ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಹಾಗೂ ಇಂಗ್ಲೆಂಡ್ ಟೆಸ್ಟ್​​ ಸರಣಿಗಾಗಿ, ಟೀಮ್​ ಇಂಡಿಯಾ ಆಂಗ್ಲರ ನಾಡಲ್ಲಿ ಬೀಡುಬಿಟ್ಟಿದೆ. ಈ ಪ್ರವಾಸ ಕೇವಲ ಸೋಲು-ಗೆಲುವಿನ ವಿಚಾರದಲ್ಲಿ ಮಾತ್ರ ಮಹತ್ವ ಪಡೆದುಕೊಂಡಿಲ್ಲ. ಆಟಗಾರರ ಅಳಿವು-ಉಳಿವಿಗೂ ಮಾನದಂಡವಾಗಿರೋದ್ರಿಂದ, ಇದು ಹೆಚ್ಚು ಕುತೂಹಲ ಮೂಡಿಸಿದೆ. ಇದರಿಂದ ಕನ್ನಡಿಗ ರಾಹುಲ್​ ಕೂಡ ಹೊರತಾಗಿಲ್ಲ. ಆದ್ರೆ ಕೆ.ಎಲ್​ಗೆ ಇದ್ಯಾವುದರ ಪರಿವೆಯೂ ಇಲ್ಲ..!

ಕನ್ನಡಿಗ ರಾಹುಲ್ ಮೇಲೆ ಅಳಿವು ಉಳಿವಿನ ತೂಗುಗತ್ತಿ..!
ಇಂಗ್ಲೆಂಡ್​ ಪ್ರವಾಸವೇ ರಾಹುಲ್​ ಪಾಲಿಗೆ ನಿರ್ಧಾರಕ..!
ಕಳೆದ ಆಸ್ಟ್ರೇಲಿಯಾ ಪ್ರವಾಸ, ಭಾರತದಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧ ಸರಣಿಯಲ್ಲಿ ರಾಹುಲ್,​ ಬೆಂಚ್​ ಕಾದಿದ್ದು ನಿಮಗೆ ತಿಳಿದೇ ಇದೆ. ಇನ್​​​ಫ್ಯಾಕ್ಟ್,​ ಕೆಎಲ್​ ಕೊನೆಯ ಬಾರಿ ವೈಟ್​​ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದು, ಅಗಸ್ಟ್​ 2019ರಲ್ಲಿ..! ಆದ್ರೆ​​ ಈ ಪ್ರವಾಸದಲ್ಲೂ ರಾಹುಲ್​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಸಿಗೋದು ಡೌಟೇ..! ಯಾಕಂದ್ರೆ ಕೊನೆಯ 12 ಇನ್ನಿಂಗ್ಸ್​ಗಳಲ್ಲಿ ರಾಹುಲ್​ ಪ್ರದರ್ಶನ ಹಾಗಿದೆ..!

ಕಳೆದ 12 ಟೆಸ್ಟ್​​ ಇನ್ನಿಂಗ್ಸ್​​​ಗಳಲ್ಲಿ ರಾಹುಲ್​
ರನ್​                    195
ಸರಾಸರಿ             17.72
ಬೆಸ್ಟ್​​                    44
100/50               0/0

ಇಷ್ಟೇ ಅಲ್ಲ..! ಟೆಸ್ಟ್​ ಮಾದರಿಯಲ್ಲಿ ರಾಹುಲ್​ ಬ್ಯಾಟಿಂಗ್​ ಸರಾಸರಿಯೂ ಉತ್ತಮವಾಗಿಲ್ಲ. ಈವರೆಗೆ ಆಡಿರುವ ಪಂದ್ಯಗಳ ಲೆಕ್ಕಾಚಾರದಲ್ಲಿ KL​ ಸರಾಸರಿ ಕೇವಲ 34.58. ಆಂಗ್ಲರ ನಾಡಲ್ಲಿ ಇನ್ನೂ ಕಡಿಮೆ..!

