ನಮ್ಮ ಅಂದದ ಕನ್ನಡವನ್ನ ಚೆಂದದ ಜಾಕ್ವೆಲಿನ್ ಅಕ್ಕರೆಯಿಂದ ಸಕ್ಕರೆಯಂತೆ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದಾರೆ..

ತನ್ನ ಪಾಲಿಗೆ ಬಂದ ಕನ್ನಡದ ಅವಕಾಶವನ್ನ ಕಣ್ಣಿಗೆ ಒತ್ಕೊಂಡು, ಒಂದೆರಡು ಕನ್ನಡ ಪದವನ್ನ ಕಲಿತುಕೊಂಡು ಮುಂಬೈಗೆ ಹಾರಿದ್ದಾರೆ ಜಾಕ್ವೆಲಿನ್​ ಫರ್ನಾಂಡಿಸ್​​​.. ಎರಡೇ ದಿನಗಳ ಹಿಂದೆ ನಾವು ನಿಮ್ಗೆ ಜಾಕ್ವೆಲಿನ್ ಕನ್ನಡ ಮಾತನಾಡಿರೋ ಒಂದು ತುಣುಕನ್ನ ತೋರಿಸಿದ್ವಿ.. ಶ್ರೀಲಂಕನ್ ಜೀವಂತ ಶೀಲಾ ಬಾಲಿಕೆ ‘‘ಸ್ವಲ್ಪ ಜೋಪಾನ’’ ಅನ್ನೊ ಮಾತನ್ನ ತನ್ನ ಮೇಕಪ್ ಮ್ಯಾನ್ ಜೊತೆ ಮಾತನಾಡಿ ಸಂತೋಷ ಪಟ್ಟಿದ್ದರು.. ‘‘ಸ್ವಲ್ಪ ಜೋಪಾನ’’ ಅನ್ನೋ ಪದವನ್ನಷ್ಟೇ ಅಲ್ಲ ಇನ್ನೂ ಭಾರೀ ಭೂರಿ ಕನ್ನಡ ಪದಗಳು ಜಾಕ್ವೆಲಿನ್ ಫರ್ನಾಂಡಿಸ್ ನಾಲಿಗೆಯಲ್ಲಿ ನಲಿದಾಡಿದ್ದಾವೆ.

ವಿಕ್ರಾಂತ್ ರೋಣ ಸಿನಿಮಾದ ಶೂಟಿಂಗ್​​ಗಾಗಿ ಈ ತಿಂಗಳ 10ನೇ ತಾರೀಖ್ ನಮ್ಮ ರಾಜಧಾನಿ ಬೆಂಗಳೂರಿಗೆ ಬಂದಿಳಿದ್ದರು ಜಾಕ್ವಿ.. ಇಲ್ಲೇ ದಶಕದಿಂದಲೇ ಇದ್ದು ಗೆದ್ದು ಎದ್ದು ಹೋಗಿ ಒಂದಕ್ಷರ ಕನ್ನಡವನ್ನ ಕಲಿಯದೇ ಮೆರೆಯುತ್ತಿರೋ ಈ ಕಾಲದಲ್ಲಿ, ಬಾಲಿವುಡ್ ಬ್ಯೂಟಿ ಕೇವಲ ಆರೇ ದಿನಗಳಲ್ಲಿ ಅಕ್ಕರೆಯಂತ ಸಕ್ಕರೆಯ ನಮ್ಮ ಕನ್ನಡವನ್ನ ಕಲಿಯಲು ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದಾರೆ..

ಕೇಳಿದ್ರಲ್ಲ ಜಾಕ್ವೆಲಿನ್ ಫರ್ನಾಂಡಿಸ್ ಅವರ ಕನ್ನಡ ಮಾತನಾಡೋ ಪ್ರಯತ್ನವನ್ನ.. ಇನ್ನು ಈ ಸಿನಿಮಾದ ಅನುಭವದ ಬಗ್ಗೆ ಜಾಕ್ವೆಲಿನ್ ಫರ್ನಾಂಡಿಸ್ ತನ್ನ ಅಭಿಪ್ರಾಯವನ್ನ ಮಂಡಿಸಿದ್ದು ಹೇಗೆ..

