ಬಾರ್ಸಿಲೋನಾ : ಜಪಾನಿನ ಕೀ ನಿಶಿಕೊರಿ ಅವರನ್ನು ಮಣಿಸಿದ ಸ್ಪೇನಿನ ರಫೆಲ್‌ ನಡಾಲ್‌ “ಬಾರ್ಸಿಲೋನಾ ಓಪನ್‌’ ಟೆನಿಸ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಇಲ್ಲಿ 11 ಸಲ ಚಾಂಪಿಯನ್‌ ಆಗಿ ಮೂಡಿಬಂದಿರುವ ಅಗ್ರ ಶ್ರೇಯಾಂಕದ ರಫೆಲ್‌ ನಡಾಲ್‌ 6-0, 2-6, 6-2 ಅಂತರದಿಂದ ನಿಶಿಕೊರಿ ಅವರನ್ನು ಹಿಮ್ಮೆಟ್ಟಿಸಿದರು. ನಡಾಲ್‌ ಮೊದಲ ಪಂದ್ಯದಲ್ಲಿ ಬೆಲರೂಸ್‌ನ 111ನೇ ರ್‍ಯಾಂಕಿಂಗ್‌ ಆಟಗಾರ ಇಲ್ಯಾ ಇವಾಷ್ಕ ವಿರುದ್ಧ ಜಯ ಸಾಧಿಸಿದ್ದರು.

ರಫೆಲ್‌ ನಡಾಲ್‌ ಅವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಬ್ರಿಟನ್ನಿನ ಕ್ಯಾಮರಾನ್‌ ನೊರೀ. ಎದುರಾಳಿ ಡೇವಿಡ್‌ ಗೊಫಿನ್‌ ಗಾಯಾಳಾಗಿ ಹಿಂದೆ ಸರಿದ ಕಾರಣ ನೊರೀ ಕ್ವಾರ್ಟರ್‌ ಫೈನಲ್‌ಗೆ ಬೈ ಪಡೆದರು.

ಕ್ರೀಡೆ – Udayavani – ಉದಯವಾಣಿ
Read More