ಬಿಗ್​ಬಾಸ್ ಮನೆಗೆ ಮುಂದಿನ ಕ್ಯಾಪ್ಟನ್​ ಯಾರಾಗಬೇಕೆಂಬ ಕ್ಯಾಪ್ಟನ್ಸಿ ಆಟವೆಲ್ಲಾ ಮುಗಿದ ಬಳಿಕ ಪ್ರಶಾಂತ್​ ಸಂಬರಗಿ, ಚಂದ್ರಚೂಡ್​ ಬಳಿ ನೀವು ಡಿಸಿಷನ್​ ಸರಿಯಾಗಿ ತೆಗೆದುಕೊಳ್ಳಲಿಲ್ಲ.. ನಿಮ್ಮ ಡಿಸಿಷನ್​ ಸರಿಯಿದ್ದಿದ್ದರೆ ನನಗೆ ಕ್ಯಾಪ್ಟನ್ಸಿ ಟಾಸ್ಕ್​ ಆಡುವ ಅವಕಾಶವಿತ್ತು.. ಟಾಸ್ಕ್​ ಮುಗಿದ ಮೇಲೆ ಅಷ್ಟೆಲ್ಲಾ ಚರ್ಚೆ ಆಯ್ತು ನೀವು ಇನ್ನೊಂದು ಸಲ ಆಟ ಆಡಿಸಿದ್ರೆ ಏನಾಗ್ತಾಯಿತ್ತು ಅಂತಾ ಕೇಳಿದ್ರು.
ಚಕ್ರವರ್ತಿ.. ನೀನು ಯಾಕೆ ಟಾಸ್ಕ್​ ಮುಗಿದ ತಕ್ಷಣ ಕೇಳಲಿಲ್ಲ.. ನೀನೂ ಕೂಡಾ ಪ್ರಿಯಾಂಕ ಅವರ ಹಾಗೆ ಆಗಲೇ ಪ್ರಶ್ನೆ ಮಾಡಬೇಕಿತ್ತು.. ಈಗ ಹೇಳಿದ್ರೆ ಏನು ಉಪಯೋಗ.? ಅಂತಾ ಹೇಳಿದ್ರು.

ಅದಕ್ಕೆ ಪ್ರಶಾಂತ್​ ಸಂಬರಗಿ.. ನಾನು ಪ್ರಥಮ ದರ್ಜೆಯ ಡಿಸಿಷನ್​ಗೆ ತಲೆ ಬಾಗ್ತೀನಿ.. ಬೆಲೆ ಕೊಡ್ತೀನಿ.. ಆದ್ರೆ ನೀನು ಹೇಗೆ ವೈಷ್ಣವಿ ಹಾಗೂ ಲ್ಯಾಗ್​ ಮಂಜು ಡಿಸಿಷನ್​ಗೆ ಓಕೆ ಅಂತ ಹೇಳ್ದೆ.. ನೀನು ಇನ್ನೊಂದು ಸಲ ಆಡಿಸೋಣ ಅಂತಾ ನಿನ್ನ ಗೆಳೆಯನಿಗಾಗಿ ಸ್ಟ್ಯಾಂಡ್ ತಗೋಬೇಕಿತ್ತು ಅಂತಾ ಹೇಳ್ತಾರೆ. ಈ ಎಲ್ಲಾ ಚರ್ಚೆಗಳು ಹಾಗೇ ಮುಂದುವರೆದಿದ್ದು..ಪ್ರಶಾಂತ್..​ ಮಂಜು ಇದ್ದಾಗಲೇ ಗೊತ್ತಿತ್ತು ಅಲ್ಲಿ ನನಗೆ ಅನ್ಯಾಯ ಅಗತ್ತೆ ಅಂತಾ ನನ್ನ ವಿರುದ್ದ ಪಿತುರಿ ಆಗತ್ತೆ ಅಂತಾ ಹೇಳ್ತಾರೆ.

