ಬಾರ್​ಗಳೇ ಈತನ ಟಾರ್ಗೆಟ್: ಹಲವು ಬಾರಿ ಜೈಲು ಸೇರಿದ್ರೂ ಬುದ್ಧಿ ಕಲಿಯದ ಬಾಟಲ್ ಕಳ್ಳ

ಬಾರ್​ಗಳೇ ಈತನ ಟಾರ್ಗೆಟ್: ಹಲವು ಬಾರಿ ಜೈಲು ಸೇರಿದ್ರೂ ಬುದ್ಧಿ ಕಲಿಯದ ಬಾಟಲ್ ಕಳ್ಳ

ಬೆಂಗಳೂರು: ಗ್ಯಾಸ್ ಕಟರ್ ಬಳಸಿ ಬಾರ್ ನಲ್ಲಿ‌ ಕಳ್ಳತನ‌ ಮಾಡಿದ್ದ ಆರೋಪಿ‌ಯನ್ನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ರು ಬಂಧಿಸಿದ್ದಾರೆ.

ಹರೀಶ್ ಬಂಧಿತ ಆರೋಪಿ, ಬಾರ್ ಶಟರ್ ಮುರಿದು 90 ಸಾವಿರ ನಗದು ಹಾಗೂ ಮೂರು ಮದ್ಯದ ಬಾಟಲ್ ಕದ್ದೊಯ್ದಿದ್ದ. ಹಲವು ಬಾರಿ ಕಳ್ಳತನದ ಕೇಸ್​ನಲ್ಲಿ ಜೈಲು ಸೇರಿದ್ದರೂ ಆರೋಪಿ ಮಾತ್ರ ಬುದ್ಧಿ ಕಲಿಯದೇ, ಪದೇ ಪದೇ ಕಳ್ಳತನದ ದಾರಿಯನ್ನ ಹಿಡೀತಿದ್ದ ಎನ್ನಲಾಗಿದೆ. ಈ ಬಾರಿ, ಕಳ್ಳತನ ನಡೆದ ಮೂರೇ ಗಂಟೆಯಲ್ಲಿ ಆರೋಪಿಯನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಸದ್ಯ, ಆರೋಪಿಯನ್ನು ಬಂಧಿಸಿ 90 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.

The post ಬಾರ್​ಗಳೇ ಈತನ ಟಾರ್ಗೆಟ್: ಹಲವು ಬಾರಿ ಜೈಲು ಸೇರಿದ್ರೂ ಬುದ್ಧಿ ಕಲಿಯದ ಬಾಟಲ್ ಕಳ್ಳ appeared first on News First Kannada.

Source: newsfirstlive.com

Source link