ಚೆನ್ನೈ: ಕೊರೊನಾ ಸಂಕಷ್ಟದಲ್ಲಿ ಊಟವಿಲ್ಲದೆ ಹಸಿವಿನಿಂದ ಇರುವವರಿಗಾಗಿ ತಮಿಳುನಾಡಿನ ತೂತುಕುಡಿ ಕೋವಿಲ್‍ಪಟ್ಟಿಯ ಹಣ್ಣಿನ ವ್ಯಾಪಾರಿಯೊಬ್ಬರು ಹಸಿದವರಿಗಾಗಿ ತನ್ನಿಂದಾದ ಅಳಿಲು ಸೇವೆ ಮಾಡಲು ಹಣ್ಣಿನ ಅಂಗಡಿಯ ಎದುರು ಪ್ರತಿದಿನ ಬಾಳೆಗೊನೆಯನ್ನು ನೇತು ಹಾಕುತ್ತಿದ್ದಾರೆ.

ತಮ್ಮ ಹಣ್ಣಿನ ಅಂಗಡಿಯ ಎದುರು ಪ್ರತಿದಿನ ಬಾಳೆಗೊನೆಗಳನ್ನು ನೇತು ಹಾಕುವ ವ್ಯಾಪಾರಿ ಮುತ್ತುಪಾಂಡಿ ಅದರ ಜೊತೆಗೆ ಬೋರ್ಡ್ ಒಂದನ್ನೂ ಸಹ ನೇತು ಹಾಕುತ್ತಾರೆ. ನೀವು ಹಸಿದಿದ್ದೆ ಈ ಬಾಳೆಹಣ್ಣನ್ನು ಉಚಿತವಾಗಿ ತೆಗೆದುಕೊಳ್ಳಿ, ಆದರೆ ವೇಸ್ಟ್ ಮಾಡಬೇಡಿ ಎಂದು ಬರೆದಿಡುತ್ತಾರೆ.

 

ಮುತ್ತುಪಾಂಡಿ ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ ವಲಸಿಗರು, ವೃದ್ಧರು, ಫೂಟ್‍ಪಾತ್‍ಗಳಲ್ಲೇ ಬದುಕುವವರು ಈ ಬಾಳೆಹಣ್ಣನ್ನು ತಿಂದು ತಮ್ಮ ಹಸಿವು ನೀಗಿಸಿಕೊಳ್ಳುತ್ತಿದ್ದಾರೆ.

The post ಬಾಳೆಗೊನೆ ನೇತು ಹಾಕಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ ವ್ಯಾಪಾರಿ appeared first on Public TV.

Source: publictv.in

Source link