ಬಿಗ್‌ಬಾಸ್​ ಸದಸ್ಯರ ಕಿತ್ತಾಟ ಇಲ್ಲಿಗೇ ಮುಗಿಯುವಂತೆ ಕಾಣುತ್ತಿಲ್ಲ. ಫಸ್ಟ್‌ ಇನ್ನಿಂಗ್ಸ್‌ನಲ್ಲಿ, ತುಪ್ಪ, ಮೊಟ್ಟೆ ವಿಚಾರಕ್ಕೆ ಜಗಳವಾಗಿತ್ತು. ಸೆಕೆಂಡ್‌ ಇನ್ನಿಂಗ್ಸ್‌ ನಾನ್‌ವೆಜ್‌ಗೆ ಅಸಮಾಧಾನದ ಹೊಗೆಯಾಡ್ತಿದೆ. ನಿಧಿ ಹಾಗೂ ಪ್ರಶಾಂತ್​ ಸಂಬರಗಿ, ಚಂದ್ರಚೂಡ್ ಅವರ ಭಿನ್ನಾಭಿಪ್ರಾಯಗಳ ಬಗ್ಗೆ ಗೊತ್ತೇ ಇದೆ. ಅದೇ ವಿಚಾರದಿಂದ ಪ್ರಶಾಂತ್​ ಹಾಗೂ ಚಂದ್ರಚೂಡ್ ಊಟ ಬಿಟ್ಟಿದ್ದಾರೆ.

ಹೌದು, ನಿಧಿ ಅವರಿಗೆ ಸಿಕ್ಕ ಸ್ಪೆಷಲ್​ ಕೂಪನ್​ನಲ್ಲಿ ಮಟನ್​ ಕೇಳಿದ್ದರು. ಇದಕ್ಕೆ ಬಿಗ್​ ಬಾಸ್​ ಕೂಡ ಅಸ್ತು ಎಂದು ಮಟನ್ ನೀಡಿದ್ದರು. ಇದು ಕೆಲವರ ಸಂತೋಷಕ್ಕೆ ಕಾರಣವಾದ್ರೆ, ಇನ್ನೂ ಕೆಲವರ ಮುನಿಸಿಗೆ ಕಾರಣವಾಯಿತು. ನಿಧಿ ತಾವೇ ಕೈಯಾರೇ ಬಾಯಲ್ಲಿ ಮಟನ್​ ಏನೋ ಮಾಡಿದ್ರು, ಆದ್ರೆ ನೆಮ್ಮದಿಯಾಗಿ ಮನೆಯವರೆಲ್ಲ ಕೂತು ಊಟ ಮಾಡಲು ಸಾಧ್ಯವಾಗಲಿಲ್ಲ.

ಮಟನ್​ ರೆಡಿಯಾಗುತ್ತಿರುವ ಗ್ಯಾಪ​ಲ್ಲಿ ಚಂದ್ರಚೂಡ್​ ಅವರು ​ ರೈಸ್​ ಬಗ್ಗೆ ಶುಭಾ ಅವರ ಹತ್ತಿರ ಕೇಳಿದ್ರು, ಇದನ್ನು ಕೇಳಿಸಿಕೊಂಡ ನಿಧಿ ಸುಮ್ನಿರಲಾರದೇ ರಸಂ ಮತ್ತು ರೈಸ್​ ಇದೆ ಕೊಡಿ ಅಂದು ಬಿಟ್ಟರು. ಇದನ್ನು ಕೇಳಿದ ಚಂದ್ರಚೂಡ್ ಬೇಸತ್ತು, ಅಲ್ಲಿಂದ ಬಂದು ಕುಚುಕು ಗೆಳೆಯ ಪ್ರಶಾಂತ್​ ಅವರ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ವೈಷ್ಣವಿ ಊಟಕ್ಕೆ ಕರೆಯಲು ಬರುತ್ತಾರೆ. ಇದಕ್ಕೆ ಉತ್ತರಿಸಿದ ಚಂದ್ರಚೂಡ್, ನಾನ್​ ಏನು ನಾನ್​ವೆಜ್​ ತಿಂದಿಲ್ವಾ. ನಿಧಿ ಅವರಿಗೆ ಅದನ್ನು ಹಂಚಿಕೊಳ್ಳಲು ಇಷ್ಟವಿಲ್ಲ ಅನ್ಸುತ್ತದೆ ಎಂದು ಹೇಳಿ, ನಾನ್​ ಈಗ ಊಟ ಮಾಡಲ್ಲ, ಬೇಕಿದ್ರೆ ನೀವು ಮಾಡಿ ಎನ್ನುತ್ತಾರೆ. ಇದಕ್ಕೆ ಪ್ರಶಾಂತ್​ ಅವರು ಕೂಡ ಧ್ವನಿಗೂಡಿಸುತ್ತಾರೆ. ಈ ಮಟನ್​ ಪುರಾಣ ಇಷ್ಟಕ್ಕೆ ನಿಲ್ಲದೇ ಶುಭಾ ಅವರವರೆಗೂ ದೂರು ಹೋಗುತ್ತದೆ.

The post ಬಿಗ್​ಬಾಸ್​ ಮನೆಯಲ್ಲಿ ಮಟನ್​ ಪುರಾಣ: ಊಟ ಬಿಟ್ಟ ಕುಚಿಕುಗಳು appeared first on News First Kannada.

Source: newsfirstlive.com

Source link