ಜಗತ್ತನ್ನೇ ಕಾಡಿದ ಕೊರೊನಾ ವೈರಸ್ ಭೀತಿ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇನ್ನೇನು ಎಲ್ಲವೂ ಮುಗಿಯಿತು ಅನ್ನುತ್ತಿದ್ದ ಹಾಗೇ ಹೊಸ ಹೊಸ ಅಲೆಗಳ ರೂಪದಲ್ಲಿ ಸೋಂಕು ಹರಡುತ್ತಿದ್ದು ಮತ್ತಷ್ಟು ಆತಂಕ ಹೆಚ್ಚಿಸುತ್ತಿದೆ. ಇದೀಗ ಚೀನಾದ ಸಂಶೋಧಕರು ಮತ್ತೊಂದು ಶಾಕಿಂಗ್ ಸುದ್ದಿ ಹೊರಹಾಕಿದ್ದು ಅಲ್ಲಿನ ಬಾವಲಿಗಳಲ್ಲಿ ಸಂಶೋಧಕರು 24 ಬಗೆಯ ಕೊರೊನಾ ವೈರಸ್​ಗಳನ್ನ ಪತ್ತೆಹಚ್ಚಿರುವುದಾಗಿ ಹೇಳಿದ್ದಾರೆ.

ಹೊಸದಾಗಿ ಪತ್ತೆಯಾಗಿರುವ ಕೊರೊನಾ ವೈರಸ್​ಗಳ ಪೈಕಿ ಒಂದು ಕೋವಿಡ್ 19 ವೈರಸ್​​ಗೆ ಅತೀ ಹೆಚ್ಚು ಹೋಲಿಕೆಯಾಗುತ್ತದೆ ಎಂದಿದ್ದಾರೆ.

ಸೆಲ್ ಹೆಸರಿನ ಜರ್ನಲ್​ ಒಂದರಲ್ಲಿ ತಮ್ಮ ವರದಿಯನ್ನ ಪ್ರಕಟಿಸಿರುವ ಸಂಶೋಧಕರು.. ಒಟ್ಟು 24 ನಾವೆಲ್ ಕೊರೊನಾ ವೈರಸ್​ಗಳನ್ನು ಬಾವಲಿಗಳಲ್ಲಿ ಪತ್ತೆಹಚ್ಚಲಾಗಿದ್ದು ಈ ಪೈಕಿ ನಾಲ್ಕು SARS-CoV-2 ಮಾದರಿಯ ಕೊರೊನಾ ವೈರಸ್​ಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.

2019 ರ ಮೇ ತಿಂಗಳಿನಿಂದ 2021 ನವೆಂಬರ್​ ನ ಅವಧಿಯಲ್ಲಿ ಈ ಸ್ಯಾಂಪಲ್​ಗಳನ್ನು ಸಂಗ್ರಹಿಸಲಾಗಿತ್ತು.. ಬಾವಲಿಗಳ ಬಾಯಿಯ ಎಂಜಲು ಮತ್ತು ಮೂತ್ರವನ್ನು ಸ್ಯಾಂಪಲ್​ ಆಗಿ ಸಂಗ್ರಹಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

The post ಬಾವಲಿಗಳಲ್ಲಿ 24 ಬಗೆಯ ಕೊರೊನಾ ವೈರಸ್ ಪತ್ತೆ: ಬೆಚ್ಚಿಬಿದ್ದ ಚೀನಾ ಸಂಶೋಧಕರು appeared first on News First Kannada.

Source: newsfirstlive.com

Source link