ಚಾಮರಾಜನಗರ: ಬಾಲ್ಯ ವಿವಾಹವನ್ನ ತಡೆದಿದ್ದಕ್ಕೆ ಕೋಪಗೊಂಡ ಮನೆ ಮಾಲೀಕ ಬಾಡಿಗೆ ನೀಡಿದ್ದ, ಅಂಗನವಾಡಿ ಕೇಂದ್ರವನ್ನೇ ಖಾಲಿ ಮಾಡಿಸಿದ ಘಟನೆ ಜಿಲ್ಲೆಯ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವಕುಮಾರ್​ ಎಂಬುವವರ ಮನೆಯಲ್ಲಿ ಅಂಗನವಾಡಿ ಕೇಂದ್ರವು ಬಾಡಿಗೆಯಲ್ಲಿ ನಡೆಯುತ್ತಿತ್ತು, ತನ್ನ ಮಗಳ ಬಾಲ್ಯವಿವಾಹವನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆದಿದ್ದರಿಂದ ಕೋಪಗೊಂಡ ಮನೆಯ ಮಾಲೀಕ ಅಂಗನವಾಡಿಯಲ್ಲಿನ ಆಹಾರ ಪದಾರ್ಥಗಳು ಮತ್ತು ಇತರ ಸಾಮಾನುಗಳನ್ನು ಬೀದಿಗೆ ಚೆಲ್ಲಿ ಕೇಂದ್ರವನ್ನ ಖಾಲಿ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

The post ಬಾಲ್ಯ ವಿವಾಹ ತಡೆದಿದ್ದಕ್ಕೆ ಬೀದಿಗೆ ಬಿತ್ತು ಅಂಗನವಾಡಿ ಕೇಂದ್ರ appeared first on News First Kannada.

Source: newsfirstlive.com

Source link