ಬಿಎಂಎಸ್ ಟ್ರಸ್ಟ್​​ ವಿವಾದ: ಸ್ಪೀಕರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲ; ಜೆಡಿಎಸ್​ನಿಂದ ಧರಣಿ ಮುಂದುವರಿಕೆ | BMS Trust controversy The negotiation meeting led by the Speaker failed


ಬಿಎಂಎಸ್ ಟ್ರಸ್ಟ್​​ ವಿವಾದ ಸದನದಲ್ಲಿ ಸುದ್ದು ಮಾಡುತ್ತಿದೆ. ಅದರಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಜೆಡಿಎಸ್ ಜೊತೆ ನಡೆದ ಸಂಧಾನ ಸಭೆ ವಿಫಲಗೊಂಡಿದೆ. ಯಾವುದೇ ತನಿಖೆಗೂ ಸಭೆಯಲ್ಲಿ ರಾಜ್ಯ ಸರ್ಕಾರ ಒಪ್ಪದ ಹಿನ್ನೆಲೆ ಸದನದಲ್ಲಿ ಜೆಡಿಎಸ್ ಧರಣಿ ಮುಂದುವರಿಸಲಿದೆ.

ಬಿಎಂಎಸ್ ಟ್ರಸ್ಟ್​​ ವಿವಾದ: ಸ್ಪೀಕರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲ; ಜೆಡಿಎಸ್​ನಿಂದ ಧರಣಿ ಮುಂದುವರಿಕೆ

ಬಿಎಂಎಸ್ ಟ್ರಸ್ಟ್​​ ವಿವಾದ: ಸ್ಪೀಕರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲ; ಜೆಡಿಎಸ್​ನಿಂದ ಧರಣಿ ಮುಂದುವರಿಕೆ

TV9kannada Web Team

| Edited By: Rakesh Nayak

Sep 23, 2022 | 12:22 PM
ವಿಧಾನಸಭೆ: ಬಿಎಂಎಸ್ ಟ್ರಸ್ಟ್​​ ವಿವಾದ ಸದನದಲ್ಲಿ ಸುದ್ದು ಮಾಡುತ್ತಿದ್ದು, ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಜೆಡಿಎಸ್ ಧರಣಿ ಆರಂಭಿಸಿದೆ. ಅದರಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ನೇತೃತ್ವದಲ್ಲಿ ಜೆಡಿಎಸ್ (JDS) ಜೊತೆ ಸಂಧಾನ ಸಭೆ ನಡೆಯಿತು. ಬಿಎಂಎಸ್ ಟ್ರಸ್ಟ್​ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಂಧಾನ ಸಭೆಯಲ್ಲಿ ಪಟ್ಟು ಹಿಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (H.D.Kumaraswami), ನಿಮ್ಮದೇ ಸಂಸ್ಥೆಯಿಂದ ಆದರೂ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ. ಆದರೆ ಯಾವುದೇ ಮಾದರಿಯ ತನಿಖೆಗೂ ಸಭೆಯಲ್ಲಿ ರಾಜ್ಯ ಸರ್ಕಾರ ಒಪ್ಪದ ಹಿನ್ನೆಲೆ ಸದನದಲ್ಲಿ ಜೆಡಿಎಸ್ ಧರಣಿ ಮುಂದುವರಿಸಲಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.