ಕೋಲಾರ: ಸಿ.ಎಂ‌. ಯಡಿಯೂರಪ್ಪ ಬದಲಾವಣೆ ವಿಚಾರ ಹಿನ್ನೆಲೆ ಜಿಲ್ಲೆಯಲ್ಲಿ ಮಠಾಧೀಶರುಗಳ ಸಭೆ ನಡೆದಿದ್ದು ಅಲ್ಲಿ ಎಲ್ಲಾ ಮಠಾಧೀಶರುಗಳು ಸಿಎಂ ಪರ ಬ್ಯಾಟ್​ ಬೀಸಿದ್ದಾರೆ.

ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಬೇಕು. ಒಂದು ವೇಳೆ ಬದಲಾವಣೆ ಮಾಡಿದ್ದೇ ಆದಲ್ಲಿ 3,000ಕ್ಕೂ ಹೆಚ್ಚು ಮಠಗಳು ಅವರನ್ನು ಉಳಿಸಿಕೊಳ್ಳುತ್ತೇವೆ ಅಂತ ಬೆಳ್ಳಾವಿ ಮಠದ ಮಹಂತಲಿಂಗೇಶ್ವರ ಸ್ವಾಮಿಗಳು ಹೇಳಿಕೆ ನೀಡಿದ್ದಾರೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಯಡಿಯೂರಪ್ಪ ‌ಸಿಎಂ ಆಗಿ ಮುಂದುವರೆಯಬೇಕು.. ಸಿಎಂ ಬದಲಾವಣೆ ಆಗಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಮಹಾಂತಲಿಂಗೇಶ ಸ್ವಾಮಿಗಳು ಎಚ್ಚರಿಕೆ ಕೊಟ್ಟಿದ್ದಾರೆ. ಯಡಿಯೂರಪ್ಪರನ್ನು ವಿರೋಧಿಸುವುದೂ ಒಂದೇ ತಮ್ಮನ್ನು ತಾವು ಸುಟ್ಟು ಕೊಳ್ಳುವುದು ಒಂದೇ ಎಂದು ಇದೇ ವೇಳೆ ಹೇಳಿಕೆ ನೀಡಿದ್ದಾರೆ.

The post “ಬಿಎಸ್​ವೈರನ್ನ ವಿರೋಧಿಸೋದೂ ಒಂದೇ.. ತಮ್ಮನ್ನು ತಾವೇ ಸುಟ್ಟುಕೊಳ್ಳುವುದೂ ಒಂದೇ”: ಮಹಾಂತಲಿಂಗೇಶ ಶ್ರೀ appeared first on News First Kannada.

Source: newsfirstlive.com

Source link