ಬಿಗ್​ಬಾಸ್​ ಪ್ರಿಯರು ಪ್ರತಿ ವಾರದ ಅಂತ್ಯಕ್ಕೆ, ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್‌ಗಾಗಿ ಕುತೂಹಲದಿಂದ ಕಾಯ್ತಾರೆ. ಸ್ಪರ್ಧಿಗಳಿಗೆ ಕಿಚ್ಚ ಕೇಳುವ ಪ್ರಶ್ನೆಗಳು, ಇಡೀ ವಾರದಲ್ಲಿ ನಡೆದ ಘಟನೆಗಳ ಬಗ್ಗೆ ಮಾಡೋ ತಮಾಷೆ, ಕೆಲವೊಮ್ಮೆ ಅವರು ನೀಡುವ ಸಲಹೆ ನಂತರ ಎಲಿಮಿನೇಷನ್.. ಇವೆಲ್ಲವೂ ಸ್ಪರ್ಧಿಗಳನ್ನ ಹಾಗೂ ಪ್ರೇಕ್ಷಕರನ್ನ ವೀಕೆಂಡ್​ ಎಪಿಸೋಡ್​​ಗೆ ಕಾಯುವಂತೆ ಮಾಡುತ್ತೆ. ಆದ್ರೆ ಈ ವಾರವೂ ಕಿಚ್ಚನ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಕಿಚ್ಚನ ಅಭಿಮಾನಿಗಳು​ ತಮ್ಮ ನೆಚ್ಚಿನ ನಟನನ್ನ ಈ ವಾರಾಂತ್ಯ ನೋಡಲು ಫುಲ್​ ಖುಷಿಯಾಗಿದ್ರು.​ ಆದ್ರೆ ಇದೀಗ ಬಿಗ್​ಬಾಸ್​ ತಂಡ ಮತ್ತೊಂದು ಶಾಕ್​ ನೀಡಿದೆ. ಈ ವಾರವೂ ಕಿಚ್ಚ ಸುದೀಪ್​ ಅವರ ಗೈರಿನಲ್ಲಿ ವಾರಾಂತ್ಯದ ಎಪಿಸೋಡ್​ ನೆಡೆಯಲಿದೆ. ಹೌದು..ಆದ್ರೆ ಈ ಬಾರಿ ಕಿಚ್ಚನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ಸದ್ಯ ಇರುವ ಸಂಕಷ್ಟದ ಸನ್ನಿವೇಷದಲ್ಲಿ ವಾರಾಂತ್ಯದ ಚಿತ್ರೀಕರಣ​ ನಡೆಯುತ್ತಿಲ್ಲ, ಹಾಗಾಗಿ ಈ ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚನ ಉಪಸ್ಥಿತಿ ಇರುವುದಿಲ್ಲ ಅಂತ ಬಿಗ್​ಬಾಸ್​ ಟೀಮ್ ಟ್ವೀಟ್​ ಮೂಲಕ ತಿಳಿಸಿದೆ.

ಸದ್ಯ ಇರುವ ಸನ್ನಿವೇಶದಲ್ಲಿ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ.

-ಬಿಗ್​ಬಾಸ್​ ಟೀಂ.

ಬಿಗ್‌ಬಾಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಿಚ್ಚನಿಲ್ಲದೆ ಈ ವಾರವೂ ಸೇರಿ ಮೂರು ವಾರಾಂತ್ಯದ ಶೋ ನಡೆದಿದೆ. ಇದು ಬಿಗ್​ಬಾಸ್​ ಕಂಟೆಸ್ಟೆಂಟ್​ಗಳಿಗೆ ಮಾತ್ರವಲ್ಲದೇ ಅಭಿಮಾನಿಗಳಿಗೂ ಬೇಸರ ಮೂಡಿಸಿದೆ. ಮೊನ್ನೆಯಷ್ಟೆ ‘ನಾನು ನಿಮ್ಮೆಲ್ಲರ ಪ್ರೀತಿ ಹಾಗೂ ಹಾರೈಕೆಯಿಂದ ಕೊಂಚ ಮಟ್ಟಿಗೆ ಗುಣಮುಖನಾಗಿದ್ದೀನಿ. ಹಾಗಾಗಿ ಈ ವಾರಾಂತ್ಯದಲ್ಲಿ ಬಿಗ್​ಬಾಸ್​ ಶೋ ಹೋಸ್ಟ್ ಮಾಡಲು ಎದುರು ನೋಡುತ್ತಿದ್ದೇನೆ’ ಅಂತ ಖುದ್ದು ಸುದೀಪ್​ ಟ್ವೀಟ್​ ಮಾಡಿದ್ದರು.

The post ಬಿಗ್​ಬಾಸ್​​ ಟೀಮ್​ನಿಂದ ಮತ್ತೆ ಶಾಕ್​; ಈ ವಾರವೂ ಇರಲ್ಲ ಕಿಚ್ಚ ಸುದೀಪ್​ appeared first on News First Kannada.

Source: newsfirstlive.com

Source link