ಬಿಗ್​ಬಾಸ್ ಮನೆಯಲ್ಲಿ ಶಮಂತ್ ಕಣ್ಣೀರ ಕಥೆ: ಏನಾಯ್ತು..?

ಬಿಗ್​ಬಾಸ್ ಮನೆಯಲ್ಲಿ ಶಮಂತ್ ಕಣ್ಣೀರ ಕಥೆ: ಏನಾಯ್ತು..?

ಬಿಗ್​ ಬಾಸ್​ ಟಾಸ್ಕ್​ ನೀಡಿದ್ದೇ ತಡ ಒಬ್ಬರಲ್ಲ ಒಬ್ಬರು ಕಣ್ಣೀರು ಹಾಕುತ್ತಲೇ ಇದ್ದಾರೆ. ಈಗ ಶಮಂತ್​ ಸರದಿ. ಅದ್ಯಾಕೋ ಶಮಂತ್​ ತುಸು ನೊಂದುಕೊಂಡಿದ್ದಾರೆ. ಅಗಿದ್ದೆಲ್ಲ ಅವನಿಂದಲೇ ಎನ್ನುವಂತೆ ಅವರ ಟೀಮ್​ನ ಸದಸ್ಯರು ಕೂಡ ಅವರೆಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ತಾರಾಬಲದ ಹಾಡು ಆಟ ಆಡು ಟಾಸ್ಕ್​ನಲ್ಲಿ ಅರವಿಂದ್ ಕೆ.ಪಿ ನೇತೃತ್ವದ ತಂಡ ಸೂರ್ಯ ಸೇನೆಗೆ ಗೆಲ್ಲುವ ಎಲ್ಲಾ ಚಾನ್ಸ್​ ಇತ್ತು. ಆದ್ರೆ ಒಂದು ಸಣ್ಣ ಎಡವಟ್ಟಿನಿಂದ ಟಾಸ್ಕ್​ ಕೈತಪ್ಪಿತು. ಇದು ದಿವ್ಯಾ ಉರುಡುಗ ಅವರ ಬೇಸರಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಟಾಸ್ಕ್​ ಸೋಲಲು ಶಮಂತ್​ ಕಾರಣ ಎಂದು ಕೆಲವರು ದೂಷಿಸುತ್ತಾರೆ.

ಇನ್ನು, ನಿನ್ನೆ ನಡೆದ ರಿಂಗಾಯಣ ಟಾಸ್ಕ್​ನಲ್ಲಿ ಬಾಲನ್ನು ಎರಡು ಸೆಕೆಂಡ್‌ ರಂಧ್ರದಲ್ಲಿಯೇ ಇರಿಸಿಕೊಳ್ಳಬೇಕಿತ್ತು. ಆದ್ರೆ, ಶಮಂತ್‌ ಹಾಗೂ ಅರವಿಂದ್ ಈ ಕಡೆ ಗಮನ ಕೊಟ್ಟಿರಲಿಲ್ಲ. ದಿವ್ಯಾ ಮತ್ತು ಉಳಿದ ಸದಸ್ಯರು ಹಲವು ಬಾರಿ ಹೇಳಿದರು ಅರವಿಂದ್ ಹಾಗೂ ಶಮಂತ್‌ ತಲೆಕೆಡಿಸಿಕೊಳ್ಳಲಿಲ್ಲ. ಇದರ ಪರಿಣಾಮ ಟಾಸ್ಕ್ ಸೋತರು. ಇದು ಇನ್ನೂ ಸದಸ್ಯರನ್ನು ಕೆರಳಿಸಿತು. ಇಲ್ಲಿ ಕ್ಯಾಪ್ಟನ್​ಶಿಪ್​ ನಿಭಾಯಿಸುವಲ್ಲಿ ಅರವಿಂದ್ ಕೊಂಚ ಎಡವಿದ್ರಾ ಗೊತ್ತಿಲ್ಲ. ಆದ್ರೆ ಇದು ಇಬ್ಬರ ಕಣ್ಣೀರಿಗೆ ಕಾರಣವಾಯಿತು. ಅತ್ತ ಅರವಿಂದ ತಮ್ಮ ನೋವು ತೊಡಿಕೊಂಡರೆ ಇತ್ತ ಶಮಂತ್​ ಕಣ್ಣೀರಿಡುತ್ತಾರೆ.

The post ಬಿಗ್​ಬಾಸ್ ಮನೆಯಲ್ಲಿ ಶಮಂತ್ ಕಣ್ಣೀರ ಕಥೆ: ಏನಾಯ್ತು..? appeared first on News First Kannada.

Source: newsfirstlive.com

Source link