ಈ ಬಾರಿಯ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಅದ್ಭುತವಾಗಿ ಆಟವಾಡಿ ಮನ ಗೆದ್ದ ನಟಿ ಶುಭ ಪೂಂಜಾ ಸದ್ಯ ಕಾಡು ಸೇರಿದ್ದಾರೆ. ಅರೇ ಈ ಲಾಕ್​ಡೌನ್​ ಟೈಮ್​​​ನಲ್ಲಿ ಶುಭ ಪೂಂಜಾಗೆ ಏನಾಯ್ತು? ಅದ್ಯಾಕೆ ಮನೆ ಬಿಟ್ಟು ಕಾಡು ಸೇರಿದ್ರು ಅನ್ನೋದಕ್ಕೆ ಉತ್ತರ ತ್ರಿದೇವಿ.ತ್ರಿದೇವಿ ಶುಭ ಪೂಂಜಾ ನಟನೆಯ ಮಹಿಳಾ ಪ್ರಧಾನ ಸಿನಿಮಾ. ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಇದೇ ಮೊದಲ ಬಾರಿಗೆ ನಟಿ ಶುಭ ಪೂಂಜಾ ಆ್ಯಕ್ಷನ್ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅಂದ್ಹಾಗೇ ಸದ್ಯ ಈ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ದೇವಿ ಅವತಾರದಲ್ಲಿ ನಟಿ ಶುಭ ಪೂಂಜಾ, ಮಿನಿ ಕೂಪರ್​ ಕಾರಿನಲ್ಲಿ ಜಾಲಿ ರೈಡ್​ ಹೊರಟಿದ್ದಾರೆ.

ತ್ರಿದೇವಿ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್. ಮೂರು ಜನ ಹುಡುಗಿಯರು ಅಚಾನಕ್ ಕಾಡಿಗೆ ಸೇರಿದಾಗ ಏನೆಲ್ಲ ಆಗುತ್ತೆ ಅನ್ನೋದನ್ನ ನಿರ್ದೇಶಕ ಅಶ್ವಿನ್ ಎ.ಮ್ಯಾಥಿವ್ಸ್​​ ಈ ಸಿನಿಮಾದ ಮೂಲಕ ತೋರಿಸಿ ಕೊಡಲಿದ್ದಾರೆ. ಟ್ರೈಲರ್ ಸಖತ್ ಇಂಪ್ರೆಸಿವ್ ಆಗಿದ್ದು ಇದೀಗ ನೋಡುಗರನ್ನ ಗಮನ ಸೆಳೆಯುತ್ತಿದೆ.

ಶುಭ ಪೂಂಜಾ ಜೊತೆ ಸಂಧ್ಯಾ ಲಕ್ಷ್ಮಿ ನಾರಾಯಣ್ , ಜೋತಿಸ್ನಾ ರಾವ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಎಲ್ಲರ ನಟನೆ ಮತ್ತು ಸಾಹಸ ದೃಶ್ಯಗಳು ಅದ್ಭುತವಾಗಿ ಟ್ರೈಲರ್​ನಲ್ಲಿ ಕಾಣಿಸುತ್ತಿದೆ. ನಿರ್ದೇಶಕ ಅಶ್ವಿನ್ , ಜಯದೇವ್ ಮೋಹನ್ ಮುಂತಾದವರು ತ್ರಿದೇವಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಟ್ರೆಡ್ ಈಗೋ ಎಂಟರ್​​ಟೈನ್ಮೆಂಟ್ ಬ್ಯಾನರ್​ನಡಿಯಲ್ಲಿ ತ್ರಿದೇವಿ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಲಾಕ್​ಡೌನ್ ಸಡಿಲಿಕೆಯಾಗಿ ಥ್ರಿಯೆಟರ್​ಗಳು ಓಪನ್ ಆದಾಕ್ಷಣ, ಈ ಮೂರು ದೇವಿಗಳು ಅಂದ್ರೆ ‘ತ್ರಿದೇವಿ’ಗಳು ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲಿದ್ದಾರೆ.

The post ಬಿಗ್​ಬಾಸ್​ ಮನೆ ಆಚೆ ಬಂದು ಕಾಡು ಸೇರಿದ ಶುಭ ಪೂಂಜಾ; ಇದೇನಿದು ಹೊಸ ಅವತಾರ? appeared first on News First Kannada.

Source: newsfirstlive.com

Source link