ರಣರಂಗವಾದ ಬಿಗ್‌ಬಾಸ್​ ಮನೆ. ಇಲ್ಲಿ ಸೋತವರಿಗಿಂತ ಗೆದ್ದವರಲ್ಲಿಯೇ ಮನಸ್ತಾಪ ಭುಗಿಲೆದ್ದಿದೆ. ಕುಚುಕು ಗೆಳೆಯರ ನಡುವೆ ಬಿರುಕು ಮೂಡಿದ್ದು, ​ಮನೆಯವರಿಗೆ ಆಟದ ಹೀಟ್ ಬಿಸಿ ಮುಟ್ಟಿಸಿದೆ.

ಬಿಗ್‌ಬಾಸ್​ ನೀಡಿದ್ದ ಟಾಸ್ಕ್​ನಲ್ಲಿ ಮಂಜು ಪಾವಗಡ ನೇತೃತ್ವದ ತಂಡ ಕ್ವಾಟ್ಲೆ ಕಿಲಾಡಿಗಳು ಹಾಗೂ ಅರವಿಂದ ಕೆ.ಪಿ ನೇತೃತ್ವದ ತಂಡ ಸೂರ್ಯ ಸೇನೆ ಟಫ್​ ಫೈಟ್​ ನೀಡಿ ತಲಾ ಮೂರು ಸ್ಟಾರ್​ಗಳನ್ನು ಪಡೆದು ಸಮ ಬಲ ಸಾಧಿಸಿದ್ದವು. ಹೀಗಾಗಿ ಬಿಗ್​ ಬಾಸ್​ ನಿನ್ನೆ ತಾರಾಬಲದ ಕೊನೆಯ ಟೈ ಬ್ರೇಕರ್​ ಟಾಸ್ಕ್ ​ನೀಡಿದ್ದರು. ಇದ್ರಲ್ಲಿ ಗೆದ್ದ ತಂಡ ಕ್ಯಾಪ್ಟನ್​ಶಿಪ್​ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇದ್ದಿದ್ದರಿಂದ ಎರಡು ತಂಡಗಳು ಗೆಲ್ಲಲೇಬೇಕು ಎಂದು ಪಣ ತೊಟ್ಟು ತಾ ಮುಂದು ನಾ ಮುಂದು ಎಂದು ಆಟ ಆಡಿದ್ರು.

ಜಾರಿ ಗೆದ್ದೆ ಆಟದಲ್ಲಿ ಸ್ವಲ್ಪ ಯಾಮಾರಿದ್ರೂ ಬಿಗ್​ ಬಾಸ್​ ಫೌಲ್​ ಎಂದುಬಿಡ್ತಿದ್ರು. ಇದೇ ನೋಡಿ ಬಿಗ್​ ಮನೆಯ ಕುಚಿಕುಗಳೆಂದೇ ಫೇಮಸ್​ ಆದ ಪ್ರಶಾಂತ್​ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರ ಮಧ್ಯ ಬಿರುಕು ಮೂಡಲು ಕಾರಣ.

ಈ ಆಟದಲ್ಲಿ ಸೂರ್ಯ ಸೇನೆ ಗೆದ್ದಿದ್ದೇನೊ ನಿಜ. ಆದ್ರೆ ಈ ಖುಷಿಗಿಂತ ಅಸಮಾಧಾನದ ಅತೀರೇಕ ಜೋರಾಗಿತ್ತು. ಇಲ್ಲಿ ಶಮಂತ್​ ಪದೇ ಪದೇ ಫೌಲ್​ ಮಾಡ್ತಿದ್ದನ್ನು ಕಂಡ ಚಂದ್ರಚೂಡ್​ ಬಜರ್​ ಆಗಿದ್ದನ್ನು ಮರೆತು ಪಿತ್ತ ನೆತ್ತಿಗೇರಿಸಿಕೊಂಡು ಶಮಂತ್​​ಗೆ ಫೌಲ್​ ಮಾಡ್ಬೇಡ ಎಂದು ಧ್ವನಿ ಏರಿಸಿ ಮಾತನಾಡ್ತಾರೆ. ಇದಕ್ಕೆ ಪ್ರಶಾಂತ್​ ಸುಮ್ನಿರಲಾರದೇ ಮಧ್ಯ ಬಾಯಿ ಹಾಕಿಬಿಡ್ತಾರೆ.

