ಅಲೋಪತಿಯ ವಿರುದ್ಧ ಮಾತನಾಡಿ ವೈದ್ಯರ ಕೆಂಗಣ್ಣಿಗೆ ಗುರಿಯಾಗಿರುವ ಬಾಬಾ ರಾಮ್ದೇವ್ ಸವಾಲೊಂದನ್ನು ಹಾಕಿದ್ದಾರೆ. ಒಂದು ವರ್ಷದಲ್ಲಿ 1 ಸಾವಿರ ಅಲೋಪತಿ ವೈದ್ಯರನ್ನ ಆಯುರ್ವೇದ ವೈದ್ಯರನ್ನಾಗಿ ಮಾಡ್ತೀನಿ ಅಂತ ಚಾಲೆಂಜ್ ಮಾಡಿದ್ದಾರೆ. ವೈದ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ AIIMSನ ವೈದ್ಯರು ಇಂದು ಕರಾಳ ದಿನ ಆಚರಿಸೋಕೆ ಮುಂದಾಗಿದ್ದಾರೆ.

ಕೊರೊನಾ ಸಂದರ್ಭದಲ್ಲೂ ಪ್ರಾಣವನ್ನೂ ಲೆಕ್ಕಿಸದೇ ಹಗಲಿರುಳು ದುಡಿಯುತ್ತಿರುವ ವೈದ್ಯರ ಬಗ್ಗೆ ಬಾಬಾ ರಾಮ್​ದೇವ್​​ ಇಲ್ಲಸಲ್ಲದ ಆರೋಪ ಮಾಡುತ್ತಲೇ ಇದ್ದಾರೆ. ಹೀಗೆ ಪ್ರಚಾರಕ್ಕಾಗಿ ಮಾತನಾಡುವುದಕ್ಕೆ ಯಾವುದೇ ಅರ್ಥವಿರಲ್ಲ ಅಂತ ಏಮ್ಸ್​​ ನಿರ್ದೇಶಕರು ತಿಳಿಸಿದ್ದಾರೆ.

ಕೊರೊನಾ ವಾರಿಯರ್ಸ್​ ಮತ್ತು ಆಧುನಿಕ ಔಷಧಿಯ ಬಗ್ಗೆ ಹೇಳಿಕೆ ನೀಡಿರುವ ರಾಮ್​ ದೇವ್​ ಬಾಬಾ ಅವರ ವಿರುದ್ಧ ರೋಗಿಗಳ ಚಿಕಿತ್ಸೆಗೆ ಅಡ್ಡಿಯಾಗದಂತೆ ಪ್ರತಿಭಟನೆ ನಡೆಸಲಾಗುವುದು ಎಂದು  ವೈದ್ಯರ ಸಂಘಟನೆ ತಿಳಿಸಿತ್ತು.

ರಾಮ್​ದೇವ್ ಬಾಬಾ ಆಲೋಪಥಿ ಚಿಕಿತ್ಸಾ ವಿಧಾನವನ್ನ ಸ್ಟುಪಿಡ್ ಸೈನ್ಸ್​ ಎಂದು ಕರೆದಿದ್ದರು ಈ ಹಿನ್ನೆಲೆ ಇಂಡಿಯಮ್ ಮೆಡಿಕಲ್ ಅಸೋಷಿಯೇನ್ಸ್ ಪ್ರಧಾನಿಗೆ ಪತ್ರ ಬರೆದು ದೇಶದ್ರೋಹದ ಕೇಸ್ ದಾಖಲಿಸುವಂತೆ ಒತ್ತಾಯಿಸಿತ್ತು. ಅಲ್ಲದೇ ರಾಮ್​ದೇವ್ ವಿರುದ್ಧ ಕಂಪ್ಲೇಂಟ್ ಕೂಡ ದಾಖಲಿಸಿತ್ತು.

The post ಬಾಬಾ ರಾಮ್​ದೇವ್​ ಹೇಳಿಕೆ ಖಂಡಿಸಿ AIIMS ವೈದ್ಯರಿಂದ ಇಂದು ‘ಕರಾಳ ದಿನಾಚರಣೆ’ appeared first on News First Kannada.

Source: newsfirstlive.com

Source link