ಬಾಲಿವುಡ್​​ ನಟಿ ಕಂಗನಾ ರಣಾವತ್​​ ವಿರುದ್ಧ ದಾಖಲಾಯ್ತು FIR; ಯಾಕೆ?


ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಚಾರವಾಗಿ ಸದಾ ಸುದ್ದಿಯಲ್ಲಿರೋ ನಟಿ ಆಂದ್ರೆ ಕಂಗನಾ ರಣಾವತ್​. ಮನಸ್ಸಿಗೆ ಬಂದದ್ದನ್ನು ನೇರವಾಗೀ ಹೇಳುವ ಮೂಲಕ ಸಾಕಷ್ಟು ವಿವಾದಗಳಿಗೆ ತುತ್ತಾಗುತ್ತಲೇ ಇರುತ್ತಾರೆ ಕಂಗನಾ. ಸದ್ಯ ಕಂಗನಾ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

ಮೋದಿ ನಾಯಕತ್ವದ ಕೇಂದ್ರ ಸರ್ಕಾರ ಕೃಷಿ ಕಾನೂಗಳನ್ನು ಜಾರಿ ಮಾಡಿತ್ತು. ಆದರೆ ರೈತರು ದೇಶದಾದ್ಯಂತ ಈ ಕಾನೂನುಗಳ ವಿರುದ್ಧ ತೀರ್ವ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿತ್ತು. ಕಾನೂಗಳನ್ನು ಹಿಂದಕ್ಕೆ ಪಡೆದ ನಂತರ ಕಂಗನಾ ಇನ್ ಸ್ಟಾಗ್ರಾಂನಲ್ಲಿ , ರೈತರ ಚಳುವಳಿಯನ್ನು ”ಖಲಿಸ್ತಾನಿ” ಚಳವಳಿಗೆ ಹೋಲಿಸಿದ್ದರು.

ಇದು ದುಃಖದ ಸಂಗತಿ, ನಾಚಿಕೆಗೇಡು, ದೊಡ್ಡ ಅನ್ಯಾಯ. ಬೀದಿಗಿಳಿದ ಜನ ದೇಶದಲ್ಲಿ ಕಾನೂನುಗಳನ್ನು ರೂಪಿಸಲು ಶುರು ಮಾಡಿದ್ದಾರೆ, ಜನರಿಂದ ಆಯ್ಕೆಯಾದ ಸರ್ಕಾರವಲ್ಲ. ಭಾರತವೂ ಜಿಹಾದಿ ರಾಷ್ಟ್ರವಾಗಿದೆ. ಈ ರೀತಿ ಆಗಬೇಕೆಂದು ಬಯಸಿದ ಎಲ್ಲರಿಗೂ ಅಭಿನಂದನೆಗಳು, ಈ ಸಮಯದಲ್ಲಿ ಇಂದಿರಾ ಗಾಂಧಿಯನ್ನು ಮರೆಯಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದಲ್ಲದೆ, ದೇಶದ ವಿವಿಧ ಪ್ರದೇಶಗಳಲ್ಲಿ ಕಂಗನಾ ವಿರುದ್ಧ ಅನೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಂಗನಾ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಕುರಿತು ಮತ್ತೆ ಟ್ವೀಟ್​ ಮಾಡಿರುವ ಕಂಗನಾ, ತನ್ನ ಇನ್​​ಸ್ಟಾಗ್ರಾಂ ನಲ್ಲಿ ಹಾಟ್​ ಫೋಟೋಗಳನ್ನು ಹಾಕುವ ಮೂಲಕ, ನನ್ನನ್ನು ಬಂಧಿಸಲು ಬಂದರೆ ಸದ್ಯ ಮನೆಯಲ್ಲಿ ನನ್ನ ಮನಸ್ಥಿತಿ ಹೀಗಿದೆ’ ಎಂದು ಟಾಂಗ್​ ನೀಡಿದ್ದಾರೆ.

News First Live Kannada


Leave a Reply

Your email address will not be published. Required fields are marked *