ಬಾರ್​​ ಬೇಡ ಎಂದ ಮಹಿಳೆಯರ ಮೇಲೆ ಪೊಲೀಸ್​ ಹಲ್ಲೆ ಆರೋಪ; ಮನೆಗೆ ನುಗ್ಗಿ 7 ಮಂದಿ ಅರೆಸ್ಟ್


ಚಿಕ್ಕಮಗಳೂರು: ಬಾರ್​​ ಬೇಡ ಎಂದು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದ ಮಹಿಳೆಯರ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಬೆಳಂಬೆಳಗ್ಗೆಯೇ ಮಹಿಳೆಯರ ಮನೆ ನುಗ್ಗಿದ ಪೊಲೀಸರು 7 ಜನರನ್ನು ದರದರ ಎಳೆದೊಯ್ದ ಬಂಧಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಬಾಗಿಲು, ಹೆಂಚು ಮುರಿದು ಮನೆಯೊಳಗೆ ನುಗ್ಗಿದ ಪೊಲೀಸರು ಅಪ್ರಾಪ್ತ ಬಾಲಕ, ಮೂವರು ಮಹಿಳೆಯರು ಸೇರಿ 7 ಜನರನ್ನ ಎಳೆದೊಯ್ದಿದ್ದಾರೆ ಎನ್ನಲಾಗಿದೆ. ಇನ್ನು ಈ ಘಟನೆ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.

ಇತ್ತೀಚೆಗೆ ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಹಳ್ಳಿಗರು ಪ್ರತಿಭಟಿಸಿದ್ದರು. ಹೀಗಾಗಿ ಒಂದೇ ಮನೆಯ ಮೂವರು ಸೇರಿ 7 ಮಂದಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಹೀಗಾಗಿ ಕಡೂರು ಪಿಎಸ್​​ಐ ರಮ್ಯಾ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೇನಾಧಿಕಾರಿ, ಪತ್ನಿ, ಮಗು ಸೇರಿ 4 ಯೋಧರ ಸಾಯಿಸಿದ್ದ ಸಂಘಟನೆಯ ಉಗ್ರರು ಫಿನಿಶ್

News First Live Kannada


Leave a Reply

Your email address will not be published. Required fields are marked *