ಆಂಗ್ಲರ ನಾಡಲ್ಲಿ​ ರಾಹುಲ್​​
ಪಂದ್ಯ          05
ರನ್            299
ಸರಾಸರಿ      29.90

ಈ ಅಂಕಿ-ಅಂಶಗಳು ಮಾತ್ರವಲ್ಲ..! ರಾಹುಲ್​ ಮುಂದೆ ಫಿಟ್​ನೆಸ್​ ಕಾಯ್ದುಕೊಳ್ಳುವ ಸವಾಲೂ ಇದೆ. ಕಳೆದ ಐಪಿಎಲ್​ ಮಧ್ಯಭಾಗದಲ್ಲಿ ಅಪೆಂಡಿಕ್ಸ್ ಆಪರೇಶನ್​ಗೆ ಒಳಗಾಗಿದ್ದ ರಾಹುಲ್,​ ವಿಶ್ರಾಂತಿಯಲ್ಲಿದ್ರು. ಹೀಗಾಗಿ ಸುದೀರ್ಘ ವಿಶ್ರಾಂತಿಯ ಬಳಿಕ ಕಣಕ್ಕಿಳಿಯುತ್ತಿರುವ ರಾಹುಲ್​, ಮ್ಯಾಚ್​ ಫಿಟ್​ನೆಸ್​​ ಬಗ್ಗೆಯೂ ಚರ್ಚೆ ಮೂಡಿದೆ.

ಈ ಎಲ್ಲಾ ಲೆಕ್ಕಾಚಾರದಲ್ಲೆ ರಾಹುಲ್​ಗೆ, ಪ್ಲೇಯಿಂಗ್​ ಇಲೆವೆನ್​ ಸ್ಥಾನ ಅನುಮಾನ ಎಂದು ಹೇಳ್ತಿರೋದು. ಹೀಗಾಗಿಯೇ ಇಂಗ್ಲೆಂಡ್​ ಪ್ರವಾಸ ರಾಹುಲ್​ ಪಾಲಿಗೆ, ಅಗ್ನಿ ಪರೀಕ್ಷೆಯ ಸರಣಿಯಾಗಿ ಮಾರ್ಪಟ್ಟಿದೆ. ಈ ಪ್ರವಾಸದ ಒಂದೇ ಒಂದೇ ವೈಫಲ್ಯ, ರಾಹುಲ್​ಗೆ​ ತಂಡದಿಂದಲೇ ಕೊಕ್​ ನೀಡೋ ಸಾಧ್ಯತೆಯನ್ನ ಸೃಷ್ಠಿಸಿದೆ. ಆದ್ರೆ, ರಾಹುಲ್​ಗೆ ಮಾತ್ರ ಇದ್ಯಾವುದರದ್ದೂ ಪರಿವೆಯೇ ಇಲ್ಲ..!

ಜಾಲಿ ಟ್ರಿಪ್​ ಮೂಡ್​​ನಲ್ಲಿ ಕೆಎಲ್​ ರಾಹುಲ್​..!
ಆಟದ ಮೇಲಿಲ್ಲದ ಏಕಾಗ್ರತೆ ಗರ್ಲ್​​​ಫ್ರೆಂಡ್​​ ಮೇಲೆ..!
ರಾಹುಲ್ ಕ್ರಿಕೆಟ್​ ಭವಿಷ್ಯವೇ ಅತಂತ್ರವಾಗಿದೆ ಎಂಬ ವಿಶ್ಲೇಷಣೆಗಳು ಒಂದೆಡೆಯಾದ್ರೆ, ಇದ್ಯಾವುದರದ್ದೂ ಪರಿವೆಯೇ ಇಲ್ಲದೇ ಇರೋ ರಾಹುಲ್ ಇನ್ನೊಂದೆಡೆ..! ಒಂದು ವೇಳೆ ತಂಡದಲ್ಲಿ ಅವಕಾಶ ಸಿಕ್ಕರೂ, ಅದನ್ನ ಎಕ್ಸ್​ಟ್ರಾಡಿನರಿ ಫರ್ಪಾಮೆನ್ಸ್​ ನೀಡಿ ಸ್ಥಾನವನ್ನ ಭದ್ರಪಡಿಸಿಕೊಳ್ಳಬೇಕಾಗಿದ್ದ ರಾಹುಲ್​ ಚಿತ್ತ ಇರೋದು, ಬೇರೆಡೆ.!!! ಇಂಗ್ಲೆಂಡ್​ಗೆ ಹಾರಿರೋ ರಾಹುಲ್​, ಜಾಲಿ ಟ್ರಿಪ್​ ಮೂಡ್​ನಲ್ಲಿದ್ದಾರೆ. ಇದಕ್ಕೆ ಪ್ರಿಯತಮೆ ಆಥಿಯಾ ಶೆಟ್ಟಿ ಸಾಥ್​ ಬೇರೆ..!