ನನ್ನನ್ನು ಕನ್ನಡ ಚಿತ್ರರಂಗಕ್ಕೆ ಕರೆಸಿಕೊಂಡಿದಕ್ಕೆ ಧನ್ಯವಾದಗಳು. ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ. ಇಲ್ಲಿ ನಮ್ಮನ್ನು ನೋಡಿಕೊಳ್ಳುವ ರೀತಿ ಅತ್ಯದ್ಭುತವಾಗಿದೆ. ವಿಕ್ರಾಂತ್ ರೋಣ ಸಿನಿಮಾವನ್ನು ನೀವು ಎಂಜಾಯ್ ಮಾಡ್ತೀರಾ ಎಂದು ಭಾವಿಸಿದ್ದೇನೆ, ಜೊತೆೆಗೆ ಅದರಲ್ಲಿನ ನನ್ನ ಕ್ಯಾರೆಕ್ಟರ್ ಅನ್ನೂ ನೀವು ಇಷ್ಟ ಪಡ್ತೀರಾ ಅಂದುಕೊಂಡಿದ್ದೇನೆ. ಕೊನೆಯಲ್ಲಿ ನನ್ನ ಮಾತು, ಇದು ಕನ್ನಡ್ ಅಲ್ಲ, ಕನ್ನಡ.

ಶ್ರೀಲಂಕನ್ ಪ್ರಜೆಯಾಗಿದ್ದರೂ ಇಂಡಿಯನ್ ಸಿನಿ ರಸಿಕರಿಗೆ ಜಾಕ್ವೆಲಿನ್ ಫರ್ನಾಂಡಿಸ್ ಅಚ್ಚು ಮೆಚ್ಚು.. ಕಾರಣ ಈಕೆ ಸಿನಿಮಾ ಸೆಟ್​​ನಲ್ಲಿ ನಡೆದುಕೊಳ್ಳುವ ಒಳ್ಳೆಯ ನಡತೆ ಮತ್ತು ನಮ್ಮ ಸಂಸ್ಕೃತಿ ಹಾಗೂ ಭಾಷೆಗಳ ಮೇಲೆ ಜಾಕ್ವಿಗಿರೋ ಗೌರವ.. ಆರು ದಿನಗಳ ಕಾಲ ಬೆಂಗಳೂರಿನಲ್ಲಿ ಇದ್ದ ಜಾಕ್ವಿ ಕನ್ನಡವನ್ನ ಕಲಿಯೋದಕ್ಕೆ ಪ್ರಯತ್ನ ಪಟ್ಟಿದ್ದಾರೆ.. ಒಟ್ಟಿನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಎಂಟ್ರಿ ವಿಕ್ರಾಂತ್ ರೋಣ ತಂಡಕ್ಕೆ ಹೊಸ ಜೋಶ್ ಕೊಟ್ಟಿದೆ.. ನಿರ್ಮಾಪಕ ಜಾಕ್ ಮಂಜು ಕೋಟಿ ಕೋಟಿ ಖರ್ಚ್ ಮಾಡಿ ದೊಡ್ಡ ಕನಸಿನೊಂದಿಗೆ ವಿಕ್ರಾಂತ್ ರೋಣ ಸಿನಿಮಾವನ್ನ ಯುನಿವರ್ಸೆಲ್ ಪ್ರೇಕ್ಷಕರ ಮುಂದೆ ಇಡಲು ಶ್ರಮಿಸುತ್ತಿದ್ದಾರೆ..

The post ಬಾಲಿವುಡ್ ಬ್ಯೂಟಿಯ ಬಾಯಲ್ಲಿ ಕನ್ನಡ ಪದಗಳ ಕೇಳೋದೇ ಚಂದ appeared first on News First Kannada.

Source: newsfirstlive.com

Source link