
ಬಿ.ಎಸ್. ಯಡಿಯೂರಪ್ಪ
ಬಿಎಸ್ವೈರನ್ನ ಸಿಎಂ ಕುರ್ಚಿಯಿಂದ ಇಳಿಸುವಾಗ ಕಣ್ಣೀರು, ಬಿ.ವೈ.ವಿಜಯೇಂದ್ರಗೆ ಟಿಕೆಟ್ ನಿರಾಕರಿಸುವಾಗ ರಕ್ತಕಣ್ಣೀರು. ಇದು ಬಿಜೆಪಿ BSYಗೆ ನೀಡ್ತಿರುವ ಋಣಸಂದಾಯದ ಗಿಫ್ಟ್. ಬಿಜೆಪಿಯಲ್ಲಿನ ‘ಸಂತೋಷ ಕೂಟ’ ಯಶಸ್ವಿಯಾಗಿದೆ.
ಬೆಂಗಳೂರು: ಬಿ.ವೈ.ವಿಜಯೇಂದ್ರಗೆ ಪರಿಷತ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ. ಬಿಎಸ್ವೈರನ್ನ ಸಿಎಂ ಕುರ್ಚಿಯಿಂದ ಇಳಿಸುವಾಗ ಕಣ್ಣೀರು, ಬಿ.ವೈ.ವಿಜಯೇಂದ್ರಗೆ ಟಿಕೆಟ್ ನಿರಾಕರಿಸುವಾಗ ರಕ್ತಕಣ್ಣೀರು. ಇದು ಬಿಜೆಪಿ BSYಗೆ ನೀಡ್ತಿರುವ ಋಣಸಂದಾಯದ ಗಿಫ್ಟ್. ಬಿಜೆಪಿಯಲ್ಲಿನ ‘ಸಂತೋಷ ಕೂಟ’ ಯಶಸ್ವಿಯಾಗಿದೆ. ಬಿಎಸ್ವೈ ಕುಟುಂಬವನ್ನೇ ವನವಾಸಕ್ಕೆ ಕಳಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ VS ಬಿಜೆಪಿ ಯುದ್ಧ ಕಣ ರಂಗೇರಲಿದೆ ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಸಿಎಂ ಕುರ್ಚಿಯಿಂದ ಇಳಿಸುವಾಗ ‘ಕಣ್ಣೀರು’ವಿಜಯೇಂದ್ರರಿಗೆ ಪರಿಷತ್ ಟಿಕೆಟ್ ನಿರಾಕರಿಸುವಾಗ – ‘ರಕ್ತ ಕಣ್ಣೀರು’
ಇದು ಬಿಜೆಪಿ ಯಡಿಯೂರಪ್ಪನವರಿಗೆ ನೀಡುತ್ತಿರುವ ಋಣ ಸಂದಾಯದ ಕೊಡುಗೆಗಳು!
ಬಿಜೆಪಿಯಲ್ಲಿನ ‘ಸಂತೋಷ ಕೂಟ’ @BSYBJP ಅವರನ್ನಲ್ಲದೆ ಇಡೀ ಕುಟುಂಬವನ್ನೇ ವನವಾಸಕ್ಕೆ ಕಳಿಸಲು ಯಶಸ್ವಿಯಾಗಿದೆ.#BJPvsBJP ಯುದ್ಧಕಣ ರಂಗೇರಲಿದೆ!
— Karnataka Congress (@INCKarnataka) May 24, 2022
ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ
ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ ಮೋದಿಗೆ ಪತ್ರ ಬರೆದಿದೆ. ಇಂಥ ಭ್ರಷ್ಟ ಸರ್ಕಾರ ಇರಬೇಕಾ? ಇಂಥವರಿಗೆ ಮತ ಹಾಕಬೇಕಾ? ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ನವರು. ಸಂವಿಧಾನ ರಚನೆ ಮಾಡಿ ಕೊಟ್ಟವರು ಕಾಂಗ್ರೆಸ್ ಪಕ್ಷದವರು. ಬಿಜೆಪಿಯವರು ಸ್ವಾತಂತ್ರ್ಯಕ್ಕೆ ಹೋರಾಡಿದ ಒಬ್ಬರನ್ನು ತೋರಿಸಿ. ಆರ್ಎಸ್ಎಸ್ ಕ್ವಿಟ್ ಇಂಡಿಯಾ ಚಳವಳಿ ಹತ್ತಿಕ್ಕಿ ಎಂದಿತ್ತು. ದೇಶ ಭಕ್ತಿ ಕಾಂಗ್ರೆಸ್ ಪಕ್ಷದ ರಕ್ತದಲ್ಲೇ ಬಂದಿದೆ. ಮಧು.ಜಿ ಮಾದೇಗೌಡರನ್ನ ಒಮ್ಮತದಿಂದ ಆಯ್ಕೆ ಮಾಡಿದ್ದೇವೆ. ಸೋಲುವ ಭಯದಿಂದ ಜೆಡಿಎಸ್ ಡಮ್ಮಿ ಕ್ಯಾಂಡಿಡೇಟ್ ಹಾಕಿದೆ. ಜೆಡಿಎಸ್, ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ನ ಮಧುರನ್ನ ಗೆಲ್ಲಿಸಿ ಎಂದು ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ರು.