ಬಾಲಿವುಡ್​​​ ನಟ ಶಾರುಖ್​​ ಪುತ್ರ ಆರ್ಯನ್​​ಗೆ ಜೈಲೂಟ ಫಿಕ್ಸ್​

ಮುಂಬೈ: ಐಷಾರಾಮಿ ಹಡಗೊಂದರಲ್ಲಿ ಡ್ರಗ್ಸ್​ ಪಾರ್ಟಿ ಮಾಡಿದ ಆರೋಪದ ಮೇರೆಗೆ ಬಂಧನವಾಗಿದ್ದ ನಟ ಶಾರುಖ್​​ ಖಾನ್​​ ಪುತ್ರ ಆರ್ಯನ್​​ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್​ ಆದೇಶಿಸಿದೆ. ಈ ಬೆನ್ನಲ್ಲೇ ಆರ್ಯನ್​​ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನ ನಾಳೆ ಕೈಗೆತ್ತಿಕೊಳ್ಳೋದಾಗಿ ಹೇಳಿದೆ.

ಇದನ್ನೂ ಓದಿ: BREAKING: ಶಾರುಖ್​​​ ಖಾನ್​​​ ಪುತ್ರನಿಗೆ 14 ದಿನ ನ್ಯಾಯಾಂಗ ಬಂಧನ; ಕೋರ್ಟ್​ ಆದೇಶ

ಇನ್ನು, ಕೋರ್ಟ್​ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬಳಿಕ ಕೋರ್ಟ್​​ ಏನು ಬೇಕಾದರೂ ತೀರ್ಪು ನೀಡಬಹುದು. ಹೀಗಾಗಿ ನ್ಯಾಯಾಂಗ ಬಂಧನವೆಂದರೆ ಆರ್ಯನ್​​​ ಜೈಲಿಗೆ ಹೋಗಲೇಬೇಕಾಗುತ್ತದೆ.

ಆರ್ಯನ್​​ ಖಾನ್​​ಗೆ ಜೈಲೂಟ ಗತಿಯಾಗಿದೆ. ಹೀಗಾಗಿ ಈ ಸುದ್ದಿ ತಿಳಿಯುತ್ತಿದ್ದಂತೆಯೇ ನಟ ಶಾರುಖ್​​ ಖಾನ್​​​ ತುಂಬಾ ಡಿಸ್ಟರ್ಬ್​​ ಆಗಿದ್ದಾರೆ ಎನ್ನಲಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಆರ್ಯನ್ ಖಾನ್ ಪರ ವಕೀಲರು ಸಲ್ಲಿಸಿರುವ ಜಾಮೀನಿನ ಅರ್ಜಿ ವಿಚಾರಣೆ ನಡೆಯಲಿದೆ.

News First Live Kannada

Leave a comment

Your email address will not be published. Required fields are marked *