ಚಂದ್ರಚೂಡ್​: ಫೌಲ್​ ಮಾಡ್ಬೇಡ್​ ಶಮಂತ್​.
ಪ್ರಶಾಂತ್​: ಹೋಗ್ಲಿ ಬಿಡು. ಆಲ್​ರೇಡಿ ಬಜರ್​ ಆಗಿದೆ. ಸುಮ್ನೆ ನಮ್ಮನಮ್ಮಲ್ಲಿ ಯಾಕೆ..
ಚಂದ್ರಚೂಡ್​: ಏ ನಾನ್​ ನಿಂಗ್​ ಹೇಳಿಲ್ಲ ಗುರು. ಪದೇ ಪದೇ ಎಲ್ಲದಕ್ಕೂ ಮಧ್ಯ ಬರಬೇಡ. ಅವನು ಮಾತಾಡ್ತಾನೆ. ಮೂರು ಸಾರಿ ಫೌಲ್​ ಆಯಿತು. ಅದ್ಕೆ ಹೇಳ್ತಿದೀನಿ. ನೀನೇನು ಅವನ ವಕ್ತಾರಾನಾ..ಎಲ್ಲದಕ್ಕೂ ಮಧ್ಯ ಬರಬೇಡ.
ಪ್ರಶಾಂತ್​: ಬಜರ್​ ಆದ್ಮೇಲೆ ಫೌಲ್​ ಅಂದ್ರೆ ಏನ್​ ಅರ್ಥ. ಎಲ್ಲದಕ್ಕೂ ಕೊಂಕು ತಗಿಬೇಡ. ಬಜರ್​ ಆದ್ಮೇಲೆ ಮಾತಾಡೋದು, ಏನೋ ನಾನ್​ ಕರಕ್ಟ್​ ಆಗಿ ಆಡಿದೀನಿ ಅನ್ನೋ ಥರಾ. ಸುಮ್ನಿರಪ್ಪಾ ನೀನ್​ ಪಂಟ್ರ್​ ಅಂತಾ ಗೊತ್ತು.
ಚಂದ್ರಚೂಡ್​: ನಾನ್​ ಪಂಟ್ರ್​ ಆದ್ರೆ ನೀನು ಇನ್ನೊಂದು. ಮುಚ್ಕೊಂಡು ಇರಪ್ಪಾ. ಕ್ಯಾಪ್ಟನ್​ ಇದಾನೆ ತಾನೆ ಅವನು ಹೇಳ್ತಾನೆ. ನೀನೆನ್​ ಹೇಳೋದು. ನೀನ್​ ಕಿತ್ಕೋತಿಯಾ. ಟೀಮ್​ಗೆ ಒಳ್ಳೆದಾಗ್ಲಿ ಅಂತಾ ನಾನು ಹೇಳಿದ್ದು.
ದಿವ್ಯಾ: ನಿನ್ನೆ ನೀವು ಟಾಸ್ಕ್​ಲ್ಲಿ ತಪ್ಪು ಮಾಡಿದಾಗ ನಾವೇನಾದ್ರು ಹೇಳಿದ್ವಾ..ಬಿಟ್ ಬಿಡಿ.

ಶಮಂತ್​ ಚಂದ್ರಚೂಡ್​ ಅವರಿಗೆ ನೀವು ಹೇಳಿದ್ದು ಸರಿ ಇರಲಿಲ್ಲ ಬಜರ್ ಆದ್ಮೇಲೆ ಹೇಳೋ ಅವಶ್ಯಕತೆ ಇರಲಿಲ್ಲ. ಇಲ್ಲಿಗೆ ಬಿಟ್ಟು ಬಿಡಿ ಎನ್ನುತ್ತಾರೆ.

ನಂತರ ಮುಂದುವರೆದು ಚಂದ್ರಚೂಡ್ ಅವರು ಶಮಂತ್​ಗೆ, ಅದನ್ನು ನೀನೇ ಹೇಳು. ಬೇರೆಯವರೆಲ್ಲಾ ಯಾಕೆ ಹೇಳ್ತಾರೆ. ನಿಂದೇ ಆದ ಐಡೆಂಟಿಟಿ ಇಲ್ವಾ. ನನಗೆ ಆ ಟೀಮ್​ ಗೆದ್ದು ಕ್ಯಾಪ್ಟನ್​ ಆಗ್ಬಾರ್ದು ಅಷ್ಟೇ ಎನ್ನುತ್ತಾರೆ. ಅಷ್ಟರಲ್ಲಿ ಮತ್ತೆ ಪ್ರಶಾಂತ್​ ಅವರ ಎಂಟ್ರಿ ಆಗುತ್ತದೆ. ನಂಗೆ ಬಜರ್​ ಆಗಿದ್ದು ಗೊತ್ತಿಲ್ಲ ಎಂದು ವಿವರಿಸುತ್ತಾ ಕೊಂಕು ಅಂತಾ ಹೇಳ್ತಿಯಾ ಹಂಗಂದ್ರೆ ಏನ್​ ಅರ್ಥ ಎನ್ನುತ್ತಾರೆ. ಪ್ರಶಾಂತ್​, ನಿನ್ನ ಜೊತೆ ಮಾತಾಡಿ ವ್ಯರ್ಥ ಎಂದು ಎದ್ದು ಹೋಗುತ್ತಾರೆ.

ಇತ್ತ ತಂಡ ಗೆದ್ದ ಖುಷಿಯನ್ನು ಸಂಭ್ರಮಿಸಲಾಗದೇ, ಇವರಿಬ್ಬರನ್ನೂ ಸಮಾಧಾನ ಮಾಡಲಾಗದೇ ಪೇಚಿಗೆ ಸಿಲುಕುತ್ತದೆ. ಗೆಳೆಯರ ನಡುವೆ ಅಸಮಾಧಾನದ ಕಿಡಿ ಹೊತ್ತಿದ್ದು, ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ನೋಡಬೇಕಿದೆ.

The post ಬಿಗ್​ಬಾಸ್​ ಮನೆಯಲ್ಲಿ ಕಿತ್ತಾಡಿಕೊಂಡ ಕುಚಿಕುಗಳು.. ಶಮಂತ್ ಹೆಸರು ತಳುಕು appeared first on News First Kannada.

Source: newsfirstlive.com

Source link