
ಡ್ಯಾನ್ಸಿಂಗ್ ದಾದಿ
ರವಿ ಬಾಲಾ ಶರ್ಮಾ ಅವರು ಡ್ಯಾನ್ಸ್ ಮಾಡುವುದರಲ್ಲಿ ತುಂಬಾನೇ ಫೇಮಸ್. ಅವರ ಎನರ್ಜಿಗೆ ವಯಸ್ಸು ಅಡ್ಡ ಬಂದಿಲ್ಲ. ಸಾಕಷ್ಟು ರೀಲ್ಸ್ ಮಾಡಿ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ. ಇದಕ್ಕೆ ಲಕ್ಷಾಂತರ ವೀವ್ಸ್ ಬರುತ್ತವೆ.
ಸಾಕಷ್ಟು ಹಾಡುಗಳು ಅದ್ಯಾವಮಟ್ಟಿಗೆ ಹಿಟ್ ಆಗುತ್ತವೆ ಎಂದರೆ ಎಂದಿಗೂ ಆ ಹಾಡು ಚಾಲ್ತಿಯಲ್ಲಿರುತ್ತದೆ. ಡ್ಯಾನ್ಸ್ ಮಾಡುವವರಿಗೆ ಕೆಲ ಸಾಂಗ್ ಅಚ್ಚುಮೆಚ್ಚು. ಅದೇ ರೀತಿ ಡ್ಯಾನ್ಸಿಂಗ್ ದಾದಿ (Dancing Dadi) ಎಂದೇ ಫೇಮಸ್ ಆಗಿರುವ ರವಿ ಬಾಲಾ ಶರ್ಮಾ (Ravi Bala Sharma) ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್. ಹಲವು ಹಾಡಿಗೆ ಅವರು ಡ್ಯಾನ್ಸ್ ಮಾಡುತ್ತಾರೆ. ಈಗ 2012ರ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ 63 ವರ್ಷದ ಅಜ್ಜಿಯ ಎನರ್ಜಿ ನೋಡಿ ನೆಟ್ಟಿಗರು ಸಖತ್ ಖುಷಿಪಟ್ಟಿದ್ದಾರೆ.
ರವಿ ಬಾಲಾ ಶರ್ಮಾ ಅವರು ಡ್ಯಾನ್ಸ್ ಮಾಡುವುದರಲ್ಲಿ ತುಂಬಾನೇ ಫೇಮಸ್. ಅವರ ಎನರ್ಜಿಗೆ ವಯಸ್ಸು ಅಡ್ಡ ಬಂದಿಲ್ಲ. ಸಾಕಷ್ಟು ರೀಲ್ಸ್ ಮಾಡಿ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ. ಇದಕ್ಕೆ ಲಕ್ಷಾಂತರ ವೀವ್ಸ್ ಬರುತ್ತವೆ. ಫ್ಯಾನ್ಸ್ ಅವರನ್ನು ತುಂಬಾನೇ ಇಷ್ಟಪಡುತ್ತಾರೆ. ಈಗ ಅವರು ಮಾಡಿರುವ ಹೊಸ ವಿಡಿಯೋವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
ಅರ್ಜುನ್ ಕಪೂರ್ ಹಾಗೂ ಪರಿಣೀತಿ ಚೋಪ್ರಾ ನಟನೆಯ ‘ಇಶಕ್ಜಾದೇ’ ಸಿನಿಮಾ 2012ರಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾದ ‘ಚೋಕ್ರಾ ಜವಾನ್..’ ಹಾಡು ಹಿಟ್ ಆಗಿತ್ತು. ಕೇಳುಗರು ಈ ಹಾಡನ್ನು ಅನೇಕರು ಈಗಲೂ ಇಷ್ಟಪಡುತ್ತಾರೆ. ಈ ಫೇಮಸ್ ಹಾಡಿಗೆ ರವಿ ಬಾಲಾ ಶರ್ಮಾ ಹೆಜ್ಜೆ ಹಾಕಿದ್ದಾರೆ.