ನವದೆಹಲಿ: ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಮೆರುಗು ನೀಡುವ ಕೋಣಗಳ ಸದರ್ ಉತ್ಸವ ಹೈದರಾಬಾದ್ನಲ್ಲಿ ಅದ್ಧೂರಿಯಿಂದ ನಡೆಯಿತು.
ಉತ್ಸವದಲ್ಲಿ ಬಾಹುಬಲಿ ಹೆಸರಿನ ಕೋಣ ಹೆಚ್ಚು ಗಮನ ಸೆಳೆದಿದೆ. ಹರಿಯಾಣದ ಬಲ್ವೀರ್ ಸಿಂಗ್ ತಂದಿದ್ದ ಬಾಹುಬಲಿ ಕೋಣಕ್ಕೆ ಹೈದರಾಬಾದ್ನ ಚಾಪೆಲ್ ಬಜಾರ್ನ ಲಡ್ಡು ಯಾದವ್ ಎಂಬ ವ್ಯಕ್ತಿ ಸುಮಾರು 3 ಕೆ.ಜಿ ತೂಕವಿರುವ, ಮೂರು ಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ತೊಡಿಸಿ ಸುದ್ದಿಯಾಗಿದ್ದಾರೆ.
ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ಸದರ ಸಂಭ್ರಮಕ್ಕೆ ನಿನ್ನೆ ಹೈದರಾಬಾದ್ ಸಜ್ಜಾಗಿತ್ತು. ತಾಳಮದ್ದಳೆ, ರಸಮಂಜರಿಗಳಿಂದ ಕೂಡಿದ ಮೆರವಣಿಗೆಗಳು ನಡೆದವು. ಈ ಉತ್ಸವದಲ್ಲಿ ಈ ಕೋಣ ನಿನ್ನೆಯ ದಿನ ಪ್ರಮುಖ ಆಕರ್ಷಣೆಯಾಗಿತ್ತು. ಇದನ್ನ ನೋಡಲು ಜನ ಮುಗಿಬಿದ್ದರು. ಕಳೆದ ವರ್ಷ ಕೋವಿಡ್‌ನಿಂದಾಗಿ ಸದರ್ ಆಚರಣೆ ಸರಳವಾಗಿ ನಡೆದಿತ್ತು.