ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಡಿಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ಸಿಎಂ ಬಿಎಸ್​ ಯಡಿಯೂರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದರು.

ಸರ್ಕಾರದ ಬೇಜವಾಬ್ದಾರಿಯಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 24 ರೋಗಿಗಳ ಸಾವಾಗಿದೆ. ನಾನು ಶಿವಕುಮಾರ್ ಹೋಗದಿದ್ದರೇ ಈ ಪ್ರಕರಣ ಬೆಳಕಿಗೆ ಬರ್ತಿರಲಿಲ್ಲ. ಹಲವು ಜಿಲ್ಲೆಗಳಲ್ಲಿ ಹಲವರ ಸಾವಾಗಿದೆ, ಇದಕ್ಕೆಲ್ಲಾ ಯಾರು ಕಾರಣ? 2 ಲಕ್ಷ ಪರಿಹಾರ ಕೊಟ್ರೆ ಸಾಕಾ? ಎಂದು ಪ್ರಶ್ನೆ ಮಾಡಿದರು.

ಒಂದು ಜಿಲ್ಲೆಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಹೈಕೋರ್ಟ್ ಏನ್ ಹೇಳಿದೆ? ಇತರ ಜಿಲ್ಲೆಗಳ ಪರಿಸ್ಥಿತಿ ಏನು? ಇಷ್ಟೊಂದು ನರಹಂತಕ ಸರ್ಕಾರವನ್ನ ನಾನು ಯಾವುತ್ತೋ ನೋಡಿರಲಿಲ್ಲ. ಯಡಿಯೂರಪ್ಪ ದೇಶದ ಅತ್ಯಂತ ಅಸಮರ್ಥ ಮುಖ್ಯಮಂತ್ರಿ. ಆಕ್ಸಿಜನ್ ತರಿಸಲೂ ಅವರಿಗೆ ಸಾಧ್ಯವಾಗಿಲ್ಲ ಎಂದು ಗುಡುಗಿದ್ದರು.

The post ಬಿಎಸ್​ವೈ ಅಸಮರ್ಥ ಮುಖ್ಯಮಂತ್ರಿ.. ಇದು ನರ ಹಂತಕ ಸರ್ಕಾರ – ಸಿದ್ದರಾಮಯ್ಯ ಆಕ್ರೋಶ appeared first on News First Kannada.

Source: newsfirstlive.com

Source link