ಕಿರುತೆರೆ ಪ್ರೇಕ್ಷಕರಿಗೆ ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಸಖತ್ ಕ್ರೇಜ್ ಇದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ಈ ಕಾರ್ಯಕ್ರಮ ಫೇಮಸ್ ಆಗಿ, ಸೀಸನ್ಗಳ ಮೇಲೆ ಸೀಸನ್ ನಡೆಯುತ್ತಲೇ ಇದೆ . ಕನ್ನಡ ಬಿಗ್ ಬಾಸ್ನಲ್ಲಿ ಕಿಚ್ಚ ಸುದೀಪ್ ಫಿಕ್ಸ್ ಆಗಿದ್ದು, ಸುದೀಪ್ ಬಿಟ್ರೆ ಮತ್ಯಾರು ಆ ಜಾಗಕ್ಕೆ ಸೂಟ್ ಆಗಲ್ಲ ಅನ್ನೋವಷ್ಟು ಫೇಮಸ್ ಆಗಿದ್ದಾರೆ.
ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಆದರೆ ತೆಲುಗು ಮತ್ತು ತಮಿಳಿನಲ್ಲಿ ಬದಲಾವಣೆಗಳು ಆಗಾಗ ಆಗುತ್ತಲೇ ಇರುತ್ತವೆ. ತೆಲುಗಿನಲ್ಲಿ ಮೊದಲು ಜ್ಯೂ. ಎನ್ಟಿಆರ್, ನಂತರ ನಾನಿ , ಈಗ ಅಕ್ಕಿನೇನಿ ನಾಗಾರ್ಜುನ ಬಿಗ್ ಬಾಸ್ನಲ್ಲಿ ಕಾಣಿಸಿಕೊಂಡಿದ್ದಾರೆ.ಇನ್ನು ತಮಿಳು ಬಿಗ್ ಬಾಸ್ 5 ನಿರೂಪಣೆ ಮಾಡುತ್ತಿದ್ದ ಕಮಲ್ ಹಾಸನ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಯಾವ ಸ್ಟಾರ್ ನಟ ಬರುತ್ತಿದ್ದಾರೆ ಅಂತ ಕಾಯುತ್ತಿದ್ದರು ಬಿಗ್ ಬಾಸ್ ಫ್ಯಾನ್ಸ್.
ಆದರೆ ಆ ಸ್ಥಾನಕ್ಕೆ ಸ್ಟಾರ್ ನಟನ ಬದಲು ಸ್ಟಾರ್ ನಟಿಯೊಬ್ಬರು ಬರೋದು ಪಕ್ಕಾ ಆಗಿದೆ. ಈ ಹಿಂದೆ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ನಿರೂಪಕರಾಗಿ ಬರುತ್ತಾರೆ ಎಂದು ಸುದ್ದಿಯಾಗಿತ್ತು. ಸದ್ಯ ಈ ಎಲ್ಲಾ ಊಹಾ ಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದು, ತಮಿಳು ಬಿಗ್ ಬಾಸ್ ನಿರೂಪಕರಾಗಿ ಬಹುಭಾಷಾ ಬೇಡಿಕೆಯ ನಟಿ ರಮ್ಯಕೃಷ್ಣ ಎಂಟ್ರಿಕೊಟ್ಟಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಅದಷ್ಟು ಬೇಗ ರಮ್ಯಕೃಷ್ಣ ಅವರನ್ನು ತಮಿಳು ಬಿಗ್ ಬಾಸ್ ವೇದಿಕೆಯಲ್ಲಿ ನೋಡಬಹುದಾಗಿದೆ..