ಬಿಗ್‌ಬಾಸ್ ಎರಡನೇ ಇನ್ನಿಂಗ್ಸ್​ನ ಎರಡನೇ ವಾರ ನಿಧಿ ಅವರು ಮನೆಯಿಂದ ಹೊರ ನಡೆದಿದ್ದರು. ಈ ವಾರದ ನಾಮಿನೇಶನ್​ ಪ್ರಕ್ರಿಯೆಯಲ್ಲಿ ಕ್ಯಾಪ್ಟನ್​ ದಿವ್ಯಾ ಉರುಡುಗ ಅವರನ್ನು ಹೊರತು ಪಡಿಸಿ ಉಳಿದ ಎಲ್ಲಾ ಸದಸ್ಯರು ನಾಮಿನೇಟ್​ ಆಗಿದ್ದರು. ಇದ್ರಲ್ಲಿ ನಿಧಿ ಅವರು ಅರವಿಂದ ಅವರನ್ನು ನೇರ ನಾಮಿನೇಶನ್​ಗೆ ಸೂಚಿಸಿದ್ದರು. ಹೀಗಾಗಿ ಅವರನ್ನು ಬಿಟ್ಟು ಉಳಿದ ಸದಸ್ಯರು ಹೆಚ್ಚೂ ಕಡಿಮೆ ಒಬ್ಬರಿಗೊಬ್ಬರು ನಾಮಿನೇಟ್​ ಮಾಡಿದ್ರು.

ಇಲ್ಲಿ ಇನ್ನೊಂದು ವಿಶೇಷ ಇತ್ತು. ಅದೇ ಕ್ಯಾಪ್ಟನ್​ ದಿವ್ಯಾ ಉರುಡುಗ ಅವರಿಗೆ ಬಿಗ್ ಬಾಸ್ ಸೂಪರ್ ಪವರ್ ನೀಡಿದ್ರು. ಅದರ ಪ್ರಕಾರ ಅವರು ಯಾರಾದರೂ ಒಬ್ಬರನ್ನು ಎಲಿಮನೇಷನ್​ ಪ್ರಕ್ರಿಯೆಯಿಂದ ಉಳಿಸಬಹುದಾಗಿತ್ತು.

ದಿವ್ಯಾ ಅವರು ಶುಭಾ ಪೂಂಜಾ ಅವರನ್ನು ಉಳಿಸುತ್ತಾರೆ. ಇದು ಒಂದು ರೀತಿಯಲ್ಲಿ ಮನೆಯವರಿಗೆ ಶಾಕ್​ ನೀಡಿತ್ತು. ಇದಕ್ಕೆ ಅವರು ಕೊಟ್ಟ ಕಾರಣ ಶುಭಾ ಅವರು ಮುಗ್ಧೆ, ಅವರು ಇದ್ದರೆ ಮನೆ ಲವಲವಿಕೆಯಿಂದ ಇರುತ್ತದೆ. ಅವರು ನನ್ನ ಫೇವರೆಟ್​. ಹಾಗಾಗಿ ಅವರನ್ನು ಉಳಿಸುತ್ತೇನೆ ಎಂದರು. ಇದಕ್ಕೆ ಭಾವುಕರಾದ ಶುಭಾ, ದಿವ್ಯಾ ಅವರನ್ನು ತಬ್ಬಿ ಥಾಂಕ್ಯೂ ಹೇಳಿ ಹರ್ಷ ವ್ಯಕ್ತಪಡಿಸಿದ್ರು.

ಮತ್ತೊಂದೆಡೆ, ದಿವ್ಯಾ ಉರುಡುಗ ಅವರ ನಿರ್ಧಾರದಿಂದ ಪ್ರಶಾಂತ್ ಸಂಬರಗಿ ಸ್ವಲ್ಪ ಅಸಮಾಧಾನಗೊಂಡರು. ವೀಕೆಸ್ಟ್‌ ಸ್ಪರ್ಧಿ ಶುಭಾ ಸೇವ್ ಆಗಿಬಿಟ್ಟರು ಅಂತಾ ಪ್ರಶಾಂತ್ ಚಂದ್ರಚೂಡ್‌ಗೆ ಹೇಳ್ತಾರೆ. ಅಷ್ಟೇ ಅಲ್ಲ, ಪ್ರಶಾಂತ್​ ತಮ್ಮ ಬೇಸರವನ್ನು ದಿವ್ಯಾ ಉರುಡುಗ ಬಳಿ ಕೂಡಾ ಹೇಳಿಕೊಳ್ಳುತ್ತಾರೆ. ಇದಕ್ಕೆ ದಿವ್ಯಾ, ಅವರನ್ನು ಸಮಾಧಾನ ಪಡಿಸುತ್ತಾರೆ.

ಏನೇ ಇರಲಿ ಇಲ್ಲಿ ದಿವ್ಯಾ ಎರಡು ರೀತಿ ಯೋಚಿಸರಬಹುದು ಒಂದು ಶುಭಾ ಅವರು ಅವರ ಫೇವರೇಟ್​. ಇನ್ನೊಂದು ಬೇರೆಯವರು ಅವರ ಬಲದ ಮೇಲೆ ಉಳಿದುಕೊಳ್ಳುವ ಶಕ್ತಿ ಇದೆ ಎಂಬುದು. ಶುಭಾ ಅವರನ್ನು ಬಿಟ್ಟು ಬೇರೆ ಯಾರದೇ ಹೆಸರು ಹೇಳಿದ್ದರೂ ವೈಮನಸ್ಸಿಗೆ ಹೆಚ್ಚು ಅವಕಾಶ ಇತ್ತು. ಹೀಗಾಗಿ ದಿವ್ಯಾ ಉರುಡುಗ ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸಿದ್ರು.

The post ಬಿಗ್​ಬಾಸ್​ ಮನೆಯಲ್ಲಿ ಈ ವಾರ ನಾಮಿನೇಟ್ ಆದವ್ರು ಯಾರು..? appeared first on News First Kannada.

Source: newsfirstlive.com

Source link