಫೈನಲ್​​ನಲ್ಲಿ ನ್ಯೂಜಿಲೆಂಡ್​ ತಂಡವನ್ನ ಮಣಿಸಿ ಆಸ್ಟ್ರೇಲಿಯಾ, ಚೊಚ್ಚಲ ಟಿ20 ವಿಶ್ವಕಪ್​ ಟ್ರೋಫಿಗೆ ಮುತ್ತಿಕ್ಕಿದೆ. ಇದರ ಬೆನ್ನಲ್ಲೇ ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ 11 ಆಟಗಾರರ ತಂಡವನ್ನ ಐಸಿಸಿ ಪ್ರಕಟಿಸಿದೆ.

ಆದರೆ ಐಸಿಸಿ ಪ್ರಕಟಿಸಿದ ಈ ತಂಡದಲ್ಲಿ ಭಾರತದ ಆಟಗಾರರೇ ಇಲ್ಲದಿರೋದು ಅಚ್ಚರಿ ಮೂಡಿಸಿದೆ. ಇನ್ನು ಈ ತಂಡಕ್ಕೆ ಪಾಕಿಸ್ತಾನದ ನಾಯಕ ಬಾಬರ್ ಅಝಂ ಐಸಿಸಿ ರಚಿಸಿದ ತಂಡಕ್ಕೂ ಕ್ಯಾಪ್ಟನ್​ ಆಗಿದ್ದಾರೆ. ಇನ್ನು ಈ ತಂಡದಲ್ಲಿ ಆಸ್ಟ್ರೇಲಿಯಾದ ಮೂವರು ಸ್ಥಾನ ಪಡೆದುಕೊಂಡಿದ್ದರೆ, ಇಂಗ್ಲೆಂಡ್​ನ ಇಬ್ಬರು ಆಟಗಾರರು ತಂಡದಲ್ಲಿದ್ದಾರೆ.

ಹಾಗೇ ಶ್ರೀಲಂಕಾ, ದಕ್ಷಿಣಾ ಆಫ್ರಿಕಾದಿಂದ ತಲಾ ಇಬ್ಬರು, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​ ತಂಡದಿಂದ ಒಬ್ಬರೊಬ್ಬರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಪಾಕಿಸ್ತಾನ ಮತ್ತೊಬ್ಬ ಆಟಗಾರ ಶಾಹೀನ್​ ಆಫ್ರಿದಿ 12ನೇ ಆಟಗಾರನಾಗಿ ಆಯ್ಕೆ ಆಗಿದ್ದಾರೆ. ಈ ತಂಡದಲ್ಲಿ ಡೇವಿಡ್​ ವಾರ್ನರ್, ಜೋಸ್​ ಬಟ್ಲರ್​​ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

ಬಾಬರ್ ಅಝಂ, ಚರಿತ್​ ಅಸಲಂಕಾ, ಆ್ಯಡಂ ಮಾರ್ಕರಮ್​ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಇನ್ನು ಮೋಯಿನ್​ ಅಲಿ, ವನಿಂದು ಹಸರಂಗ ಆಲ್​​ರೌಂಡರ್​ ಕೋಟಾದಲ್ಲಿ ಸ್ಥಾನ ಪಡೆದಿದ್ರೆ, ಆ್ಯಡಂ ಜಂಪಾ ಸ್ಪಿನ್ನರ್ ಆಗಿದ್ದಾರೆ. ಜೋಶ್​ ಹೇಜಲ್​ವುಡ್​, ಟ್ರೆಂಟ್​​ ಬೋಲ್ಟ್, ಆ್ಯನ್ರಿಚ್​ ನೋಕಿಯಾ ವೇಗಿಗಳಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಭಾರತ ಯಾವೊಬ್ಬ ಆಟಗಾರರಿಗೆ ಅವಕಾಶ ನೀಡದಿರುವುದಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಟೂರ್ನಿಯಲ್ಲಿ ರಾಹುಲ್​-ರೋಹಿತ್ ಅದ್ಭುತವಾಗಿ ಆಡಿದ್ರು. ಆದರೂ ಯಾಕೆ ಚಾನ್ಸ್​ ನೀಡಿಲ್ಲ.? ಯಾವ ಆಧಾರದಲ್ಲಿ ತಂಡವನ್ನ ಆಯ್ಕೆ ಮಾಡಲಾಗಿದೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *