ಬಾರ್ಸಿಲೋನಾ: ರಫೆಲ್‌ ನಡಾಲ್‌ 2021ನೇ ಸಾಲಿನ ಬಾರ್ಸಿಲೋನಾ ಓಪನ್‌ ಟೆನಿಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ತಮ್ಮ ಬಾರ್ಸಿಲೋನಾ ಕಿರೀಟಗಳ ದಾಖಲೆಯನ್ನು 12ಕ್ಕೆ ವಿಸ್ತರಿಸಿದ್ದಾರೆ.

3 ಸೆಟ್‌ಗಳ ಜಿದ್ದಾಜಿದ್ದಿ ಫೈನಲ್‌ನಲ್ಲಿ ರಫೆಲ್‌ ನಡಾಲ್‌ ಗ್ರೀಕ್‌ನ ಸ್ಟೆಫ‌ನೋಸ್‌ ಸಿಸಿಪಸ್‌ ಅವರನ್ನು 6-4, 6-7 (8-6), 7-5 ಅಂತರದಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಇವರಿಬ್ಬರ ಕಾದಾಟ 3 ಗಂಟೆ, 38 ನಿಮಿಷಗಳ ತನಕ ಸಾಗಿತು.

ಅಂತಿಮ ಸೆಟ್‌ನ 10ನೇ ಗೇಮ್‌ ವೇಳೆ ನಡಾಲ್‌ ಸೋಲಿನ ಅಪಾಯಕ್ಕೆ ಸಿಲುಕಿದ್ದರು. ಆದರೆ ಚೇತರಿಸಿ ಕೊಂಡು 3 ನೇರ ಗೇಮ್‌ ಗೆಲ್ಲುವುದರೊಂದಿಗೆ ಮೇಲುಗೈ ಸಾಧಿಸಿದರು. ಫೆಬ್ರವರಿಯಲ್ಲಿ ನಡೆದ ಆಸ್ಟ್ರೇಲಿ ಯನ್‌ ಓಪನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಸಿಪಸ್‌ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡರು.

ಇದನ್ನೂ ಓದಿ :ಪಂಜಾಬ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ಗೆಲುವಿನ ಹಳಿ ಏರಿದ ಕೆಕೆಆರ್‌

ಇದು 2021ರ ಟೆನಿಸ್‌ ಋತುವಿನಲ್ಲಿ ನಡಾಲ್‌ ಪಾಲಾದ ಮೊದಲ ಪ್ರಶಸ್ತಿ. ಈ ಸಾಧನೆಯಿಂದ ಅವರು ಎಟಿಪಿ ರ್‍ಯಾಂಕಿಂಗ್‌ನಲ್ಲಿ ಮರಳಿ ದ್ವಿತೀಯ ಸ್ಥಾನಕ್ಕೆ ಏರಿದರು. ರಶ್ಯದ ಡ್ಯಾನಿಲ್‌ ಮೆಡ್ವಡೇವ್‌ ಮೂರಕ್ಕಿಳಿದರು.

ಕ್ರೀಡೆ – Udayavani – ಉದಯವಾಣಿ
Read More

Leave a comment