ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‍ರವರು ಚಿತ್ರರಂಗದಲ್ಲಿ 52 ವರ್ಷ ಪೂರೈಸಿದ್ದಾರೆ.

1969ರಲ್ಲಿ ಸಾಥ್ ಹಿಂದೂಸ್ತಾನಿ ಸಿನಿಮಾದ ಮೂಲಕ ಬಾಲಿವುಡ್‍ಗೆ ಪಾದರ್ಪಣೆ ಮಾಡಿದ ಅಮಿತಾಬ್ ಬಚ್ಚನ್ ಮೊಹಬ್ಬಾತಿನ್, ಬಾಗ್ಬನ್, ಪಾ, ಸರ್ಕಾರ್ ನಂತಹ ಹಿಟ್ ಸಿನಿಮಾ ಸಿನಿಮಾಗಳನ್ನು ಸೇರಿದಂತೆ ಇತ್ತೀಚೆಗೆ ಗುಲಾಬೊ ಸೀತಾಬೊ ಸಿನಿಮಾದವರೆಗೂ ಅಭಿನಯಿಸಿದ್ದಾರೆ. ಸದ್ಯ ಬಾಲಿವುಡ್‍ನಲ್ಲಿ ಐದು ದಶಕ ಪೂರೈಸಿರುವ ಅಮಿತಾಬ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್‍ರವರು ತಮ್ಮ ಕೆಲವು ಪ್ರಮುಖ ಸಿನಿಮಾದ ಫೋಟೋಗಳನ್ನು ಕೋಲಾಜ್ ಮಾಡಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಮತ್ತು 52 ವರ್ಷಗಳು. ಒಳ್ಳೆಯದು, ಈ ಚಿತ್ರಗಳ ಸಂಖ್ಯೆಗಾಗಿ ಧನ್ಯವಾದಗಳು. ಇದೆಲ್ಲಾ ಹೇಗೆ ನಡೆಯಿತು ಎಂದು ಇಂದಿಗೂ ಆಶ್ಚರ್ಯವಾಗುತ್ತಿದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಏಳು ಸ್ವಾತಂತ್ರ್ಯ ಹೋರಾಟಗಾರರ ಕಥೆಯನ್ನೊಳಗೊಂಡ ಸಾಥ್ ಹಿಂದೂಸ್ತಾನಿ ಸಿನಿಮಾದ ಸಕ್ಸಸ್ ನಂತರ ಅಮಿತಾಬ್ ಬಚ್ಚನ್‍ಗೆ ವೃತ್ತಿ ಜೀವನದಲ್ಲಿ ರಾಜೇಶ್ ಖನ್ನಾ ಅಭಿನಯದ ಆನಂದ್ ಚಿತ್ರ ಬಹುದೊಡ್ಡ ಹಿಟ್ ತಂದುಕೊಟ್ಟಿತ್ತು. ಕೂಲಿ ಹಾಗೂ ಶೋಲೆ ಸಿನಿಮಾಗಳಲ್ಲಿ ಅಮಿತಾಬ್ ಬಚ್ಚನ್ ಅದ್ಭುತ ಅಭಿನಯವನ್ನು ಜನ ಇಂದಿಗೂ ಇಷ್ಟಪಟ್ಟು ನೋಡುತ್ತಾರೆ.

 

View this post on Instagram

 

A post shared by Amitabh Bachchan (@amitabhbachchan)

ಸದ್ಯ ಚಿತ್ರರಂಗದಲ್ಲಿ 52 ವರ್ಷ ಪೂರೈಸಿದ ಹಿನ್ನೆಲೆ ಅಮಿತಾಬ್ ಬಚ್ಚನ್‍ಗೆ ಅಭಿಮಾನಿಗಳು ಸೇರಿದಂತೆ ಬಾಲಿವುಡ್‍ನ ಗಣ್ಯಾತಿಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಇದನ್ನು ಓದಿ:ನೀರಿನ ಒಳಗಡೆ ಹಾಟ್ ಅವತಾರ – ಕಿಯಾರಾ ಫೋಟೋ ವೈರಲ್

The post ಬಾಲಿವುಡ್‍ನಲ್ಲಿ 52 ವರ್ಷ ಪೂರೈಸಿದ ಬಿಗ್ ಬಿ appeared first on Public TV.

Source: publictv.in

Source link