ಬಿಗ್ ಬಾಸ್ ಎಲಿಮಿನೇಟ್ ಆಟ ಸ್ಪರ್ಧಿಗಳನ್ನೆಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಆದರೆ ವೀಕ್ಷಕರಿಗೆ ಹಾಗೂ ಬಿಗ್‍ಬಾಸ್‍ಗೆ ಮಾತ್ರ ಫುಲ್ ಮನರಂಜನೆ ಸಿಗುತ್ತಿದೆ. ಒಟ್ನಲ್ಲಿ ಮನಯೊಳಗೆ ಏನೇನೋ ಆಗುತ್ತಿದೆ.

ಭಾನುವಾರ ಪ್ರಶಾಂತ್ ಸಂಬರಗಿ ಎಲಿಮಿನೇಟ್ ಪ್ರ್ಯಾಂಕ್ ಎಂಬುದು ಆರಂಭದಲ್ಲಿ ಬಿಗ್ ಬಾಸ್ ವೀಕ್ಷಕರಿಗೆ ತಿಳಿಸಿದ್ದರು. ಬಳಿಕ ಇದನ್ನು ಮನೆಯವರಿಗೂ ತಿಳಿಸಲಾಯಿತು. ಆದರೆ ಈ ವೇಳೆ ಸ್ಪರ್ಧಿಗಳಿಗೆ ಒಂದು ಕಠಿಣ ಟಾಸ್ಕ್‍ನ್ನು ಬಿಗ್ ಬಾಸ್ ನೀಡಿದ್ದರು. ಸ್ಪರ್ಧಿಗಳಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲರಲ್ಲೂ ಆತಂಕ, ದುಗುಡ ಎದುರಾಗಿದೆ.

ಈ ವಾರ ಯಾರೂ ಎಲಿಮಿನೇಟ್ ಆಗಿಲ್ಲ, ಪ್ರಶಾಂತ್ ಸಂಬರಗಿ ಎಲಿಮಿನೇಟ್ ಕೂಡ ಪ್ರ್ಯಾಂಕ್ ಎಂದು ಬಿಗ್ ಬಾಸ್ ಈಗಾಗಲೇ ಖಚಿತಪಡಿಸಿದ್ದಾರೆ. ಈ ವಿಚಾರ ಎಲ್ಲರಿಗೂ ಗೊತ್ತಿದ್ದರೂ ಬಿಗ್ ಬಾಸ್ ಮಾತ್ರ ಚೆನ್ನಾಗಿ ಆಟ ಆಡಿಸಿದ್ದರು. ಇದು ಬಿಗ್ ಮನೆಯ ಸ್ಪರ್ಧಿಗಳಿಗೆ ಪ್ರಾಣಸಂಕಟವಾಗಿ ಕಾಡಿತ್ತು.

ಹೌದು ಪ್ರಶಾಂತ್ ಸಂಬರಗಿ ಮನೆಯಲ್ಲಿದ್ದರೂ ಇನ್‍ವಿಸಿಬಲ್, ಯಾರಿಗೂ ಕಾಣಲ್ಲ. ಸ್ಪರ್ಧಿಗಳು ಅವರಿಲ್ಲ ಎಂದೇ ಭಾವಿಸಿ ಆಟವಾಡಬೇಕು ಎಂದು ಷರತ್ತು ವಿಧಿಸಿದ್ದರು. ಹೀಗಾಗಿ ಪ್ರಶಾಂತ್ ಸಂಬರಗಿ ಪರದಾಡುವಂತಾಗಿತ್ತು. ಯಾಕೆ ಮಾತನಾಡಿಸುತ್ತಿಲ್ಲ ಎಂದು ಸ್ಪರ್ಧಿಗಳೆಲ್ಲರನ್ನೂ ಸಂಬರಗಿ ಹಿಡಿದು ಕೇಳುತ್ತಿದ್ದರು. ಆದರೆ ಯಾರೂ ಉತ್ತರಿಸುವ ಸ್ಥಿತಿಯರಲಿಲ್ಲ.

ಎಲ್ಲರನ್ನೂ ಮಾತನಾಡಿಸಿ ಸುಸ್ತಾದ ಪ್ರಶಾಂತ್ ಸಂಬರಗಿ, ಕೊನೆಗೆ ಶುಭ ಪೂಂಜಾ ಅವರನ್ನು ಮಾತನಾಡಿಸಿ, ಎಲ್ಲರೂ ಯಾಕೆ ಹೀಗೆ ಮಾಡುತ್ತಿದ್ದೀರಿ, ಇಷ್ಟೇನಾ ಸ್ನೇಹ, ಪ್ರೀತಿ, ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆ ಶುಭಾ ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆದರೆ ಶುಭ ಮಾತ್ರ ಏನೂ ಮಾತನಾಡಿಲ್ಲ, ಹೀಗಾಗಿ ಪ್ರಶಾಂತ್ ಸಂಬರಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಕೊನೆಗೆ ಬಿಗ್ ಬಾಸ್ ಪ್ರಶಾಂತ್ ಸಂಬರಗಿ ಅನುಮಾನವನ್ನು ಪರಿಹಿರಿಸಿ ಇದು ಪ್ರ್ಯಾಂಕ್ ಎಂದು ತಿಳಿಸಿದ್ದಾರೆ. ಈ ವಿಚಾರ ತಿಳಿಯತ್ತಿದ್ದಂತೆ ಸಂಬರಗಿ ನಕ್ಕಿದ್ದರೆ ಚಂದ್ರಚೂಡ್, ಅರವಿಂದ್, ದಿವ್ಯಾ, ವೈಷ್ಣವಿ, ಶಮಂತ್ ಸಂಬರಗಿಯನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಬಿಗ್‍ಬಾಸ್ ಈ ಆಟಕ್ಕೆ ಸಂಬರಗಿ ಸುಸ್ತಾಗಿದ್ದು ಮಾತ್ರ ನಿಜ.

The post ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ appeared first on Public TV.

Source: publictv.in

Source link