ದಾವಣಗೆರೆ: ಹೈಕಮಾಂಡ್ ಸೂಚಿಸಿದ್ರೆ ರಾಜೀನಾಮೆ ನೀಡ್ತೀನಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ.. ಯಾರೋ ಇಬ್ಬರು ದೆಹಲಿಗೆ ಹೋಗಿ ಬಂದರೆ ಸಿಎಂ ಬದಲಾವಣೆ ಆಗಲ್ಲ ಎಂದಿದ್ದಾರೆ.

ಯಡಿಯೂರಪ್ಪ ಪಕ್ಷ ಸಂಘಟನೆಯಿಂದ ಬಂದವರು.. ಬಿಎಸ್​ವೈಗೆ ಸಂಘ ಪರಿವಾರದ ಹಿನ್ನೆಲೆಯಿದೆ. ಯಾರೋ ಇಬ್ಬರು ದೆಹಲಿಗೆ ಹೋಗಿ ಬಂದರೆ ಸಿಎಂ ಬದಲಾವಣೆ ಆಗಲ್ಲ.. ಸಿಎಂ ಬಿಜೆಪಿ ಪಾರ್ಟಿಯಲ್ಲಿ ಆಲದ ಮರವಾಗಿ ಬೆಳೆದಿದ್ದಾರೆ. ಅವರ ನೆರಳಲ್ಲೇ ನಾವೆಲ್ಲರೂ ಇದ್ದೇವೆ.

ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆಯೇ ಇಲ್ಲ. ಇನ್ನೂ ಎರಡು ವರ್ಷ ಸಿಎಂ ಆಗಿ ಬಿಎಸ್​ವೈ ಅವರೇ ಮುಂದುವರೆಯುತ್ತಾರೆ ಎಂದು ದಾವಣಗೆರೆಯ ಹೊನ್ನಾಳಿಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

The post ಬಿಎಸ್​ವೈರನ್ನ ‘ಆಲದ ಮರ’ಕ್ಕೆ ಹೋಲಿಸಿದ ರೇಣುಕಾಚಾರ್ಯ: ಯಾಕೆ ಗೊತ್ತಾ? appeared first on News First Kannada.

Source: newsfirstlive.com

Source link