ನವದೆಹಲಿ: ಬಾಲಿವುಡ್​ ಹಿರಿಯ ನಟ ನಾಸೀರುದ್ದೀನ್ ಶಾ(70) ಅನಾರೋಗ್ಯದಿಂದಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಸೀರುದ್ದೀನ್ ಶಾ ಅವರು ನ್ಯೂಮೋನಿಯಾದಿಂದ ಬಳಲುತ್ತಿದ್ದಾರೆ ಎಂದು ಅವರ ಪತ್ನಿ ನಟಿ ರತ್ನ ಪಾಥಕ್ ಶಾ ಹೇಳಿಕೆ ನೀಡಿದ್ದಾರೆ.

ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ನಾಸೀರುದ್ದೀನ್ ಶಾ ಚಿಕಿತ್ಸೆಗೆ ಒಳಗಾಗಿದ್ದು ಅವರ ಶ್ವಾಸಕೋಶದಲ್ಲಿ ನ್ಯೂಮೋನಿಯಾದ ಸಣ್ಣ ಪ್ಯಾಚ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸದ್ಯ ನಾಸೀರುದ್ದೀನ್ ಶಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋ ಸಾಧ್ಯತೆಗಳಿವೆ ಎಂದಿದ್ದಾರೆ.

ನಾಸೀರುದ್ದೀನ್ ಶಾ ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಮೂರು ನ್ಯಾಷನಲ್ ಫಿಲ್ಮ್ ಅವಾರ್ಡ್​ಗಳನ್ನು ಪಡೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಪ್ರಾಜೆಕ್ಟ್​ಗಳಲ್ಲೂ ನಾಸೀರುದ್ದೀನ್ ಶಾ ಕೆಲಸ ಮಾಡಿದ್ದಾರೆ.

The post ಬಾಲಿವುಡ್ ಹಿರಿಯ ನಟ ನಾಸೀರುದ್ದೀನ್ ಶಾ ಆಸ್ಪತ್ರೆಗೆ ದಾಖಲು appeared first on News First Kannada.

Source: newsfirstlive.com

Source link