ಕಳೆದ ಮೂರು ವಾರಗಳಿಂದ ಕಿಚ್ಚನನ್ನ ನೋಡದೇ ಬಿಗ್​ಬಾಸ್​ ಮನೆಯ ಸ್ಪರ್ಧಿಗಳು ಹಾಗೇ ಪ್ರೇಕ್ಷಕರು ಸಪ್ಪೆ ಮೋರೆ ಹಾಕಿಕೊಂಡಿದ್ದಾರೆ. ಇಂದು ಬರ್ತಾರೆ, ಮುಂದಿನ ವಾರ ಬರ್ತಾರೆ ಅಂತ ಕಾದು ಕುಳಿತವರಿಗೆ ಮೂರು ವಾರಗಳಿಂದ ಕಿಚ್ಚನ ದರ್ಶನವೇ ಆಗಿಲ್ಲ. ಇಂದು ಮತ್ತೆ ವಾರಾಂತ್ಯ ಬಂದು ಬಿಟ್ಟಿದೆ. ಕಿಚ್ಚನನ್ನ ನೋಡೋಕೆ ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳಿಗೆ ಮತ್ತದೇ ಶಾಕ್​. ಹೌದು.. ಈ ವಾರವೂ ನೆಚ್ಚಿನ ನಟನನ್ನ ನೋಡುವ ಭಾಗ್ಯ ಅಭಿಮಾನಿಗಳಿಗಿಲ್ಲ. ಇಂದು ಮಾತ್ರವಲ್ಲದೇ, ಮುಂದಿನ ಎರಡು ವಾರಾಂತ್ಯಗಳಲ್ಲೂ ಕಿಚ್ಚ ಸುದೀಪ್​​ ಬಿಗ್​ಬಾಸ್​ ವೇದಿಕೆ ಹತ್ತೋದೇ ಡೌಟ್ ಅಂತ ಹೇಳಲಾಗ್ತಿದೆ​. ಕಾರಣ ರಾಜ್ಯದಲ್ಲಿ ಹೇರಲಾಗಿರುವ ಲಾಕ್​ಡೌನ್​..ಲಾಕ್​ಡೌನ್​..!

ಸದ್ಯ ಜಾರಿಯಲ್ಲಿರುವ ಕ್ಲೋಸ್​ ಡೌನ್​ ಹಾಗೂ ಮೇ 10ರಿಂದ ಜಾರಿಯಾಗಲಿರುವ ಲಾಕ್​ಡೌನ್​ನಿಂದ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಅದರಲ್ಲಿ ಬಿಗ್​ಬಾಸ್​ ಕೂಡ ಒಂದು. ರಾಜ್ಯ ಸರ್ಕಾರ ಹೇರಿರುವ ಲಾಕ್​ಡೌನ್​​ನ ಬಹಳ ಸೀರಿಯಸ್​ ಆಗಿ ಪಾಲಿಸುತ್ತಿರುವ ಬಿಗ್​ಬಾಸ್​, ಮೇ 25ರ ವರೆಗೂ ಯಾವುದೇ ವಾರಾಂತ್ಯದ ಶೋ ಮಾಡುವ ಇರಾದೆ ಇಟ್ಟುಕೊಂಡಿಲ್ಲ ಎನ್ನಲಾಗ್ತಿದೆ.

ಕಳೆದ ವಾರ ನೋ ಎಲಿಮಿನೇಷನ್​ ಮಾಡುವ ಮೂಲಕ ಅದ್ಹೇಗೋ ವಾರಾಂತ್ಯ ತಳ್ಳಿದ್ರು. ಆದ್ರೆ ಈ ವಾರ ಅದೇ ಐಡಿಯಾ ಯೂಸ್​ ಮಾಡೋದು ಕಷ್ಟ ಸಾಧ್ಯ, ಮಾಡಿದ್ರೂ ಅಚ್ಚರಿಯಿಲ್ಲ. ಆದ್ರೆ ಈ ವಾರ ಬಿಗ್​ಬಾಸ್​ ಮನೆಯಿಂದ ದಿವ್ಯಾ ಉರುಡುಗಾ ಅನಾರೋಗ್ಯದ ಕಾರಣ ಮನೆಯಿಂದ ಹೊರ ನಡೆದಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇನ್​​​ಫೆಕ್ಷನ್​ಗೆ ತುತ್ತಾಗಿರುವ ದಿವ್ಯಾ, ಗುಣಮುಖರಾಗಿ ಐಸೋಲೇಷನ್​ ಮುಗಿಸಿ ಮತ್ತೆ ಮನೆಗೆ ಎಂಟ್ರಿ ಕೊಟ್ರೂ ಕೊಡಬಹುದು ಅಂತಿದ್ದಾವೆ ಮೂಲಗಳು.

ಇನ್ನು ಕಳೆದ ವಾರವೇ ನಟ ಕಿಚ್ಚ ಸುದೀಪ್​, ಹೇರಲಾಗಿರುವ ಕ್ಲೋಸ್​ ಡೌನ್​ಗೆ ಬೆಂಬಲ ಕೊಟ್ಟು ವಾರಾಂತ್ಯಕ್ಕೆ ಶೋ ನಡೆಯುತ್ತಿಲ್ಲ ಅನ್ನೋದರ ಬಗ್ಗೆ ಸ್ಪಷ್ಟನೆ ನೀಡಿದ್ದರು. ಇಂದು ಕಿಚ್ಚನಿಂದ ಯಾವುದೇ ಟ್ವೀಟ್​ ಬಂದಿಲ್ಲವಾದರೂ, ಕಿಚ್ಚ ಇಂದು ಪಾಲ್ಗೊಳ್ಳೋದಿಲ್ಲ ಅನ್ನೋ ವಿಚಾರ ಲಭ್ಯವಾಗಿದೆ.

 

The post ಬಿಗ್​ಬಾಸ್​ಗೂ ಲಾಕ್​ಡೌನ್​ ಎಫೆಕ್ಟ್​; ಇಂದೂ ಸೇರಿ ಇನ್ನೆರಡು ವಾರ ಅಭಿಮಾನಿಗಳಿಗಿಲ್ಲ ಕಿಚ್ಚನ ದರ್ಶನ ಭಾಗ್ಯ appeared first on News First Kannada.

Source: newsfirstlive.com

Source link