ಯಾವಾಗ್ಲೂ ಸಾಮಾಜಿಕ ನ್ಯಾಯ ಅಂತಾ ಹೇಳ್ತಿಯಾ.. ಒಂದು ನ್ಯಾಯ ಕೊಡಿಸಿಲ್ಲ

ಅದಕ್ಕೆ ಚಕ್ರವರ್ತಿ.. ನೀನು ಪ್ರಿಯಾಂಕ ಸ್ಟ್ರಾಂಗ್​ ಆಗಿ ನಿಂತಿದ್ರೆ ಅಲ್ಲಿ ಡಿಸಿಷನ್​ ಚೇಂಜ್ ಆಗ್ತಾಯಿತ್ತು ಅಂತಾ ಹೇಳಿದಾಗ, ಸಂಬರಗಿ.. ನೀನು ಅಲ್ಲಿ ಇದ್ದೆ ತಾನೆ.. ಯಾವಾಗ್ಲೂ ಸಾಮಾಜಿಕ ನ್ಯಾಯ ಅಂತಾ ಹೇಳ್ತಿಯಾ.. ಒಂದು ನ್ಯಾಯ ಕೊಡಿಸಿಲ್ಲಾ ಅಂತಾ ಹೇಳ್ತಾರೆ.
ನೀವು ಎಷ್ಟು ಸಲ ಡಿಸಿಷನ್​ ಚೇಂಚ್​ ಮಾಡಿದ್ರಿ.. ಮೊದಲು ಪ್ರಶಾಂತ್​ ಫಸ್ಟ್​ ಪ್ರಿಯಾಂಕ ಹಾಗೂ ಅರವಿಂದ್​ ಮತ್ತೆ ಆಡ್ಬೇಕು ಅಂತ ಹೇಳಿ ಯಾಕೆ ಮಾತು ಚೇಂಜ್​ ಮಾಡಿದ್ರಿ..? ಅಂತ ಕೇಳಿದಾಗಾ ಚಕ್ರವರ್ತಿ.. ನಾನು ಪ್ರಶಾಂತ್​ ಫಸ್ಟ್​ ಅಂತಾ ಹೇಳಿದಾಗ ವೈಷ್ಣವಿ ಬಂದು ಟ್ರ್ಯಾಕ್​ ಅಲ್ಲಿ ಹೊಗಬೇಕು ಅಂತ ರೂಲ್​ ಬುಕ್​ನಲ್ಲಿ ಹೇಳಿಲ್ಲ.. ಅದರ ಪ್ರಕಾರ ಅರವಿಂದ್ ಫಸ್ಟ್​ ಅಂತಾ ಹೇಳಿದ್ರು ಅಂತಾ ಹೇಳ್ತಾರೆ..
ಬಳಿಕ ಪ್ರಶಾಂತ್..​ ಅರವಿಂದ್​ ನಿಜವಾದ ಸ್ಪೋರ್ಟ್​ಮ್ಯಾನ್ ಶಿಪ್​ ಇದಿದ್ರೆ ಅವ್ನು ಇನ್ನೊಂದು ಸಲ ಆಡುವ ಅಂತ ಹೇಳ್ತಾಯಿದ್ದ ಅಂತ ಹೇಳ್ತಾರೆ.

ಕ್ಯಾಪ್ಟನ್ಸಿ ಟಾಸ್ಕ್​ ಆಡುವ ಹಕ್ಕನ್ನ ಕಿತ್ತುಕೊಂಡಿದ್ದಾರೆ

ನಂತ್ರ ಪ್ರಶಾಂತ್​.. ಕ್ಯಾಮರಾ ಮುಂದೆ ನಿಂತು.. ನನ್ನನ್ನ ವಿಜೇತ ಎಂದು ಮತ್ತೆ ಚರ್ಚೆ ಮಾಡಿ ಮತ್ತೆ ನಾನು ಸೋತಿದಿನಿ ಎಂದು ಹೇಳಿದ್ರು. ಒಂದು ಷಡ್ಯಂತ್ರದ ರೂಪದಲ್ಲಿ ನನ್ನನ್ನು ಎರಡನೇ ಸ್ಥಾನದಲ್ಲಿ ನಿಲ್ಲಿಸಿ.. ಕ್ಯಾಪ್ಟನ್ಸಿ ಟಾಸ್ಕ್​ ಆಡುವ ಹಕ್ಕನ್ನ ಕಿತ್ತುಕೊಂಡಿದ್ದಾರೆ.. ಹಾಗಾಗಿ ಇದರ ವಿರುದ್ಧವಾಗಿ ಹಾಗೂ ಪ್ರತಿಭಟನೆಯಾಗಿ ಈಗಿನಿಂದ ನಾನು 36 ಗಂಟೆಗಳ ಕಾಲ ಉಪವಾಸ ಇರ್ತೀನಿ ಅಂತಾ ಬಿಗ್​ಬಾಸ್​ ಬಳಿ ಹೇಳ್ತಾರೆ.

The post ಬಿಗ್​ಬಾಸ್ ಮನೆಯಲ್ಲಿ ಸಂಬರಗಿ ವಿರುದ್ಧ ನಡೆಯುತ್ತಿದೆಯಂತೆ ಷಡ್ಯಂತ್ರ appeared first on News First Kannada.

Source: newsfirstlive.com

Source link