ಸೋಷಿಯಲ್​ ಮೀಡಿಯಾಗಳಲ್ಲಿ ಹಾರ್ಟ್​ ಇಮೋಜಿಗಳನ್ನ ಶೇರ್​ ಮಾಡ್ಕೊಂದು, ಪ್ರೀತಿಗೆ ತಾವೇ ಸಾಕ್ಷ್ಯ ಒದಗಿಸಿದ್ರೂ, ನಾವು ರಿಲೇಷನ್​ಶಿಪ್​ನಲ್ಲಿ ಇಲ್ಲ ಅಂತಿದ್ದ ಜೋಡಿ ಈಗ, ಇಂಗ್ಲೆಂಡ್​ನಲ್ಲಿದೆ. ಬಿಸಿಸಿಐ ಕುಟುಂಬದೊಂದಿಗೆ ತೆರಳೋಕೆ ಅನುಮತಿ ನೀಡಿದರೆ, ಇದನ್ನೇ ಅಡ್ವಾಂಟೆಜ್ ಮಾಡಿಕೊಂಡಿರೋ ರಾಹುಲ್,​ ಪ್ರಿಯತಮೆಯೊಂದಿಗೆ ಇಂಗ್ಲೆಂಡ್​ಗೆ ಹಾರಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾಗಳಲ್ಲಿ ಶೇರ್​ ಮಾಡಿಕೊಂಡಿರುವ ಪೋಟೋಗಳೇ ಇದಕ್ಕೆ ಸಾಕ್ಷ್ಯ ಒದಗಿಸಿವೆ.

ಈ ವಿಚಾರವೇ ಈಗ ರಾಹುಲ್​ ಏಕಾಗ್ರತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಒಂದೆಡೆ ತಂಡದಲ್ಲಿ ಸ್ಥಾನಕ್ಕೆ ಕಳಪೆ ಫಾರ್ಮ್​, ಫಿಟ್​ನೆಸ್​ ಸಮಸ್ಯೆಯಾದ್ರೆ, ಇನ್ನೊಂದೆಡೆ ಸ್ಥಾನಕ್ಕೂ ಪೈಪೋಟಿಯೂ ಇದೆ. ಶುಭ್​ಮನ್ ಗಿಲ್​ ​,ರೋಹಿತ್ ಶರ್ಮಾ​, ಮಯಾಂಕ್ ಅಗರ್​ವಾಲ್​​, ಪೃಥ್ವಿ ಷಾ,,, ರಾಹುಲ್​ಗೆ ನೇರ ಪೈಪೋಟಿಯಾಗಿದ್ದಾರೆ. ಏಕದಿನ ತಂಡದಲ್ಲಿ ಸೂರ್ಯ ಕುಮಾರ್​, ಶ್ರೇಯಸ್​ ಅಯ್ಯರ್, ರಿಷಭ್​ ಪಂತ್​, ಶಿಖರ್​ ಧವನ್​, ರೋಹಿತ್​ ಶರ್ಮಾ ಜೊತೆ ರೇಸ್​ ಏರ್ಪಟ್ಟಿದೆ. ಇದನ್ನ ಗಣನೆಗೆ ತೆಗೆದುಕೊಳ್ಳಬೇಕಾದ ರಾಹುಲ್​, ಇನ್ನೂ ಮೋಜು-ಮಸ್ತಿಯ ಗುಂಗಲ್ಲೇ ಇದ್ದಾರೆ.

