ನವದೆಹಲಿ: ಸಿಎಂ ಬದಲಾವಣೆ ಚರ್ಚೆ ತಾರಕಕ್ಕೇರಿರುವ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಬಿ.ಎಸ್. ಯಡಿಯೂರಪ್ಪ ಅವರ ಪರ ಬ್ಯಾಟ್ ಬೀಸಿದ್ದಾರೆ. ಅವರನ್ನ ಬದಲಿಸುವುದು ಒಂದು ಕೆಟ್ಟ ಸಲಹೆ ಎಂದಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದಿದ್ದೇ ಬಿ.ಎಸ್. ಯಡಿಯೂರಪ್ಪನವರು. ಅವರು ಕೆಲವರ ಪಾಲಿಗೆ ನಿಷ್ಠುರವಾಗಿದ್ದ ಕಾರಣಕ್ಕೆ ಅವರನ್ನ ತೆಗೆದುಹಾಕಲು ಕೆಲವರು ಕುತಂತ್ರಗಳನ್ನ ನಡೆಸುತ್ತಿದ್ದಾರೆ. ಅವರಿಲ್ಲದೇ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಅವರು ಬಿಜೆಪಿಯಲ್ಲೇ ಉಳಿದರಷ್ಟೇ ಮತ್ತೆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ.. ಮತ್ತೆ ಯಾಕೆ ಹಿಂದಿನ ಮಿಸ್ಟೇಕ್​ಗೆ ಮುಂದಾಗಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

The post ಬಿಎಸ್​ವೈ ಇಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲ್ಲ- ಸುಬ್ರಮಣಿಯನ್ ಸ್ವಾಮಿ appeared first on News First Kannada.

Source: newsfirstlive.com

Source link