ಬೆಂಗಳೂರು: ಬೆಡ್​ ಬೆಡ್ ಬೆಡ್​ ನನ್ನ ಗಂಗನಿಗೆ ಬೆಡ್ ಕೊಡಿ.. ನಂಗೆ ನಿಮ್ಮ ಹಣಕಾಸು ಬೇಡ.. ಬೇರೆ ಯಾವುದೇ ಸಹಾಯ ಬೇಡ.. ಬೆಡ್ ಕೊಡಿ ನನ್ನ ಗಂಡನನ್ನು ಉಳಿಸಿಕೊಳ್ಳಬೇಕು.. ದಯವಿಟ್ಟು ಸಹಾಯ ಮಾಡಿ.. ನಂಗೆ ಪುಟ್ಟದಾದ ಇಬ್ಬರು ಮಕ್ಕಳಿದ್ದಾರೆ.. ದಯವಿಟ್ಟು ನನ್ನ ಗಂಡನನ್ನ ಉಳಿಸಿಕೊಡಿ ಅಂತಾ ಮಹಿಳೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿವಾಸದ ಮುಂದೆ ಕಣ್ಣೀರು ಹಾಕಿದ್ದರು. ಹೀಗಾಗಿ ಕೊನೆಗೂ ಮುಖ್ಯಮಂತ್ರಿಗಳೇ ಮಧ್ಯ ಪ್ರವೇಶಿಸಿದ ಬಳಿಕ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿದ್ದಕ್ಕೆ ಅಲ್ಲಿಗೆ ಹೊರಟಿದ್ರು. ಆದ್ರೆ ಮಾರ್ಗ ಮಧ್ಯೆಯೇ ಆ ಮಹಿಳೆ ಪತಿ ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ನಡೆದಿದೆ.

ಬಿಜಿಎಸ್, ಆರ್.ಆರ್ ನಗರ ಹೆಲ್ಪ್ ಲೈನ್ ಫುಲ್ ಬ್ಯುಸಿ ಬರ್ತಿದೆ. ಬೆಡ್, ವೆಂಟಿಲೇಟರ್, ಐಸಿಯು ಬೆಡ್ ಇಲ್ಲ. ಎಲ್ಲಿ ಹೋದ್ರು ಬೆಡ್ ಇಲ್ಲ ಅಂತಿದ್ದಾರೆ… ಯಾವುದೇ ಆಸ್ಪತ್ರೆ ಸುತ್ತಿದ್ರೂ ಪ್ರಯೋಜನವಾಗ್ತಿಲ್ಲ ಅಂತ ಮಹಿಳೆ ಅಂಗಲಾಚಿದ್ರು. ರಾಮೋಹಳ್ಳಿಯಿಂದ ಬಂದಿದ್ದ ಸೋಂಕಿತನ ಹೆಸರು ಸತೀಶ್ ಎಂದಾಗಿದ್ದು, ಎಷ್ಟು ಸುತ್ತಿದ್ರೂ ಬೆಡ್ ಸಿಗದೇ ಇರೋದಕ್ಕಾಗಿ ಸಿಎಂ ನಿವಾಸದ ಬಳಿಯೇ ಅವರ ಪತ್ನಿ ಬಂದಿದ್ರು. ಅಲ್ಲೇ ಆ್ಯಂಬುಲೆನ್ಸ್​ನಲ್ಲಿ ಗಂಡನನ್ನು ಮಲಗಿಸಿಕೊಂಡು ಬೆಡ್​ಗಾಗಿ ಅಂಗಲಾಚುತ್ತಿದ್ರು.

ಆದ್ರೆ ಸಮಯಕ್ಕೆ ಸರಿಯಾಗಿ ಬಹುಶಃ ಬೆಡ್ ಸಿಕ್ಕಿದ್ರೆ ಸತೀಶ್ ಅನ್ನೋ ಆ ಸೋಂಕಿತರು ಬದುಕ್ತಿದ್ರು ಎನಿಸುತ್ತೆ. ನಿಜಕ್ಕೂ ಸರ್ಕಾರಕ್ಕೆ, ಮಾನ್ಯ ಆರೋಗ್ಯ ಸಚಿವರಿಗೆ ಜನರ ನೋವು ಅದ್ಯಾವಾಗ ಅರ್ಥ ಆಗುತ್ತೋ.. ಅದ್ಯಾವಾಗ ಸರಿಯಾದ ರೀತಿಯಲ್ಲಿ ಬೆಡ್​ಗಳ ವ್ಯವಸ್ಥೆ ಮಾಡ್ತಾರೋ.. ಗೊತ್ತಿಲ್ಲ.

 

 

The post ಬಿಎಸ್​ವೈ ನಿವಾಸದ ಮುಂದೆ ಪ್ರತಿಭಟನೆ ನಂತರ ಸಿಕ್ಕ ಬೆಡ್; ಮಾರ್ಗ ಮಧ್ಯೆಯೇ ಬಲಿ ಪಡೆದ ಕೋವಿಡ್ appeared first on News First Kannada.

Source: newsfirstlive.com

Source link