ಬಿಎಸ್​ವೈರನ್ನು ಹಿಡಿತದಲ್ಲಿಟ್ಟುಕೊಳ್ಳಲು IT ದಾಳಿ ಮಾಡಿದ್ರಾ?- ಹೆಚ್​​.ಡಿ ಕುಮಾರಸ್ವಾಮಿ

ಕಲಬುರಗಿ: ರಾಜ್ಯದಲ್ಲಿ ಉಪಚುನಾವಣೆ ಸಂದರ್ಭದಲ್ಲೇ ಐಟಿ ದಾಳಿ ನಡೆದಿರೋದು, ಬಹುಶಃ ಅವರ ಬಳಿ ಇರೋ ಮಾಹಿತಿಯ ಅನ್ವಯ ಮಾಡಿದ್ದಾರೋ ಏನೋ.. ನಾನು ಐಟಿ ದಾಳಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ ಎಂದು ಮಾಜಿ ಸಿಎಂ ಹೆಚ್​​​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್​ಡಿಕೆ, ಮಾಜಿ ಸಿಎಂ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರರ ಆತ್ಮೀಯರ ಮನೆ ಮೇಲಿನ ಐಟಿ ದಾಳಿ ಬಗ್ಗೆ ನನ್ನ ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ. ಆದರೆ ಬಹಳ ದಿವಸಗಳ ನಂತರ, ಉಪ ಚುನಾವಣೆ ಸಮಯದಲ್ಲಿ ಐಟಿ ದಾಳಿ ನಡೆದಿದೆ. ಯಾವುದೋ ಮಾಹಿತಿ ಮೇರೆಗೆ ದಾಳಿ ಮಾಡಿರಬೇಕು.

ಅದರಲ್ಲೂ ಕಳೆದ ಎರಡು ವರ್ಷಗಳಿಂದ ಯಡಿಯೂರಪ್ಪ ಪುತ್ರರೊಂದಿಗೆ ಕೆಲಸ ಮಾಡಿಕೊಂಡಿದ್ದ ಆತ್ಮೀಯರ ಮನೆಗಳ ಮೇಲೆ ದಾಳಿ ಮಾಡಿರೋದು, ಇನ್ನೊಂದು ಕಡೆ ಬಿಜೆಪಿಯಲ್ಲಿ ಇರುವ ಆಂತಕರಿಕ ಸಮಸ್ಯೆಗಳ ಸಂದರ್ಭದಲ್ಲಿ ಇಂತಹ ದಾಳಿ ನಡೆದಿದೆ. ಈ ದಾಳಿ ಮೂಲಕ ಬಿಜೆಪಿಯ ಆಂತರಿಕ ಸಮಸ್ಯೆಗಳೊಂದಿಗೆ ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ದಾಳಿ ಮಾಡಿಸಿರಬಹುದು. ಆದರೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದ್ರು.

ಇದನ್ನೂ ಓದಿ: RSS ವಿರುದ್ಧ ದಿಢೀರ್ ವಾಗ್ದಾಳಿ ಏಕೆ..? ಹೆಚ್​ಡಿಕೆ ಅಸಲಿ ಪ್ಲಾನ್ ಏನು..?

The post ಬಿಎಸ್​ವೈರನ್ನು ಹಿಡಿತದಲ್ಲಿಟ್ಟುಕೊಳ್ಳಲು IT ದಾಳಿ ಮಾಡಿದ್ರಾ?- ಹೆಚ್​​.ಡಿ ಕುಮಾರಸ್ವಾಮಿ appeared first on News First Kannada.

News First Live Kannada

Leave a comment

Your email address will not be published. Required fields are marked *