ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್​​ಗೆ ಶಾಕ್ ಕೊಟ್ಟ ಬಿಎಂಸಿ

ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್​​ಗೆ ಶಾಕ್ ಕೊಟ್ಟ ಬಿಎಂಸಿ

ಮುಂಬೈ: ಬಾಲಿವುಡ್ ನಟ ಬಿಗ್​ ಬಿ ಅಮಿತಾಭ್ ಬಚ್ಚನ್ ಅವರ ಮುಂಬೈನ ಪ್ರತೀಕ್ಷಾ ಬಂಗಲೆಯ ಕೆಲ ಭಾಗವನ್ನ ಡೆಮಾಲಿಷ್ ಮಾಡಲು ಬೃಹನ್​ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಮುಂದಾಗಿದೆ.

ರಸ್ತೆ ಅಗಲೀಕರಣಕ್ಕಾಗಿ ಬಂಗಲೆಯ ಕೆಲ ಭಾಗವನ್ನ ನಾಶ ಮಾಡಬೇಕಾಗುತ್ತದೆಂದು 2017 ರಲ್ಲೇ ಬಿಎಂಸಿ ಅಮಿತಾಭ್ ಬಚ್ಚನ್ ಅವರಿಗೆ ನೋಟಿಸ್ ನೀಡಿತ್ತು. ಆದರೆ ಬೇರೆಲ್ಲಾ ಭಾಗದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಅಡ್ಡಲಾಗಿದ್ದ ಆಸ್ತಿ ಪಾಸ್ತಿಯನ್ನು ವಶಪಡಿಸಿಕೊಂಡು ಕಾಮಗಾರಿ ಮಾಡಲಾಗಿದ್ದು ಅಮಿತಾಭ್ ಬಚ್ಚನ್ ಅವರ ಬಂಗಲೆಯನ್ನಷ್ಟೇ ಹಾಗೇ ಬಿಡಲಾಗಿತ್ತು ಎನ್ನಲಾಗಿದೆ.

ಇದೀಗ ಬಿಎಂಸಿ ಮುಂಬೈ ಸಬರ್ಬನ್ ಕಲೆಕ್ಟರ್ ಸಿಟಿ ಸರ್ವೆ ಅಧಿಕಾರಿಗಳಿಗೆ ಬಂಗಲೆಯಲ್ಲಿ ನೆಲಸಮ ಮಾಡಬೇಕಾದ ಭಾಗವನ್ನ ಮಾರ್ಕ್ ಮಾಡುವಂತೆ ಸೂಚನೆ ನೀಡಲಾಗಿದೆ.

ಈ ಹಿಂದೆಯೇ ಈ ಕೆಲಸ ಆಗಬೇಕಿತ್ತು. ಆದ್ರೆ ಇನ್ನೂ ಆಗಿಲ್ಲ ಎಂದು ಆರೋಪಿಸಿರುವ ವಕೀಲೆ ಟುಲಿಪ್ ಬ್ರಿಯಾನ್ ಮಿರಾಂಡ, ಬಿಎಂಸಿ ಯಾಕೆ ಬೇರೆಲ್ಲ ಮನೆಗಳನ್ನ ನೆಲಸಮ ಮಾಡಿ ಬಾಲಿವುಡ್ ನಟರ ಮನೆಗಳನ್ನ ಹಾಗೇ ಬಿಟ್ಟಿದ್ದು? ಪ್ರಮುಖ ಕಾಮಗಾರಿಗಳು ಅರ್ಧಕ್ಕೇ ನಿಂತುಹೋಗಿವೆ ಎಂದಿದ್ದಾರೆ.

ಬಿಎಂಸಿಯಿಂದ 2017ಲ್ಲೇ ಅಮಿತಾಭ್ ಬಚ್ಚನ್​ಗೆ ಈ ವಿಚಾರವಾಗಿ ನೋಟಿಸ್ ನೀಡಲಾಗಿತ್ತು. ಬಚ್ಚನ್ ಅವರ ಬಂಗಲೆಗೆ ಅಂಟಿಕೊಂಡಿದ್ದ ಗೋಡೆಯನ್ನ ಕೆಡವಿ ಕಾಲುವೆ ನಿರ್ಮಿಸಲಾಗಿದೆ. ಆದರೆ ಬಚ್ಚನ್ ಅವರ ಮನೆಯನ್ನು ಮಾತ್ರ ಮುಟ್ಟಿಲ್ಲ.. ನೋಟಿಸ್ ನೀಡಿದ್ದಾರೆ ಎಂದ ಮೇಲೆ ಭೂಮಿಯನ್ನ ವಶಕ್ಕೆ ಪಡೆಯಲಿಲ್ಲವೇಕೆ..? ಅದು ಸಾಮಾನ್ಯ ಜನರಿಗೆ ಸೇರಿದ್ದು.. ಮತ್ತೊಂದು ನೋಟಿಸ್ ಬರಲೆಂದು ಅವರು ಕಾಯಬಾರದು. ನಾನು 2021ರ ಫೆಬ್ರವರಿ ತಿಂಗಳಲ್ಲಿ ಬಿಎಂಸಿಗೆ ಈ ವಿಚಾರವಾಗಿ ಪತ್ರ ಬರೆದಿದ್ದೆ. ನನಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ನಾನು ಫೋನ್ ಮೂಲಕ ಮಾತನಾಡಿದೆ. ಆದರೂ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಇದು ಬಹಳ ಮುಖ್ಯವಾದ ಪ್ರಾಜೆಕ್ಟ್. ಯಾಕೆಂದರೆ ಹತ್ತಿರದಲ್ಲಿ ಎರಡು ಶಾಲೆಗಳು, ಆಸ್ಪತ್ರೆ, ಇಸ್ಕಾನ್ ದೇವಸ್ಥಾನ, ಮತ್ತು ಮುಂಬೈನ ಕೆಲವು ಪುರಾತನ ಕಟ್ಟಡಗಳಿವೆ. ಅಮಿತಾಭ್ ಬಚ್ಚನ್ ಅವರ ಬಂಗಲೆ ಇದೆ ಎಂಬ ಕಾರಣಕ್ಕೆ ಆ ಪ್ರಾಜೆಕ್ಟ್​ನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಗಿತ್ತು- –ಬ್ರಿಯಾನ್ ಮಿರಾಂಡ, ವಕೀಲೆ

The post ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್​​ಗೆ ಶಾಕ್ ಕೊಟ್ಟ ಬಿಎಂಸಿ appeared first on News First Kannada.

Source: newsfirstlive.com

Source link