ಬಿಗ್​ಬಾಸ್ ಸೀಸನ್​ 8ರ ಎರಡನೇ ಇನ್ನಿಂಗ್ಸ್​ ಭರ್ಜರಿಯಾಗಿ ಸಾಗುತ್ತಿದೆ. ಇನ್ನೇನು ಕೆಲವೆ ದಿನಗಳಲ್ಲಿ ಬಿಗ್​ಬಾಸ್​ ಮುಕ್ತಾಯವಾಗಲಿದೆ. ಬಿಗ್​ಬಾಸ್​ ಮುಗಿಯೋ ವಿಷಯ ಪ್ರೇಕ್ಷಕರಲ್ಲಿ ಬೇಸರ ಮೂಡಿಸಿದೆ. ಬಿಗ್​ಬಾಸ್​ ಮುಗಿದ ಮೇಲೆ ಆ ಸ್ಲಾಟ್​ನಲ್ಲಿ ಬೇರೆ ಏನು ಪ್ರಸಾರ ಆಗಬಹುದು ಅಂತಾನೂ ಕೆಲವರ ಪ್ರಶ್ನೆಯಾಗಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ!

ಹೌದು.. ಆ ಧಾರವಾಹಿ ಮತ್ಯಾವುದೂ ಅಲ್ಲ ಲಕ್ಷಣ.. ಹೌದು ಮೊನ್ನೆ ಮೊನ್ನೆಯಷ್ಟೆ ಲಕ್ಷಣ ಧಾರವಾಹಿಯ ಟೈಟಲ್​ ಲಾಂಚ್​ ಮಾಡಿದ ವಿಷಯವನ್ನು ನಾವು ನಿಮಗೆ ತಿಳಿಸಿದ್ವಿ. ಈ ಟೈಟಲ್​ ಕೇಳಿದ್ರೆ ವಿಭಿನ್ನವಾಗಿದ್ದು ಏನೋ ಹೊಸತನ ಇದೆ ಅನ್ನೋದು ತಿಳಿಯತ್ತದೆ. ಇದೀಗ ಲಕ್ಷಣ ಧಾರವಾಹಿಯ ಪ್ರೋಮೋ ನೋಡಿದ್ರೆ ಇದೊಂದು ಕಂದು ಬಣ್ಣದ ಹುಡುಗಿಯ ಕಥೆ ಅನ್ನೋದು ಸ್ಪಷ್ಟವಾಗಿದೆ. ಸದ್ಯ ಲಕ್ಷಣ ಧಾರವಾಹಿಯ ಮತ್ತೊಂದು ಪ್ರೋಮೋ ರಿಲೀಸ್​​ ಆಗಿದೆ.

ಈ ಪ್ರೋಮೊದಲ್ಲಿ ಒಂದು ಹೆಣ್ಣು ಮಗು ತಾನು ಚಿಕ್ಕ ವಯಸ್ಸಿನಿಂದಲೂ ಕಂದು ಬಣ್ಣ ಇರುವ ಕಾರಣ ನಾನೂ ಮುಂದೆ ದೊಡ್ಡವಳಾದಮೇಲೆ ಬಿಳಿ ಆಗ್ತೀನಿ ಅನ್ನೊ ಕನಸು ಇಟ್ಟುಕೊಂಡಿರುತ್ತಾಳೆ. ಆದರೆ ಅವಳು ಪುಟ್ಟ ಹುಡುಗಿ ಆದಾಗಿನಿಂದಲೂ ಜನ ಅವಳ ಬಣ್ಣವನ್ನು ಟೀಕೆ ಮಾಡ್ತಿರುತ್ತಾರೆ. ಆದರೆ ಮುಂದೆಯೂ ಕೂಡ ಅವಳು ಅದೆ ಬಣ್ಣದಲ್ಲಿ ದೊಡ್ಡವಳಾಗುತ್ತಾಳೆ. ಇದೆ ಎಳೆಯಲ್ಲಿ ಕಥೆ ಸಾಗಲಿದೆ ಎಂಬುವುದು ತಿಳಿಯತ್ತದೆ.