ಮಗಳು ಜೀವಾ ಹುಟ್ಟಿದಾಗ ದೇಶ ಸೇವೆ ಮುಖ್ಯ ಅಂದಿದ್ದ ಧೋನಿ, ಆರಂಭದಲ್ಲಿ ಟಾಮ್​ಬಾಯ್​ ಎನಿಸಿಕೊಂಡಿದ್ದ ಕೊಹ್ಲಿ, ಈಗ ಶ್ರೇಷ್ಠ ಕ್ರಿಕೆಟಿಗನಾಗೊರೋದು ಸಾಧಿಸಬೇಕು ಅನ್ನೋ ಕಮಿಟ್​ಮೆಂಟ್​ನಿಂದಲೇ..! ಪಕ್ಕಾ ಕಮಿಟ್​​​ಮೆಂಟ್​​​​ನೊಂದಿಗೆ ಕರಿಯರ್​ಗಾಗಿ ಎಂತೆಥದ್ದನ್ನೋ ತ್ಯಜಿಸಿದ ಉದಾಹರಣೆಗಳು, ಸಾಕಷ್ಟಿವೆ. ಇದೀಗ ಟೆಸ್ಟ್​​ ಚಾಂಪಿಯನ್​ಶಿಪ್​ಗೂ ಮುನ್ನ ಅಭ್ಯಾಸಕ್ಕೆ ಸಮಯವಿಲ್ಲ ಅನ್ನೋದನ್ನ, ಸ್ವತಃ ಕೊಹ್ಲಿಯೇ ಒಪ್ಪಿದ್ದಾರೆ. ಆದ್ರೆ ರಾಹುಲ್​ ಗಮನ ಮಾತ್ರ ಗರ್ಲ್​​ಫ್ರೆಂಡ್​​ ಹಾಗೂ ಸೋಷಿಯಲ್​ ಮೀಡಿಯಾ ಮೇಲಿರೋ ಹೆಚ್ಚು ಕಾಣಿಸ್ತಿದೆ.

ಹೌದು..! ಇದು ರಾಹುಲ್​ ವೈಯಕ್ತಿಕ ಜೀವನ ಅನ್ನೋದನ್ನ ನಾವು ಒಪ್ಪಿಕೊಳ್ಳಲೇಬೇಕು. ಇದನ್ನ ಪ್ರಶ್ನಿಸುವ ಹಕ್ಕಿಲ್ಲ. ಆದ್ರೂ ಭವಿಷ್ಯದ ದೃಷ್ಟಿಯಿಂದ ರಾಹುಲ್ ಎಚ್ಚೆತ್ತುಕೊಳ್ಳಲೇ ಬೇಕಿದೆ. ಕೆಲ ಪಂದ್ಯಗಳಲ್ಲಿ ಕಮಿಟ್​ಮೆಂಟ್​ನೊಂದಿಗೆ ರಾಹುಲ್​ ಪ್ರದರ್ಶನ ನೀಡಿದ್ರೆ, ಕನ್ನಡದ ಹೆಮ್ಮೆಯ ಆಟಗಾರನ ಮುಂದೆ ಟೀಮ್ ​ಇಂಡಿಯಾದ ನಾಯಕನಾಗುವಂತಹ ಅವಕಾಶವೂ ಇದೆ. ಹೀಗಾಗಿಯೇ ರಾಹುಲ್​ ಆಟದ ಮೇಲೆ ಹೆಚ್ಚು ಗಮನಹರಿಸಲಿ ಅನ್ನೋದು ಒತ್ತಾಸೆ.!

The post ಬಾಲಿವುಡ್​ ನಟಿ ಅತಿಯಾ ಶೆಟ್ಟಿ ಜೊತೆ ಇಂಗ್ಲೆಂಡ್​ಗೆ ಹೋದ್ರಾ ಕೆ.ಎಲ್.ರಾಹುಲ್..? appeared first on News First Kannada.

Source: newsfirstlive.com

Source link