ಬಾಯಾರಿ, ಹಸಿದು ಕಾಡಿಂದ ನಾಡಿಗೆ ಬಂದು ಕಂಗಾಲಾಗಿದ್ದ ನವಿಲನ್ನು ಜನ ಆರೈಕೆ ಮಾಡಿ ಚೇತರಿಕೊಳ್ಳುವಂತೆ ಮಾಡಿದರು! | A peacock suffering from dehydration and hunger gets breather from residents near Hoskote ARB


ದೇವನಹಳ್ಳಿ: ಈ ವಿಡಿಯೋ ನೋಡಿ ಮಾರಾಯ್ರೇ. ನಮ್ಮ ದೇಶದ ರಾಷ್ಟ್ರೀಯ ಪಕ್ಷಿ ನವಿಲು (Peacock) ನೋಡಲು ಬಹಳ ಸುಂದರವಾದ ಪ್ರಾಣಿ. ಆದರೆ, ಆಹಾರವನ್ನರಸಿಕೊಂಡು ಸುಡು ಬೇಸಿಗೆಯ (hot summer) ದಿನದಲ್ಲಿ ನಗರ ಭಾಗಕ್ಕೆ ಬಂದ ನವಿಲು ಆಹಾರದ (food) ಮಾತು ಹಾಗಿರಲಿ, ಕುಡಿಯಲು ನೀರು (water) ಸಹ ಕಾಣದೆ ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲ ಸಹೃದಯಿ ಜನರ ಕಣ್ಣಿಗೆ ಬಿದ್ದಿದೆ. ವಿಡಿಯೋನಲ್ಲಿ ಕಾಣುತ್ತಿರುವ ಜನರ ಕಣ್ಣಿಗೆ ನವಿಲು ಕಾಣದೆ ಹೋಗಿದ್ದರೆ, ಅದು ಬದುಕುವುದು ಕಷ್ಟವಾಗುತಿತ್ತೇನೋ? ಆದರೆ ಈ ಜನ ಅದರ ಪ್ರಾಣ ಉಳಿಸಿದ್ದೇ ಅಲ್ಲದೆ ಸುರಕ್ಷಿತ ಸ್ಥಳಕ್ಕೆ ಅದನ್ನು ತಲುಪಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಬಾವಾಪುರದ ಹೊರವಲಯದಲ್ಲಿ ಜನರಿಗೆ ನವಿಲು ಕಾಣಿಸಿದೆ. ನವಿಲು ಹಾರುತ್ತಾದರೂ ಕೋಳಿಯ ಥರ. ಬಹಳ ದೂರದವರೆಗೆ ಅದು ಹಾರಲಾರದು. ಇಲ್ಲಿ ನವಿಲು ಹಾರಲು ಪ್ರಯತ್ನಿಸುತ್ತಿದೆ, ಆದರೆ ಅದಕ್ಕೆ ಸಾಧ್ಯವಾಗುತ್ತಿಲ್ಲ.

ಊರ ಜನ ಅದಕ್ಕೆ ನೀರು ಕುಡಿಸಿ, ಆಹಾರ ತಿನ್ನಿಸಿ ಆರೈಕೆ ಮಾಡಿದ್ದಾರೆ. ನೀರು ಕುಡಿದ ನಂತರವೇ ಅದರ ದೇಹದಲ್ಲಿ ತ್ರಾಣ ಬಂದು ಚೇತರಿಸಿಕೊಂಡಿದೆ. ಆಹಾರ ಸೇವಿಸಿದ ನಂತರ ಅದು ತನ್ನನ್ನು ರಕ್ಷಿಸಿದವರ ಜೊತೆ ಫ್ರೆಂಡ್ಲೀಯಾಗಿದೆ. ಈ ಕರುಣಾಮಯಿ ಜನ ನವೊಲನ್ನು ನಂತರ ಅರಣ್ಯಾಧಿಕಾರಿಗಳ ಕೈಗೆ ಒಪ್ಪಿಸಿದ್ದಾರೆ.

ಕಾಡಿನಿಂದ ನಾಡಿಗೆ ಕೇವಲ ಆನೆ, ಚಿರತೆ, ಹುಲಿ ಮೊದಲಾದ ದೊಡ್ಡ ಪ್ರಾಣಿಗಳಷ್ಟೇ ಅಲ್ಲ, ನವಿಲುಗಳು ಕೂಡ ಬರಲಾರಂಭಿಸಿದ್ದು ಶುಭಸೂಚಕವೇನೂ ಅಲ್ಲ, ಮಾರಾಯ್ರೇ. ನಮ್ಮ ವಾಸಸ್ಥಳ ಸಂಕುಚಿಗೊಳ್ಳುತ್ತಿದೆ ಅಂತ ಪಕ್ಷಿಗಳು ಸಹ ಹೇಳುತ್ತಿವೆ!

TV9 Kannada


Leave a Reply

Your email address will not be published.