ಬಿಗ್​ಬಾಸ್ ರಿಯಾಲಿಟಿ ಶೋ ಅವನ್ನ ಯಾಕೆ ನಿಲ್ಲಿಸಲಾಯಿತು ಅನ್ನೋದಕ್ಕೆ ಕಿಚ್ಚ ಸುದೀಪ್ ಕಾರಣವನ್ನ ಬಿಚ್ಚಿಟ್ರು. ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಕಿಚ್ಚ.. ಬಿಗ್​ಬಾಸ್​ನಲ್ಲಿ ಕೆಲಸ ಮಾಡುತ್ತಿದ್ದ ಟೆಕ್ನಿಷಿಯನ್​ಗಳ ಸೆಫ್ಟಿಯನ್ನ ನಾವು ನೋಡಬೇಕಿತ್ತು. ಒಳಗಡೆ ಸ್ಪರ್ಧಿಗಳೆಲ್ಲಾ ಸೇಫ್​ ಆಗಿಯೇ ಇದ್ದರು. ಆದರೆ ಹೊರಗಡೆ ಕೆಲಸ ಮಾಡುತ್ತಿದ್ದ ಟೆಕ್ನಿಷಿಯನ್​ಗಳು ಸಫರ್​ ಪಡುವಂತಾಯಿತು. ಹೀಗಾಗಿ ನಮಗೆ ಅವರ ಸೇಫ್ಟಿ ತುಂಬಾ ಮುಖ್ಯ ಆಯಿತು. ಹೀಗಾಗಿ ನಾವು ಅದನ್ನ ಸ್ಟಾಪ್ ಮಾಡಿದ್ವಿ.

ಒಂದು ಕಂಟೆಸ್ಟೆಂಟ್​ಗೆ ಅದೆಷ್ಟೋ ಟೆಕ್ನಿಷಿಯನ್  ಅಲಾಟ್​ ಆಗಿರುತ್ತಾರೆ. ಎಲ್ಲರದ್ದೂ ಜೀವನೇ.. ಈ ಸಂದರ್ಭದಲ್ಲಿ ನಾನು ಬಿಗ್​ಬಾಸ್​ ಸ್ಪರ್ಧಿಗಳಿಗೆ ಬ್ಯಾಡ್​ಲಕ್ ಹೇಳ್ತೇನೆ. ಎಲ್ಲಾ ಸ್ಪರ್ಧಿಗಳು ತುಂಬಾ ಚೆನ್ನಾಗಿ ತೆಗೆದುಕೊಂಡರು. ಅವರಿಗೆ ಹೊರಗಡೆ ನಡೆಯುತ್ತಿರುವ ವಿಷಯ ತಿಳಿಸುತ್ತಿದ್ದಂತೆ ಪ್ರ್ಯಾಕ್ಟಿಕಲ್ ಆಗಿ ಯೋಚ್ನೆ ಮಾಡಿದರು. ಈ ವಿಚಾರದಲ್ಲಿ ನಾನು ಅವರಿಗೆ ದೊಡ್ಡ ಹ್ಯಾಟ್ಸ್​ಅಪ್ ಹೇಳ್ತೇನೆ. ಎಲ್ಲರೂ ಗೆದ್ದು ಹೊರ ಬಂದರು. ನನ್ನ ಪ್ರಕಾರ ಎಲ್ಲರೂ ಗೆದ್ದು ಹೊರ ಬಂದಿದ್ದಾರೆ.

ಮುಂದೆ ನೋಡೋಣ.. ಆಕಸ್ಮಾತ್ ಎಲ್ಲವೂ ಸರಿ ಹೋದ್ರೆ ಅದನ್ನ ಕಂಟಿನ್ಯೂ ಮಾಡೋಕೆ ಆಗುತ್ತಾ? ಎಲ್ಲಿಂದ ನಿಲ್ಲಿಸಿದ್ರು ಅಲ್ಲಿಂದ ಕಂಟಿನ್ಯೂ ಮಾಡ್ತಾರಾ? ಅದನ್ನ ಚಾನಲ್ ಮತ್ತು ಸಂದರ್ಭ ತೆಗೆದುಕೊಳ್ಳುವ ಪರಿಸ್ಥಿತಿ ಅಂತಾ ಹೇಳಿದರು.

The post ಬಿಗ್​ಬಾಸ್​ ನಿಲ್ಲಿಸಿದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ ಸುದೀಪ್​ appeared first on News First Kannada.

Source: newsfirstlive.com

Source link