ನವದೆಹಲಿ: ಬಾಲಿವುಡ್​ನ ದಂತಕಥೆ ದಿಲೀಪ್ ಕುಮಾರ್​​ ಅವರ ಆರೋಗ್ಯ ಹದಗೆಟ್ಟಿದ್ದು, ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತಾ ವರದಿಗಳು ಹೇಳಿವೆ.

ಹೃದ್ರೋಗ ತಜ್ಞರಾದ ಡಾ.ನಿತಿನ್ ಗೋಖಲೆ ಮತ್ತು ಶ್ವಾಸಕೋಶ ತಜ್ಞರಾದ ಡಾ.ಜಲಿಲ್ ಪರ್​ಕರ್​ ಅವರು ಹಿರಿಯ ನಟ ಆರೋಗ್ಯದ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಇದೀಗ ಬಂದ ಮಾಹಿತಿ ಪ್ರಕಾರ ದಿಲೀಪ್ ಕುಮಾರ್​ ಅವರು ಕೃತಕ ಆಕ್ಸಿಜನ್ ಸಹಾಯದಿಂದ ಉಸಿರಾಟ ನಡೆಸುತ್ತಾರೆ. ದೇಹದಲ್ಲಿ ಆಕ್ಸಿಜನ್ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಐಸಿಯುನಲ್ಲಿ ಇಲ್ಲ. ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ ಅವರು ಗುಣಮುಖರಾಗಿ ಡಿಸ್ಚಾರ್ಜ್​ ಆಗಲಿದ್ದಾರೆ ಅಂತಾ ಡಾ.ನಿತಿನ್ ತಿಳಿಸಿದ್ದಾರೆ.

ದೇಹದಲ್ಲಿ ಹಿಮಗ್ಲೋಬಿನ್​​ ಕೊರತೆ ಕೂಡ ಕಾಣಿಸಿಕೊಂಡಿದೆ. ವೈದ್ಯರೂ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲಾ ಪರೀಕ್ಷೆಗಳನ್ನೂ ಮಾಡಿದ್ದಾರೆ. ಇನ್ನು 98 ವರ್ಷದ ದಿಲೀಪ್ ಕುಮಾರ್ ಅವರು ಕಳೆದ ತಿಂಗಳು ಎಂದಿನಂತೆ ವೈದ್ಯರ ತಪಾಸಣೆಗೆ ಒಳಗಾಗಿ ಡಿಸ್ಚಾರ್ಜ್​ ಆಗಿದ್ದರು. ದಿಲೀಪ್ ಕುಮಾರ್ ಅವರು ಕಳೆದ ವರ್ಷ ಇಬ್ಬರು ಕಿರಿಯ ಸಹೋದರರನ್ನ ಕಳೆದುಕೊಂಡಿದ್ದರು.

ಇನ್ನು ದಿಲೀಪ್ ಕುಮಾರ್​ ಅವರು 1944 ರಲ್ಲಿ ತೆರೆಕಂಡ Jwar Bhata ಚಿತ್ರದ ಮೂಲಕ ಬಾಲಿವುಡ್​ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಕೊಹಿನೂರ್, ಮಘಲ್ -ಇ-ಅಝಮ್, ದೇವದಾಸ್, ನಯಾ ದೌರ್, ರಾಮ್ ಔರ್ ಶ್ಯಾಮ್ ಸೇರಿದಂತೆ ಅನೇಕ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ 1998 ರಲ್ಲಿ ತೆರೆಕಂಡ Qila ಚಿತ್ರದಲ್ಲಿ ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದಾರೆ.

The post ಬಾಲಿವುಡ್ ದಂತಕತೆ ದಿಲೀಪ್ ಕುಮಾರ್​​ ಏನಾಗಿದೆ? ವೈದ್ಯರು ಹೇಳಿದ್ದೇನು?   appeared first on News First Kannada.

Source: newsfirstlive.com

Source link