ಇಷ್ಟು ದಿನ ಕಿಚ್ಚ ಸುದೀಪ್​ ಬಿಗ್​ಬಾಸ್​​ ವಾರಾಂತ್ಯದ ಎಪಿಸೋಡ್​ಗೆ ಯಾಕೆ ಬರ್ತಿಲ್ಲ ಅನ್ನುತ್ತಿದ್ದವರಿಗೆ ಬಿಗ್​ಬಾಸ್​ ಈಗ ಬಿಗ್​ ಶಾಕ್​ ನೀಡಿದೆ. ಅಂತಿಂತ ಶಾಕ್​ ಅಲ್ಲ.. ಎಪ್ಪಂತ್ತೊಂದು ದಿನಗಳ ಸುದೀರ್ಘ ಜರ್ನಿಯನ್ನ ಅಂತ್ಯಗೊಳಿಸುವ ಶಾಕ್​. ಹೌದು.. ನಾಳೆಗೆ ಬಿಗ್​ಬಾಸ್​ ಸೀಸನ್​ 8 ಕೊನೆಯಾಗಲಿದೆ.

ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್​ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್​​ನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ.

ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ. ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ, ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ. ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ.

ಪರಮೇಶ್ವರ್​ ಗುಂಡ್ಕಲ್​, ಕಲರ್ಸ್​ ಕನ್ನಡ ಬ್ಯುಸಿನೆಸ್​ ಹೆಡ್​

The post ಬಿಗ್​ಬಾಸ್​ ಪ್ರೇಮಿಗಳಿಗೆ ಬಿಗ್ ಶಾಕ್; ನಾಳೆಯೇ ಕೊನೆಯ ದಿನ appeared first on News First Kannada.

Source: newsfirstlive.com

Source link