ಬಾಲಕಿಯ ಸಾವಿಗೆ ಹೇತುವಾದ ಕಿರುಸೇತುವೆ ಹೇಗಿದೆ ಗೊತ್ತಾ? ಯಮನೊಂದಿಗೆ ಸೆಣೆಸುತ್ತಾ, ಮುರಿದ ಸೇತುವೆ ದಾಟುವ ದುಃಸ್ಥಿತಿ ಇಲ್ಲಿದೆ | Footbridge create huge risk in udupi and Do you know how the little bridge caused the girl’s death


ಕಾಲ್ಪೋಡು ಗ್ರಾಮ ಮೂಲಭೂತ ಸೌಕರ್ಯದಿಂದಲೇ ವಂಚಿತವಾಗಿದೆ. ಇಲ್ಲಿನ ಗ್ರಾಮಸ್ಥರೇ ಹರಿಯುವ ನದಿಗೆ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ. ಆದ್ರೆ ಅದರ ಸ್ಥಿತಿ ಈಗ ಮತ್ತಷ್ಟು ಹಾಳಾಗಿದೆ.

ಉಡುಪಿ: ಬೈಂದೂರು (Baindur) ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ಆಗಸ್ಟ್ 8ರಂದು ಕಾಲು ಸಂಕ(Bridge) ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ ಏಳು ವರ್ಷದ ಸನ್ನಿಧಿಗಾಗಿ ಶೋಧಕಾರ್ಯ ಮುಂದುವರಿದಿದೆ. ಆದ್ರೆ ಸನ್ನಿಧಿಯ ಸಾವಿಗೆ ಕಾರಣವಾದ ಕಿರು ಸೇತುವೆ ಹೇಗಿದೆ ಗೊತ್ತಾ? ಮಕ್ಕಳು ಬಿಡಿ ದೊಡ್ಡವರಿಗೂ ಈ ಸೇತುವೆಯಲ್ಲಿ ನಡೆಯಲು ಸಾಧ್ಯವಿಲ್ಲ. ತಮ್ಮ ಕಷ್ಟ ಕಾಲಕ್ಕೆ ತಾವೇ ಮಾಡಿಕೊಂಡ ಸೇತುವೆಯಲ್ಲಿ ಜನ ನಿತ್ಯವೂ ಓಡಾಡಿ ಹೈರಾಣಾಗಿದ್ದಾರೆ. ಅಪಾಯಕಾರಿ ನೀರಿನ ಸೇತುವೆಯ ಮೇಲೆ ಜಾರುವ ಮರದ ದಿಮ್ಮಿಗಳಲ್ಲಿ ನಡೆದಾಡುವುದೇ ಒಂದು ಸಾಹಸಮಯ ಕೆಲಸ.

ಕಾಲ್ಪೋಡು ಗ್ರಾಮ ಮೂಲಭೂತ ಸೌಕರ್ಯದಿಂದಲೇ ವಂಚಿತವಾಗಿದೆ. ಇಲ್ಲಿನ ಗ್ರಾಮಸ್ಥರೇ ಹರಿಯುವ ನದಿಗೆ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ. ಆದ್ರೆ ಅದರ ಸ್ಥಿತಿ ಈಗ ಮತ್ತಷ್ಟು ಹಾಳಾಗಿದೆ. ಸೇತುವೆ ಮುರಿದಿದೆ. ಮುರಿದ ಸೇತುವೆ ಮೇಲೆಯೇ ಪ್ರತಿ ದಿನ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರೂ ಓಡಾಡುತ್ತಾರೆ. ಬೀಜಮಕ್ಕಿ ಪರಿಸರದಲ್ಲಿ ಇಂತಹ ಹತ್ತಕ್ಕೂ ಅಧಿಕ ಕಾಲು ಸಂಕಗಳಿವೆ. ಶಾಶ್ವತ ಸೇತುವೆ ನಿರ್ಮಾಣವೊಂದೇ ಸಮಸ್ಯೆಗೆ ಪರಿಹಾರವಾಗಿದೆ.

ಈಗಾಗಲೇ ಎರಡು ಕಡೆ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಆದ್ರೆ ಗ್ರಾಮಸ್ಥರು ಇನ್ನಷ್ಟು ಸೇತುವೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಹಾಗೂ ನಿರ್ಲಕ್ಷ್ಯ ತೋರುತ್ತಿರುವ ಜನಪ್ರತಿನಿಧಿಗಳ ಬಗ್ಗೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ಬರುತ್ತಾರೆ. ಶಾಲೆಯಿಂದ ಮನೆಗೆ ತೆರಳುವ ದಾರಿಯಲ್ಲಿ ಇದೇ ಮುರಿದ ಕಾಲು ಸಂಕವಿದೆ. ಈಗಾಗಲೇ ಹಲವಾರು ಮಂದಿ ನೀರಿಗೆ ಬಿದ್ದು ಬಚಾವಾಗಿದ್ದರು. ಇದೇ ಮೊದಲ ಬಾರಿಗೆ ಶಾಲಾ ಬಾಲಕಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಶಾಶ್ವತ ಸೇತುವೆ ಕಟ್ಟಿಕೊಡಲು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ.

ಉಡುಪಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *