ನವದೆಹಲಿ: ಬಾವಿಗೆ ಬಿದ್ದ ಮಗುವನ್ನ ರಕ್ಷಣೆ ಮಾಡಲು ಹೋಗಿ, 30ಕ್ಕೂ ಹೆಚ್ಚು ಮಂದಿ ಬಾವಿಯೊಳಗೆ ಜಾರಿದ ದುರ್ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಿನ್ನೆ ಸಂಜೆ ನಡೆದಿದೆ. ಈ ಘಟನೆಯಲ್ಲಿ 4 ಮಂದಿ ಸಾವನ್ನಪ್ಪಿದ್ದು, ಉಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ನಿನ್ನೆ ಸಂಜೆ ಆಟವಾಡುತ್ತಿದ್ದ 8 ವರ್ಷದ ಬಾಲಕಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಳು. ಕೂಡಲೇ ಅಗ್ನಿಶಾಮ ಸಿಬ್ಬಂದಿ ಹಾಗೂ ರಕ್ಷಣಾ ತಂಡ ರಕ್ಷಣೆಯ ಕೆಲಸದಲ್ಲಿ ತೊಡಗಿತ್ತು. ಈ ರಕ್ಷಣಾ ಕಾರ್ಯಾಚರಣೆ ನೋಡಲು ನೂರಾರು ಮಂದಿ ಬಂದಿದ್ದರು. ಈ ವೇಳೆ ಬಾವಿಯ ಪಕ್ಕದಲ್ಲಿದ್ದ ಮಣ್ಣು ಹಾಗೂ ತಡೆಗೋಡೆ ಕುಸಿದು 30ಕ್ಕೂ ಹೆಚ್ಚು ಮಂದಿ ಬಾವಿಯೊಳಗೆ ಬಿದ್ದಿದ್ದಾರೆ.

ಧಾರಾಕಾರ ಮಳೆಯೇ ಕಾರಣ
ದುರ್ಘಟನೆಗೆ ಧಾರಾಕಾರ ಮಳೆಯೇ ಕಾರಣ ಎನ್ನಲಾಗಿದೆ. ಕೆಲವು ದಿನಗಳಿಂದ ಬಿಡುವಿಲ್ಲದೇ ಮಳೆ ಸುರಿಯುತ್ತಿದ್ದರಿಂದ ಬಾವಿಗೆ ಅಡ್ಡಲಾಗಿದ್ದ ತಡೆಗೋಡೆ ಗೋಡೆ ಹಾಗೂ ಅಲ್ಲಿರುವ ಮಣ್ಣು ಕುಸಿದು ದುರಂತ ಸಂಭವಿಸಿದೆ ಎನ್ನಲಾಗಿದೆ. ಇನ್ನು ಜೋರಾಗಿ ಸುರಿಯುತ್ತಿರೋದ್ರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಈಗಾಗಲೇ 23 ಮಂದಿಯನ್ನ ರಕ್ಷಣೆ ಮಾಡಲಾಗಿದ್ದು, ಗಾಯಗೊಂಡಿರುವ 13 ಜನರನ್ನ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೊಲೀಸರು ಹೇಳಿದ್ದೇನು..?
ಬಾವಿಯ ಪಕ್ಕ ಆಟವಾಡ್ತಿದ್ದ ಬಾಲಕಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಳು. ಈ ವೇಳೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ತುಂಬಾ ಜನ ಸೇರಿದ್ದರು. ಈ ವೇಳೆ ಭಾರ ತಡೆಯಲಾಗದೆ ಮಣ್ಣು ಕಸಿದಿದೆ ಅಂತಾ ಎಂದು ಭೋಪಾಲ್ ವಿಭಾಗೀಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸಾಯಿ ಮನೋಹರ್ ಮಾಹಿತಿ ನೀಡಿದ್ದಾರೆ.

5 ಲಕ್ಷ ಪರಿಹಾರ ಘೋಷಣೆ
ಇನ್ನು ಬಾಲಕಿಯ ರಕ್ಷಣೆ ಇನ್ನೂ ಆಗಿಲ್ಲ. ಬಾವಿ ಸುಮಾರು 50 ಫೀಟ್ ಆಳದಲ್ಲಿದೆ. ಮಳೆಗಾಲ ಹಿನ್ನೆಲೆಯಲ್ಲಿ 20 ವರೆಗೆ ನೀರು ತುಂಬಿಕೊಂಡಿದೆ ಅಂತಾ ಹೇಳಲಾಗಿದೆ. ಇನ್ನು ಮೃತರ ಕುಟುಂಬಕ್ಕೆ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಸಂತಾಪ ಸೂಚಿಸಿದ್ದಾರೆ. ಜೊತೆಗೆ ತುರ್ತು ರಕ್ಷಣಾ ಕಾರ್ಯಾಚರಣೆ ಮಾಡುವಂತೆ ಸೂಚನೆಯನ್ನ ನೀಡಿದ್ದಾರೆ. ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರ ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನೂ ಘೋಷಿಸಿದ್ದಾರೆ.

The post ಬಾವಿಗೆ ಬಿದ್ದ ಮಗು ರಕ್ಷಣೆ ವೇಳೆ ದುರಂತ: ಮಣ್ಣು ಕುಸಿದು ಬಾವಿಗೆ ಬಿದ್ರು 30ಕ್ಕೂ ಹೆಚ್ಚು ಮಂದಿ, 4 ಸಾವು appeared first on News First Kannada.

Source: newsfirstlive.com

Source link