ಬಿಎಂಟಿಸಿ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ ಶಾಕ್; ಶೇ.35ರಷ್ಟು ದರ ಏರಿಕೆಗೆ ಪ್ರಸ್ತಾವನೆ, ಸಿಎಂ ನಿರ್ಧಾರದ ಬಳಿಕ ದರ ಫಿಕ್ಸ್ | Bmtc likely to hike bus fare soon in bangalore


ಬಿಎಂಟಿಸಿ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ ಶಾಕ್; ಶೇ.35ರಷ್ಟು ದರ ಏರಿಕೆಗೆ ಪ್ರಸ್ತಾವನೆ, ಸಿಎಂ ನಿರ್ಧಾರದ ಬಳಿಕ ದರ ಫಿಕ್ಸ್

ಬಿಎಂಟಿಸಿ ( ಸಾಂದರ್ಭಿಕ ಚಿತ್ರ)

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜನರ ಜೀವನಾಡಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಬಿಎಂಟಿಸಿ ಬಸ್ಗಳಲ್ಲಿ(BMTC) ಓಡಾಡುವ ಜನರಿಗೆ ಶಾಕ್ ಕಾದಿದೆ. ಬಸ್ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ ಶಾಕ್ ತಟ್ಟಲಿದೆ. ಬಿಎಂಟಿಸಿ ಪ್ರಯಾಣ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಮಾಡಲಾಗಿದೆ. ಈಗಾಗಲೇ ಬಿಎಂಟಿಸಿ 2 ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮೊದಲ ಬಾರಿ ಶೇ.20ರಷ್ಟು ಟಿಕೆಟ್ ದರ ಏರಿಕೆಗೆ ಪ್ರಸ್ತಾಪಿಸಿತ್ತು. ಆದ್ರೆ ಈಗ 2ನೇ ಪ್ರಸ್ತಾವನೆಯಲ್ಲಿ ಶೇ.35ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ. ಕಳೆದ ವಾರ BMTC ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಒಪ್ಪಿದರೆ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

ತೈಲ ಬೆಲೆ, ಗ್ಯಾಸ್ ದರ, ಹೋಟೆಲ್ ತಿಂಡಿ ದರ ಏರಿಕೆ ಬೆನ್ನಲ್ಲೇ ಜನರಿಗೆ ಬಿಎಂಟಿಸಿ ಟಿಕೆಟ್ ದರ ಹೆಚ್ಚಳದ ಆತಂಕ ಶುರುವಾಗಿದೆ. ಸತತ ನಷ್ಟದಿಂದ ಬಳಲಿ ಬೆಂಡಾಗಿ ನಷ್ಟದಲ್ಲಿರುವ ಬಿಎಂಟಿಸಿ ಮೇಲೆತ್ತಲು ಪ್ರಯಾಣ ದರ ಏರಿಕೆ ಅಗತ್ಯ ಎಂದು ಸಂಸ್ಥೆ ಟಿಕೆಟ್ ದರ ಹೆಚ್ಚಿಸಲು ಮುಂದಾಗಿದೆ. ಈ ಬಾರಿ ದರ ಏರಿಸದಿದ್ರೆ ಬಸ್ ಓಡಿಸೋದು ಕಷ್ಟ ಎಂದು ಸಿಎಂ ಬೊಮ್ಮಾಯಿಯವರಿಗೆ ಬಿಎಂಟಿಸಿ ಸಂಸ್ಥೆ ಮನವರಿಕೆ ಮಾಡಿಕೊಟ್ಟಿದೆ. ಸದ್ಯ ಈ ಬಗ್ಗೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಟಿಕೆಟ್ ದರ 35 ಶೇಕಡಾ ಏರಿಸಿದ್ರೆ ಜನರ ಗತಿ ಏನು?
ಇಷ್ಟೊಂದು ಏರಿಕೆ ಅಸಾಧ್ಯ, ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಟಿಕೆಟ್ ದರ ಏರಿಕೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಆದ್ರೆ ಸಿಎಂ ಒಪ್ಪಿದ್ರೆ ಜನರ ಜೇಬಿಗೆ ಕತ್ತರಿ ಬೀಳುವುದಂತೋ ಪಕ್ಕ.

35 ಶೇಕಡಾ ದರ ಏರಿಕೆಯಾದ್ರೆ ಸ್ಟೇಜ್ ವೈಸ್ ದರ ಎಷ್ಟಾಗುತ್ತೆ?
ಆರಂಭಿಕ ದರ ಈಗ ಇರೋದು 5 ರೂ. 35% ಹೆಚ್ಚಾದ್ರೆ 6.75 ಪೈಸೆ ಆಗಲಿದೆ. ಈ ವೇಳೆ ಚಿಲ್ಲರೆ ಸಮಸ್ಯೆ ಎಂದು ಬಿಎಂಟಿಸಿ 7 ರೂ ನಿಗದಿ ಮಾಡಬಹುದು. ಇದೇ ರೀತಿ 10 ರೂ ಇದ್ದ ದರ 13 ರೂ. 15 ಇದ್ದ ದರ 20ರೂ ಹೀಗೆ ಏರಿಕೆ ಆಗಲಿದೆ. ಪ್ರಯಾಣಿಕರಿಗೆ ದೊಡ್ಡಮಟ್ಟದ ಹೊರೆ ಬೀಳಲಿದೆ.

TV9 Kannada


Leave a Reply

Your email address will not be published.