ಈ ಧಾರವಾಹಿಯಲ್ಲಿ ನಟ ಜಗನ್​ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗನ್​ಗೆ ಜೋಡಿಯಾಗಿ ಕೋಲಾರದ ಮಾಲೂರು ಹುಡುಗಿ ವಿಜಯಲಕ್ಷ್ಮಿ ಅಭಿನಯಿಸಲಿದ್ದು, ಇದು ಇವರ ಮೊದಲ ಸೀರಿಯಲ್​ ಆಗಿದೆ. ಮತ್ತೊಂದು ವಿಷಯ ಏನಪ್ಪಾ ಅಂದರೆ ಮೊದಲೇ ಹೇಳಿದ ಹಾಗೆ ಇದೊಂದು ಕಂದು ಬಣ್ಣದ ಹುಡುಗಿಯ ಕಥೆ. ಈ ಧಾರವಾಹಿಗೆ ಹೀರೋಯಿನ್​ ಹುಡುಕಲು ಐದರಿಂದ ಆರು ತಿಂಗಳು ತಗೊಂಡ್​ರಂತೆ. ಯಾಕಂದ್ರೆ ಬಿಳಿ ಬಣ್ಣದ ಹುಡುಗಿಗೆ ಡಾರ್ಕ್ ಮೇಕಪ್​ ಮಾಡಿದ್ರು ಅಲ್ಲಿ ನ್ಯಾಚ್ಯುಲರ್​ ಲುಕ್​ ಇರಲ್ಲ ಅಂತಾ ಕಡು ಕಂದು ಬಣ್ಣದ ಹುಡುಗಿಯನ್ನು ಹುಡುಕಲು ಸಮಯ ಆಯ್ತು. ನಮಗೆ ಕೊನೆಯಲ್ಲಿ ಸಿಕ್ಕಿದ್ದು ವಿಜಯಲಕ್ಷ್ಮಿ ಎಂದು ಟೀಮ್​ ತಿಳಿಸಿದೆ.

ಕಂದು ಬಣ್ಣದ ಹುಡುಗಿಯ ಟೀಮ್​ ಇಟ್ಕೊಂಡು ಮುದ್ದುಲಕ್ಷ್ಮಿ, ಕೃಷ್ಣಸುಂದರಿ ಹಾಗೂ ಸುಂದರಿ ಧಾರವಾಹಿಗಳು ನಿಮ್ಮನ್ನು ರಂಜಿಸುತ್ತಿದೆ. ಆದರೆ ಈ ಧಾರವಾಹಿ ಆ ಎರಡು ಸೀರಿಯಲ್​ಗಳಿಗಿಂತ ವಿಭಿನ್ನಾವಾಗಿ ಕಥೆ ಹಾಗೂ ಹೊಸ ರೀತಿ ಮೂಡಿ ಬರಲಿದೆಯಂತೆ.

ಲಕ್ಷಣ ಧಾರವಾಹಿಯಲ್ಲಿ ನಟಿ ಅಂಜಲಿ ಕೂಡಾ ಪ್ರಮುಖ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂಬ ಮಾಹಿತಿ ಇದೆ. ನಟ ಜಗನ್​ ಈ ಧಾರವಾಹಿಯಲ್ಲಿ ಅಭಿನಯಿಸುವುದು ಮಾತ್ರವಲ್ಲದೆ, ನಿಮಾರ್ಣದ ಹೊಣೆಯನ್ನು ಹೊತ್ತಿಕೊಂಡಿದ್ದಾರೆ. ಒಟ್ನಲ್ಲ್ಲಿ ಹೊಸ ಧಾರವಾಹಿ ಮೂಲಕ ನಿಮ್ಮನ್ನು ರಂಜಿಸಲು ಸಿದ್ಧವಾಗಿರುವ ಲಕ್ಷಣ ಟೀಮ್​ಗೆ ನಮ್ಮ ಕಡೆಯಿಂದಲು ಆಲ್​ ದಿ ಬೆಸ್ಟ್​.

The post ಬಿಗ್​ಬಾಸ್​ ಬಳಿಕ ‘ಕಂದು ಬಣ್ಣದ ಚೆಲುವೆಯ ಕಥೆ’: ಹೇಗಿತ್ತು ಗೊತ್ತಾ ‘ಲಕ್ಷಣ’ಳ ಹುಡುಕಾಟ..? appeared first on News First Kannada.

Source: newsfirstlive.com

Source link