ಮಂಡ್ಯ: ಸಿಎಂ ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ನನಗೆ ಸಂಬಂಧಿಸಿದ ವಿಷಯವಲ್ಲ, ಬದಲಿಗೆ ಬಿಜೆಪಿಯ ಆಂತರಿಕ ವಿಚಾರ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಹೆಚ್​ಡಿಕೆ, ಬಿಜೆಪಿ ಪಕ್ಷದಲ್ಲಿ ನಾನು ಮೂಗು ತೂರಿಸೋದು ಶೋಭೆ ತರುವುದಿಲ್ಲ. ಬಿಎಸ್​ವೈಗೆ ಯಾವುದೇ ವಿಚಾರಕ್ಕೂ ನಾನು ಮಹತ್ವದ ಕೊಡೋದಿಲ್ಲ ಎಂದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಒಬ್ಬರಿಗೆ ಒಂದು ಅಭಿಪ್ರಾಯ ಇರುತ್ತದೆ. ಅದು ಮಠಾಧೀಶರ ಭಾವನೆ. ಯಾರ ಭಾವನೆ ಸರಿ, ತಪ್ಪು ಎಂದು ನಿರ್ಧರಿಸುವುದು ಜನ. ಬಿಜೆಪಿಯಲ್ಲಿ ಸಿಎಂ ಬದಲಾವಣೆ ವಿಚಾರ ನಿನ್ನೆ ಮೊನ್ನೆಯದಲ್ಲ, ಎರಡು ವರ್ಷಗಳ ಹಳೆಯದ್ದು. ಸದ್ಯ ಜನರು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇಂತಹ ವಿಷಯಗಳಿಗೆ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಆದಷ್ಟು ಬೇಗ ಈ ವಾತಾವರಣ ತಿಳಿಗೊಳಿಸಿ ಉತ್ತಮ ಆಡಳಿತ ನೀಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಸಲಹೆ ನೀಡಿದರು.

ನಾಳಿದ್ದು ರಾಜೀನಾಮೆ ನೀಡ್ತಾರೆ ಎನ್ನುತ್ತಿದ್ದಾರೆ. ಅದೇನೋ ನನಗೆ ಗೊತ್ತಿಲ್ಲ. ಆದರೆ, ಸಿಎಂ ತರಾತುರಿಯಲ್ಲಿ ಸಾವಿರಾರು ಕೋಟಿಗಳ ಯೋಜನೆಗೆ ಅನುಮತಿ ಕೊಡುತ್ತಿದ್ದಾರೆ. ನೀರಾವರಿ ಇಲಾಖೆಯ 4 ನಿಗಮಗಳಲ್ಲಿ 12 ಸಾವಿರ ಕೋಟಿ ಯೋಜನೆಗೆ ಅನುಮತಿ ನೀಡಲಿದ್ದಾರಂತೆ. ಕಾವೇರಿ ನಿಗಮಕ್ಕೆ ಕೇವಲ 1 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಕಾವೇರಿ ನಿಗಮಕ್ಕೆ ಕೇವಲ 1 ಸಾವಿರ ಕೋಟಿ
ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಹಳೇ ಕರ್ನಾಟಕ ಭಾಗದಿಂದ ಹೋಗುತ್ತಿದೆ. ನನಗೆ ಹಳೇ ಕರ್ನಾಟಕ ಹೊಸ ಕರ್ನಾಟಕದ ಪ್ರಶ್ನೆ ಅಲ್ಲ. ಎಲ್ಲಾ ಭಾಗಗಳಿಗೂ ನೀಡಬೇಕು ಎನ್ನುವುದು ನಮ್ಮ ಆಗ್ರಹ. ಇಲ್ಲಿನ ಜ‌ನ ನಿಮಗೇನು ದ್ರೋಹ ಮಾಡಿದ್ದಾರೆ? ಇಲ್ಲಿಗೆ 1 ಸಾವಿರ ಕೋಟಿ, ಅಲ್ಲಿಗೆ 11 ಸಾವಿರ ಕೋಟಿ ಯೋಜನೆ ಯಾಕೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಿಎಂ ಯಡಿಯೂರಪ್ಪ ಬದಲಾವಣೆ ಸುದ್ದಿ ಕೇಳಿ ಫುಲ್​ ಖುಷಿಯಾದ್ರಾ ಸಚಿವ ಸಿ.ಪಿ ಯೋಗೇಶ್ವರ್​​?

12 ಸಾವಿರ ಕೋಟಿ ದುಡ್ಡು ಹೊಡೆಯೋಕಾ?
ಎರಡು ದಿನದಲ್ಲಿ ಸಿಎಂ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಈ ಹೊತ್ತಲ್ಲಿ 12 ಸಾವಿರ ಕೋಟಿ ಯೋಜನೆ ಯಾಕೆ? ಯಾವ ಕಾರಣಕ್ಕಾಗಿ ಈ ತೀರ್ಮಾನ ಎಂದು ಕಿಡಿಕಾರಿದರು.

The post ಬಿಎಸ್​ವೈ 2 ದಿನದಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಇದೆ; ಹೆಚ್​ಡಿಕೆ appeared first on News First Kannada.

Source: newsfirstlive.com

Source link