ನವದೆಹಲಿ: ಇಂದಿನಿಂದ ಶುರುವಾಗಲಿರುವ ಸಂಸತ್​​ ಮುಂಗಾರು ಅಧಿವೇಶನದಲ್ಲಿ ಹೇಗಾದರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಸಮಸ್ಯೆಗೆ ಸಿಕ್ಕಿಸಬೇಕು ಎಂದು ವಿರೋಧ ಪಕ್ಷಗಳು ಸಜ್ಜಾಗಿವೆ. ಹೀಗಾಗಿ ಸದ್ಯದ ದೇಶದ ಜ್ವಲಂತ ಸಮಸ್ಯೆಗಳಾದ ಇಂಧನ ಬೆಲೆ ಏರಿಕೆ, ಕೊರೋನಾ ನಿರ್ವಹಣೆ, ರೈತರ ಪ್ರತಿಭಟನೆ, ಲಸಿಕೆ ಕೊರತೆ ಸೇರಿದಂತೆ ಹಲವು ವಿಚಾರಗಳ ಕುರಿತು ವಿಪಕ್ಷಗಳ ಧ್ವನಿ ಎತ್ತಲು ಮುಂದಾಗಿವೆ. ಹೀಗಿರುವಾಗಲೇ ಅಧಿವೇಶನಕ್ಕೆ ಆರಂಭಕ್ಕೆ ಮುನ್ನವೇ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳಿಗೆ ಕಿವಿಮಾತು ಹೇಳಿದ್ದಾರೆ.

ವ್ಯಾಕ್ಸಿನ್​​ ಬಾಹುವಿನ ಮೇಲೆ ಹಾಕಲಾಗುತ್ತದೆ. ಯಾರು ವ್ಯಾಕ್ಸಿನ್​​ ತೆಗೆದುಕೊಳ್ಳುತ್ತಾರೋ ಅವರು ಬಾಹುಬಲಿಯಾಗಲಿದ್ದಾರೆ. ಮಾರಕ ಕೊರೋನಾ ವಿರುದ್ಧದ ಹೋರಾಟದಲ್ಲಿ 40 ಕೋಟಿ ಜನ ಲಸಿಕೆ ತೆಗೆದುಕೊಳ್ಳುವ ಮೂಲಕ ಬಾಹುಬಲಿಯಾಗಿದ್ದಾರೆ ಅಂತ ನರೇಂದ್ರ ಮೋದಿ ಎಂದರು.

ಹೀಗೆ ಮುಂದುವರಿದ ಅವರು, ಕೊರೋನಾ ವಿರುದ್ಧ ಹೋರಾಡಲು ಕೇಂದ್ರದಿಂದ ವ್ಯಾಕ್ಸಿನ್​​ ನೀಡುವ ಕಾರ್ಯ ಮುಂದುವರಿಸಲಾಗುವುದು. ದೇಶದ ಎಲ್ಲಾ ಪ್ರಜೆಗಳು ಲಸಿಕೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇನೆ. ಇಡೀ ಪ್ರಂಪಚವೇ ಕೊರೋನಾದಿಂದ ತತ್ತರಿಸಿ ಹೋಗಿದೆ. ಇಂತಹ ಹೊತ್ತಲ್ಲಿ ವಿಪಕ್ಷಗಳಿಂದ ಒಂದು ಅರ್ಥಪೂರ್ಣ ಸಂಸತ್​​ ಅಧಿವೇಶನ ನಿರೀಕ್ಷಿಸುವೆ ಎಂದು ತಿಳಿಸಿದರು.

The post ಬಾಹುವಿನ ಮೇಲೆ ವ್ಯಾಕ್ಸಿನ್ ಕೊಡಲಾಗುತ್ತೆ, ತೆಗೆದುಕೊಂಡವ ಬಾಹುಬಲಿ ಆಗ್ತಾನೆ -ಪ್ರಧಾನಿ ಮೋದಿ appeared first on News First Kannada.

Source: newsfirstlive.com

Source link